ಪುನೀತ್ ನಿರ್ಮಾಣದ 'ಲಾ' ಸಿನಿಮಾ ಟ್ರೇಲರ್ ಬಿಡುಗಡೆ
ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ನಿಂದ ಹೊರಬರುತ್ತಿರುವ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗೋವಿಂದ ನಿರ್ಮಾಪಕರಾಗಿರುವ 'ಲಾ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.
ಪುನೀತ್ ರಾಜ್‌ಕುಮಾರ್ ನಿರ್ಮಾಣ ಎಂಬುದನ್ನು ಬದಿಗಿಟ್ಟರೂ ಸಹ ಹಲವಾರು ಕಾರಣಗಳಿಗೆ ಈ ಸಿನಿಮಾ ಕುತೂಹಲ ಕೆರಳಿಸಿದೆ.
ನೇರವಾಗಿ ಒಟಿಟಿಗೆ ಬಿಡುಗಡೆ ಆಗುತ್ತಿರುವ ಕನ್ನಡದ ಮೊದಲ ಸಿನಿಮಾ ಲಾ ಆಗಿದ್ದು, ಪ್ರಜ್ವಲ್ ದೇವರಾಜ್ ಮಡದಿ ರಾಗಿಣಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿದ ಪುನೀತ್ ರಾಜ್‌ಕುಮಾರ್
ಇಂದು ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಕುತೂಹಲವನ್ನು ಹೆಚ್ಚು ಮಾಡುವಂತಿದೆ ಟ್ರೇಲರ್. ಸಿನಿಮಾ ನೋಡಬೇಕೆಂಬ ಹಪಹಪಿಯನ್ನು ಹೆಚ್ಚು ಮಾಡುತ್ತದೆ ಟ್ರೇಲರ್.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ
ಟ್ರೇಲರ್ ನೋಡಿದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಕೋರ್ಟ್ ರೂಂ ಡ್ರಾಮಾ ಸಿನಿಮಾ ಎಂಬುದು ಮನದಟ್ಟಾಗುತ್ತದೆ. ಕೊಲೆ, ಪೊಲೀಸ್, ಕುಟುಂಬ, ಸೆಂಟಿಮೆಂಟ್, ವಕೀಲ, ನ್ಯಾಯಾಲಯ, ಸಾಮಾಜಿಕ ಕಳಕಳಿ, ಹೋರಾಟ, ವ್ಯವಸ್ಥೆಯ ಹುಳುಕು ಎಲ್ಲದರ ಮೇಲೂ ಸಿನಿಮಾ ಬೆಳಕು ಚೆಲ್ಲಿರುವುದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ.

ಎಲ್ಲಾ ಪಾತ್ರಗಳಿಗೆ ಸಮಾನ ಪ್ರಾಮುಖ್ಯತೆ
ಟ್ರೇಲರ್ ನೋಡಿದರೆ ಸಿನಿಮಾದಲ್ಲಿನ ಎಲ್ಲಾ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ಇರುವುದು ಗೊತ್ತಾಗುತ್ತಿದೆ. ರಾಗಿಣಿ ಜೊತೆಗೆ ಅವಿನಾಶ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಇನ್ನೂ ಹಲವು ಪಾತ್ರಗಳು ಟ್ರೇಲರ್‌ನಲ್ಲಿ ಕಾಣಿಸಿಕೊಳ್ಳುತ್ತವೆ.

ಅಪ್ಪ-ಮಗಳ ಭಾವುಕ ಕತೆ
ಸಿನಿಮಾದಲ್ಲಿ ಥ್ರಿಲ್ಲರ್ ಕತೆಯ ಜೊತೆಗೆ ಅಪ್ಪ-ಮಗಳ ಭಾವನಾತ್ಮಕ ಎಳೆಯೂ ಇರುವ ಸೂಚನೆ ನೀಡುತ್ತದೆ ಟ್ರೇಲರ್. ರಘು ಸಮರ್ಥ್ ನಿರ್ದೇಶನದ ಈ ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಜುಲೈ 17 ರಂದು ಬಿಡುಗಡೆ ಆಗಲಿದ.


Click it and Unblock the Notifications