ಶಿವಣ್ಣನ ವೇದ ಸೇರಿದಂತೆ ಫೆಬ್ರವರಿ 10ರಂದು ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ
ಕಳೆದ ವರ್ಷದ ಅಂತಿಮ ವಾರದಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ವೇದ ಚಿತ್ರದ ಓಟಿಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ( ಫೆಬ್ರವರಿ 9 ) ವೇದ ಚಿತ್ರದ ತೆಲುಗು ವರ್ಷನ್ ಶಿವ ವೇದ ಸಿನಿಮಾ ಬಿಡುಗಡೆಗೊಂಡಿದ್ದು, ನಾಳೆ ( ಫೆಬ್ರವರಿ 10 ) ಓಟಿಟಿಯಲ್ಲಿ ವೇದ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.
ಜೀ 5 ಅಪ್ಲಿಕೇಶನ್‌ನಲ್ಲಿ ವೇದ ಚಿತ್ರ ಸ್ಟ್ರೀಮ್ ಆಗಲಿದ್ದು, ವೇದ ಜತೆಗೆ ನಾಳೆ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿರುವ ಸಿನಿಮಾಗಳು ಹಾಗೂ ವೆಬ್ ಸರಣಿಗಳು ಯಾವುವು ಮತ್ತು ಅವುಗಳು ಯಾವ ಅಪ್ಲಿಕೇಶನ್‌ಗಳಲ್ಲಿ ಸ್ಟ್ರೀಮ್ ಆಗಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಫರ್ಜಿ - ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ - ಪ್ರೈಮ್ ವಿಡಿಯೊ - ವೆಬ್ ಸರಣಿ - ಅಮೆಜಾನ್ ಪ್ರೈಮ್ ವಿಡಿಯೊ
ಹಂಟ್ - ತೆಲುಗು - ಆಹಾ ಹಾಗೂ ಪ್ರೈಮ್ ವಿಡಿಯೊ - ಚಲನಚಿತ್ರ
ಅನ್‌ಸ್ಟಾಪಬಲ್ - ತೆಲುಗು - ಆಹಾ - ಟಾಕ್ ಶೋ - ಪವನ್ ಕಲ್ಯಾಣ್ ಎರಡನೇ ಎಪಿಸೋಡ್ ( ಇದಿನಿಂದ ಪ್ರಸಾರ )

ಸಿನ್ - ತಮಿಳು - ಆಹಾ ತಮಿಳು - ವೆಬ್ ಸರಣಿ - ಒಂದನೇ ಸೀಸನ್
ಸಲಾಮ್ ವೆಂಕಿ - ಹಿಂದಿ - ಜೀ 5 - ಚಲನಚಿತ್ರ
ಹನ್ಸಿಕಾಸ್ ಲವ್, ಶಾದಿ ಅಂಡ್ ಡ್ರಾಮಾ - ನಟಿ ಹನ್ಸಿಕಾ ಮದುವೆ ವಿವಾಹ - ಹಿಂದಿ ಹಾಗೂ ಇಂಗ್ಲಿಷ್ - ಹಾಟ್‌ಸ್ಟಾರ್
ರಾಜಯೋಗಂ - ತೆಲುಗು - ಹಾಟ್‌ಸ್ಟಾರ್ - ಚಲನಚಿತ್ರ
ಲವ್ ಟು ಹೇಟ್ ಯು - ಕೊರಿಯನ್ - ನೆಟ್‌ಫ್ಲಿಕ್ಸ್ - ವೆಬ್ ಸರಣಿ - ಸೀಸನ್ 1
ಯುವರ್ ಪ್ಲೇಸ್ ಆರ್ ಮೈನ್ - ಇಂಗ್ಲಿಷ್ - ನೆಟ್‌ಫ್ಲಿಕ್ಸ್ - ಚಲನಚಿತ್ರ
ಟೆನ್ ಡೇಸ್ ಆಫ್ ಎ ಗುಡ್ ಮ್ಯಾನ್ - ಟರ್ಕಿಷ್ - ನೆಟ್‌ಫ್ಲಿಕ್ಸ್ - ಚಲನಚಿತ್ರ
ತುನಿವು - ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ - ನೆಟ್‌ಫ್ಲಿಕ್ಸ್ - ಚಲನಚಿತ್ರ
ಮಹಾವೀರ್‌ಯಾರ್ - ಮಲಯಾಳಂ - ಸನ್‌ನೆಕ್ಸ್ಟ್ - ಚಲನಚಿತ್ರ


Click it and Unblock the Notifications











