Leo OTT: ಲೀಕಾಸುರರ ಏಟಿಗೆ ಥಂಡಾ ಹೊಡೆದ 'ಲಿಯೋ' ತಂಡ: ತಿಂಗಳಿಗೂ ಮೊದ್ಲೆ ಓಟಿಟಿಯಲ್ಲಿ ಸ್ಟ್ರೀಮಿಂಗ್

ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ 3ನೇ ವಾರಕ್ಕೆ ಕಾಲಿಟ್ಟಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. 'ಲಿಯೋ' ಕಲೆಕ್ಷನ್ ರಿಪೋರ್ಟ್ ಫೇಕ್ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಿರ್ಮಾಪಕರೇ ಕಲೆಕ್ಷನ್ ಲೆಕ್ಕ ಕೊಟ್ಟು ಅಚ್ಚರಿ ಮೂಡಿಸುತ್ತಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಲಿಯೋ' ದಸರಾ ಸಂಭ್ರಮದಲ್ಲಿ ರಿಲೀಸ್ ಆಗಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಸೋತಿತ್ತು. ವಿಜಯ್ ಅಭಿಮಾನಿಗಳು ಮಾತ್ರ ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಇನ್ನು ಬಾಕ್ಸಾಫೀಸ್‌ನಲ್ಲಿ 'ಜೈಲರ್' ವರ್ಸಸ್ 'ಲಿಯೋ' ಪೈಪೋಟಿ ಕೂಡ ಶುರುವಾಗಿತ್ತು. ಹಾಗಾಗಿ ದಳಪತಿ ಸಿನಿಮಾ ಕಲೆಕ್ಷನ್ ಬಗ್ಗೆ ಭಾರೀ ಚರ್ಚೆ ನಡೆದಿದ್ದು ಸುಳ್ಳಲ್ಲ.

Leo HD version Leaked? ilayathalapathy Vijays film OTT release very soon

12 ದಿನಕ್ಕೆ 'ಲಿಯೋ' ಸಿನಿಮಾ 540 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. 3ನೇ ವಾರವೂ ಸಿನಿಮಾ ದಾಖಲೆಯ ಪ್ರದರ್ಶನ ಕಾಣುತ್ತಿದೆ ಎಂದು ಸೆವೆನ್ ಸ್ಕ್ರೀನ್ ಸ್ಟುಡಿಯೋ ಸಂಸ್ಥೆ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. 'ಲಿಯೋ' ಜೊತೆಗೆ ಕನ್ನಡ 'ಘೋಸ್ಟ್' ಹಾಗೂ ತೆಲುಗಿನ 'ಭಗವಂತ್ ಕೇಸರಿ' ಹಾಗೂ 'ಟೈಗರ್ ನಾಗೇಶ್ವರ ರಾವ್' ಸಿನಿಮಾಗಳು ರಿಲೀಸ್ ಆಗಿತ್ತು. ಆದರೆ 'ಲಿಯೋ' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು.

'ಕೈದಿ', 'ವಿಕ್ರಂ' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಲೋಕೇಶ್ ಕನಕರಾಜ್ ಈ ಬಾರಿ 'ಲಿಯೋ' ದಾಸ್ ಕತೆ ಹೇಳಿದ್ದಾರೆ. ಈ ಕತೆಯನ್ನು ಕೂಡ ತಮ್ಮ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಸೇರಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಕೊಂಚ ಮಟ್ಟಿಗೆ ಸದ್ದು ಮಾಡ್ತಿದೆ. ಇನ್ನು ಅಡ್ವಾನ್ಸ್‌ ಬುಕ್ಕಿಂಗ್ ಜೋರಾಗಿದ್ದ ಕಾರಣ ಮೊದಲ ದಿನವೇ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬರೋಬ್ಬರಿ 148 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಬಳಿಕ ನಿಧಾನವಾಗ ಕ್ರೇಜ್ ಕಮ್ಮಿ ಆಗಿತ್ತು. ಆದರೂ ಹಬ್ಬದ ವೀಕೆಂಡ್‌ನಲ್ಲಿ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದರು.

ತ್ರಿಶಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಅರ್ಜುನ್ ಸರ್ಜಾ, ಸಂಜಯ್ ದತ್ ಖಡಕ್ ರೋಲ್‌ಗಳಲ್ಲಿ ಅಬ್ಬರಿಸಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಬಹಳ ಅದ್ಧೂರಿಯಾಗಿ 'ಲಿಯೋ' ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಇಡೀ ಚಿತ್ರತಂಡ ತೇಲಾಡಿದೆ. ಇದೆಲ್ಲದರ ನಡುವೆ ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಚರ್ಚೆ ಶುರುವಾಗಿದೆ. ತಿಂಗಳಿಗೂ ಮೊದ್ಲೆ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ನೆಟ್‌ಫ್ಲಿಕ್ಸ್ ಸಂಸ್ಥೆ ಭಾರೀ ಮೊತ್ತಕ್ಕೆ 'ಲಿಯೋ' ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ನವೆಂಬರ್ 16ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಚರ್ಚೆ ಜೋರಾಗಿದೆ. ಅಂದರೆ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆಯುವ ಮುನ್ನವೇ 'ಲಿಯೋ' ಓಟಿಟಿಗೆ ಬಂದಂತೆ ಆಗುತ್ತಿದೆ. ಚಿತ್ರದ HD ಪ್ರಿಂಟ್ ಲೀಕ್ ಆಗಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನುವ ಮಾತುಗಳು ಕೇಳಿಬರ್ತಿದೆ. ಲೀಕಾಸುರರ ಆರ್ಭಟಕ್ಕೆ 'ಲಿಯೋ' ತಂಡ ಥಂಡಾ ಹೊಡೆದಿದೆ.

ದೊಡ್ಡ ದೊಡ್ಡ ಸಿನಿಮಾಗಳಿಗೆ ಪೈರಸಿ ದೊಡ್ಡ ಪೆಟ್ಟು ಕೊಡುತ್ತಿದೆ. ಸಿನಿಮಾ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಥಿಯೇಟರ್‌ ಪ್ರಿಂಟ್‌ಗಳು ಲೀಕ್ ಆಗುತ್ತಿದೆ. ಇನ್ನು ಕೆಲವೊಮ್ಮೆ HD ಪ್ರಿಂಟ್ ಕೂಡ ಬಂದು ಚಿತ್ರತಂಡಗಳಿಗೆ ದೊಡ್ಡ ತಲೆನೋವಾಗುತ್ತದೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿತ್ತು. ಆ ಸಿನಿಮಾ ಕೂಡ ತಿಂಗಳಿಗೂ ಮೊದ್ಲೆ ಓಟಿಟಿಗೆ ಬಂದಿತ್ತು. ಓಟಿಟಿಗೆ ಬಂದಮೇಲೂ ಥಿಯೇಟರ್‌ಗಳಲ್ಲಿ 'ಜೈಲರ್' ಸದ್ದು ಮಾಡಿತ್ತು. ಇನ್ನು 'ಲಿಯೋ' ಸಿನಿಮಾ ನವೆಂಬರ್ 16ಕ್ಕೆ ನೆಟ್‌ಫ್ಲಿಕ್ಸ್‌ಗೆ ಬರುತ್ತಾ? ಕಾದು ನೋಡಬೇಕಿದೆ.

More from Filmibeat

English summary
Leo OTT Release 16th November on Netflix;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X