ಡಿಸೆಂಬರ್ 23 ಚಿತ್ರಮಂದಿರಗಳಲ್ಲಿ ವೇದ ಆರ್ಭಟ; ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳಾವುವು?

List of films and series releasing on OTT on December 23

ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಆಗಿರುವ 2022ರ ಅಂತಿಮ ತಿಂಗಳ ಕೊನೆಯ ಎರಡು ಶುಕ್ರವಾರಗಳು ಬಾಕಿ ಇದ್ದು, ಈ ಅಂತಿಮ ವಾರಗಳಂದು ಬಿಡುಗಡೆಯಾಗುವ ಯಾವ ಚಿತ್ರಗಳು ಮೋಡಿ ಮಾಡಬಹುದು ಎಂಬ ಕುತೂಹಲ ಸಿನಿ ರಸಿಕರಲ್ಲಿ ಮೂಡಿತ್ತು. ಇನ್ನು ಇಂದು ( ಡಿಸೆಂಬರ್ 23 ) ತಿಂಗಳ ಮೂರನೇ ಶುಕ್ರವಾರದಂದು ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಕನ್ನಡದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ವೇದ ಚಿತ್ರ ತೆರೆ ಕಾಣುತ್ತಿದ್ದರೆ, ತೆಲುಗಿನಲ್ಲಿ ರವಿತೇಜಾ ಹಾಗೂ ಶ್ರೀಲೀಲಾ ನಟನೆಯ ಧಮಾಕಾ ಚಿತ್ರಗಳು ಬಿಡುಗಡೆಗೊಂಡಿವೆ.

ಇನ್ನು ಕಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗಗಳ ಹಲವು ಚಿತ್ರಗಳು ಇಂದು ಬಿಡುಗಡೆಗೊಳ್ಳುತ್ತಿದ್ದು, ಇವುಗಳ ಜತೆಗೆ ಓಟಿಟಿಯಲ್ಲೂ ಸಹ ಇಂದು ಹಲವಾರು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಈ ವರ್ಷ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು ಅಬ್ಬರಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಚಿತ್ರಗಳಲ್ಲಿ ಒಂದಾದ ಮಲಯಾಳಂನ 'ಜಯ ಜಯ ಜಯ ಜಯ ಹೇ' ಸೇರಿದಂತೆ ಇನ್ನೂ ಹಲವಾರು ಚಿತ್ರಗಳು ಹಾಗೂ ವೆಬ್ ಸರಣಿಗಳು ಬಿಡುಗಡೆಯಾಗುತ್ತಿದ್ದು, ಅವುಗಳ ಕುರಿತಾದ ವಿವರ ಈ ಕೆಳಕಂಡಂತಿದೆ.

* ಮಸೂದ - ತೆಲುಗು - ಆಹಾ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗ್ತಿದೆ.

* ಇಟ್ಲು ಮಾರೇದುಮಿಲ್ಲಿ ಪ್ರಜಾನಿಕಂ - ತೆಲುಗು - ಜೀ 5

* ಕಾರಿ - ತಮಿಳು - ಜೀ 5

* ಇನಿ ಉದರಮ್ - ಮಲಯಾಳಂ - ಜೀ 5

* ಪಿಚ್ಚರ್ಸ್ - ಹಿಂದಿ - ಜೀ 5 - ಸಿರೀಸ್ ಸೀಸನ್ 2

* ಏಜೆಂಟ್ ಕನ್ನಾಯಿರಮ್ - ತಮಿಳು - ಸನ್ ನೆಕ್ಸ್ಟ್

* ಜಯ ಜಯ ಜಯ ಜಯ ಹೇ - ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿ - ಹಾಟ್ ಸ್ಟಾರ್

* ಸ್ಟ್ರೇಂಜ್ ವರ್ಲ್ಡ್ - ಇಂಗ್ಲಿಷ್ - ಹಾಟ್ ಸ್ಟಾರ್

* ರಾಮ್ ಸೇತು - ಹಿಂದಿ, ತೆಲುಗು ಹಾಗೂ ತಮಿಳು - ಪ್ರೈಮ್ ವಿಡಿಯೊ

* ಥ್ಯಾಂಕ್ ಗಾಡ್ - ಹಿಂದಿ - ಪ್ರೈಮ್ ವಿಡಿಯೊ

* ದ ಟೀಚರ್ - ಮಲಯಾಳಂ, ತಮಿಳು ಹಾಗೂ ತೆಲುಗು - ನೆಟ್ ಫ್ಲಿಕ್ಸ್

* ತಾರಾ vs ಬಿಲಾಲ್ - ಹಿಂದಿ - ನೆಟ್ ಫ್ಲಿಕ್ಸ್

* ಪೆರೋಲ್ - ತಮಿಳು - ಪ್ರೈಮ್ ವಿಡಿಯೊ

More from Filmibeat

English summary
List of films and series releasing on OTT on December 23
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X