Don't Miss!
- News
ವಿಜಯಪುರ; ಬಿಜೆಪಿ ಅಭ್ಯರ್ಥಿಯಾಗಲು ಪೊಲೀಸ್ ಕೆಲಸಕ್ಕೆ ಗುಡ್ಬೈ!
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S23 ಮತ್ತು S23 ಪ್ಲಸ್ ಬಿಡುಗಡೆ! ಫೀಚರ್ಸ್ ಹೇಗಿದೆ? ಬೆಲೆ ಎಷ್ಟು?
- Automobiles
ಆಡಿ ಕ್ಯೂ7 ಮಾಲೀಕನಿಗೆ ಸಂಪೂರ್ಣ ಹಣ ಹಿಂದಿರುಗಿಸುವಂತೆ ಕಾರು ಕಂಪನಿಗೆ ಕೋರ್ಟ್ ಆದೇಶ
- Lifestyle
50, 000 ವರ್ಷಗಳ ಬಳಿಕ ಗೋಚರಿಸಲಿದೆ ಹಸಿರು ಧೂಮಕೇತು: ಬರೀಗಣ್ಣಿನಲ್ಲಿ ಇದನ್ನು ಯಾವ ಸಮಯದಲ್ಲಿ ವೀಕ್ಷಿಸಬಹುದು
- Sports
ಭಾರತದ ಅಪರೂಪದ ಸಾಧಕರು: ಮೂರು ಮಾದರಿಯಲ್ಲೂ ಶತಕ ಸಿಡಿಸಿದ 5 ಭಾರತೀಯ ಬ್ಯಾಟರ್ಗಳು
- Finance
UPI Transactions in January 2023 : ಜನವರಿಯಲ್ಲಿ 8 ಬಿಲಿಯನ್ ಯುಪಿಐ ವಹಿವಾಟು, ಎಷ್ಟು ಮೌಲ್ಯ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರೀಲೀಲಾ 'ಧಮಾಕಾ', ರಶ್ಮಿಕಾ 'ಮಿಷನ್ ಮಜ್ನು' ಓಟಿಟಿ ಬಿಡುಗಡೆ ಮಾಹಿತಿ ಇಲ್ಲಿದೆ
ಈ ಹಿಂದಿನ ಹಾಗೆ ಚಿತ್ರಮಂದಿರದಲ್ಲಿ ತೆರೆಕಂಡ ಚಿತ್ರಗಳನ್ನು ವೀಕ್ಷಿಸಲು ಅವುಗಳು ಟಿವಿಯಲ್ಲಿ ಪ್ರಸಾರವಾಗುವವರೆಗೂ ಕಾಯಬೇಕಾದ ಸಂಗತಿ ಈಗಿಲ್ಲ. ಓಟಿಟಿ ಆಗಮನವಾದ ಬಳಿಕ ಅದು ಟ್ರೆಂಡ್ ಆಗಿ ಈಗ ಸಾಮಾನ್ಯವೆನಿಸಿಬಿಟ್ಟಿದೆ. ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಾಗ ಓಟಿಟಿಗೆ ಬಂದಮೇಲೆ ನೋಡಿದರಾಯಿತು ಚಿತ್ರಮಂದಿರಗಳಿಗೆ ಏಕೆ ಹೋಗಬೇಕು ಎನ್ನುವ ಪ್ರೇಕ್ಷಕ ವರ್ಗ ಕೂಡ ಇದೆ.
ಇನ್ನು ಕೊರೊನಾ ವೈರಸ್ ಕಾರಣದಿಂದಾಗಿ ಉಂಟಾದ ಲಾಕ್‌ಡೌನ್ ಕಾರಣದಿಂದಾಗಿ ಈ ಓಟಿಟಿ ಹೆಮ್ಮರವಾಗಿ ಬೆಳೆದುಬಿಟ್ಟಿತು. ಮನೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದ ಸಿನಿ ರಸಿಕರು ಓಟಿಟಿಯಲ್ಲಿ ಹಲವಾರು ಭಾಷೆಯ ಚಿತ್ರಗಳನ್ನು ನೋಡಲು ಆರಂಭಿಸಿದರು. ಇನ್ನು ಆಗ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಇಲ್ಲದ ಕಾರಣ ಹಲವಾರು ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿಯೇ ಬಿಡುಗಡೆ ಮಾಡಲಾಯಿತು.
ಹೀಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಂಡ ಚಿತ್ರಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಹ ಸಿಕ್ಕಿತು. ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ ಚಿತ್ರವನ್ನು ವೀಕ್ಷಿಸಿ ಚಿತ್ರ ಹೇಗಿದೆ ಎಂಬುದನ್ನು ಹಂಚಿಕೊಳ್ಳುತ್ತಿದ್ದ ಸಿನಿ ರಸಿಕರು ಓಟಿಟಿಯಲ್ಲಿ ಚಿತ್ರವನ್ನು ವೀಕ್ಷಿಸಿ ಸಾಮಾಜಿಕ ಜಾಲತಾಣದ ಮೂಲಕ ಚಿತ್ರದ ವಿಮರ್ಶೆಯನ್ನು ಹಂಚಿಕೊಳ್ಳಲು ಆರಂಭಿಸಿದರು. ಹೀಗೆ ಮೊದಮೊದಲು ವಿರೋಧ ಪಡೆದುಕೊಂಡಿದ್ದ ಓಟಿಟಿ ದಿನ ಕಳೆದಂತೆ ಪ್ರೇಕ್ಷಕರಿಗೂ ಇಷ್ಟವಾಯಿತು. ಇನ್ನು ಓಟಿಟಿ ಆಗಮನದಿಂದ ನೂರು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಚಿತ್ರಗಳು ಬಹುಬೇಗನೆ ಮೊಬೈಲ್ ಪರದೆಗಳಲ್ಲಿ ಪ್ರದರ್ಶನಗೊಳ್ಳತೊಡಗಿದವು. ಇನ್ನು ಲಾಕ್‌ಡೌನ್ ಮುಗಿದು ಎಲ್ಲವೂ ಹತೋಟಿಗೆ ಬಂದು ಚಿತ್ರಮಂದಿರಗಳು ರಿ ಓಪನ್ ಆದರೂ ಕೂಡ ಕೆಲ ಚಿತ್ರಗಳು ನೇರವಾಗಿ ಓಟಿಟಿಯಲ್ಲಿಯೇ ಬಿಡುಗಡೆಗೊಂಡವು. ಈ ಸಾಲಿಗೆ ಇದೀಗ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಮಿಷನ್ ಮಜ್ನು ಕೂಡ ಸೇರಿಕೊಂಡಿದೆ. ಚಿತ್ರ ನಾಳೆ ( ಜನವರಿ 20 ) ತೆರೆಗೆ ಬರುತ್ತಿದ್ದು, ಈ ಚಿತ್ರದ ಜತೆ ನಾಳೆ ಹಾಗೂ ಈ ವಾರಾಂತ್ಯಕ್ಕೆ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿರುವ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಓಟಿಟಿಗೆ ಬರಲಿರುವ ಚಿತ್ರಗಳು ಹಾಗೂ ವೆಬ್ ಸರಣಿಗಳು
ಎಟಿಎಂ - ತೆಲುಗು ಹಾಗೂ ತಮಿಳು - ಜೀ ಫೈವ್ - ವೆಬ್ ಸರಣಿ
ಛತ್ರಿವಾಲಿ - ಹಿಂದಿ - ಜೀ ಫೈವ್ - ಚಲನಚಿತ್ರ
ಡ್ರೈವರ್ ಜಮುನಾ - ತಮಿಳು - ಆಹಾ ತಮಿಳು - ಚಲನಚಿತ್ರ
ಯೂತ್ ಆಫ್ ಮೇ - ತೆಲುಗು - ತೆಲುಗು - ವೆಬ್ ಸರಣಿ
ಮಿಷನ್ ಮಜ್ನು - ಹಿಂದಿ - ನೆಟ್‌ಫ್ಲಿಕ್ಸ್ - ಚಲನಚಿತ್ರ
ಕಾಪ - ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು - ನೆಟ್‌ಫ್ಲಿಕ್ಸ್ - ಚಲನಚಿತ್ರ
ಧಮಾಕಾ - ತೆಲುಗು - ನೆಟ್‌ಫ್ಲಿಕ್ಸ್ - ಚಲನಚಿತ್ರ
ಜಾನ್ಸಿ - ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ - ಹಾಟ್‌ಸ್ಟಾರ್ - ವೆವ್ ಸರಣಿ ಸೀಸನ್ 2

ಮಿಷನ್ ಮಜ್ನು ನೇರ ಓಟಿಟಿಗೆ
ಮೇಲಿನ ಚಿತ್ರಗಳ ಪೈಕಿ ಚಿತ್ರಮಂದಿರದಲ್ಲಿ ತೆರೆ ಕಾಣದೇ ನೇರವಾಗಿ ಓಟಿಟಿಗೆ ಬರುತ್ತಿರುವ ಚಿತ್ರವೆಂದರೆ ಅದು ಮಿಷನ್ ಮಜ್ನು. ಸಿದ್ಧಾರ್ಥ್ ಮಲ್ಹೋತ್ರ ಹಾಗೂ ರಶ್ಮಿಕಾ ಮಂದಣ್ಣ ನಾಯಕ ಹಾಗೂ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ನಾಳೆ ( ಜನವರಿ 20 ) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರ ಕಳೆದ ವರ್ಷದ ಜೂನ್ 10ರಂದೇ ಬಿಡುಗಡೆಯಾಗಲಿದೆ ಎಂದು ಘೋಷಿಸಲ್ಪಟ್ಟಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ಆ ದಿನದಂದು ಬಿಡುಗಡೆಯಾಗದೇ ಈಗ ತಡವಾಗಿ ಬಿಡುಗಡೆಯಾಗುತ್ತಿದೆ. ಸ್ಪೈ ಥ್ರಿಲ್ಲರ್ ಎಂದು ಹೇಳಿಕೊಳ್ಳಲಾಗುತ್ತಿರುವ ಈ ಚಿತ್ರ ಹೇಗಿರಲಿದೆಯೋ ನಾಳೆ ತಿಳಿಯಲಿದೆ.

ನೂರು ಕೋಟಿಯ ಧಮಾಕಾ ಭಾನುವಾರದಿಂದ
ಇನ್ನು ಕಳೆದ ತಿಂಗಳಿನಂದು ಚಿತ್ರಮಂದಿರದ ಅಂಗಳಕ್ಕೆ ಲಗ್ಗೆ ಇಟ್ಟಿದ್ದ ರವಿತೇಜಾ ಹಾಗೂ ಶ್ರೀಲೀಲ್ಲಾ ನಟನೆಯ ಧಮಾಕಾ ಚಿತ್ರ ಸಹ ಇದೇ ವಾರ ಓಟಿಟಿಗೆ ಬರುತ್ತಿದೆ. ಜನವರಿ 22ರ ಭಾನುವಾರ ಧಮಾಕಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ಚಿತ್ರಮಂದಿರದಲ್ಲಿ ನೂರು ಕೋಟಿ ಕ್ಲಬ್ ಸೇರಿ ಧೂಳ್ ಎಬ್ಬಿಸಿದ್ದ ಧಮಾಕಾ ಓಟಿಟಿಯಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.