ಮಾರ್ಚ್ 31 ಹಾಗೂ ಏಪ್ರಿಲ್ 1ರಂದು ಓಟಿಟಿಗೆ ಬಂದ ಚಿತ್ರಗಳ ಪಟ್ಟಿ
ನಿನ್ನೆ ಮಾರ್ಚ್ 31ರ ಶುಕ್ರವಾರ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ಬಿಡುಗಡೆಗೊಂಡವು. ಅಲ್ಲದೇ ಮಾರ್ಚ್ 30ರ ಗುರುವಾರದಂದೂ ಸಹ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಹಲವು ಚಿತ್ರಗಳು ತೆರೆಗೆ ಬಂದಿದ್ದವು. ಗುರುವಾರದಂದು ಕನ್ನಡದಲ್ಲಿ ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಗುರುದೇವ್ ಹೊಯ್ಸಳ ಚಿತ್ರ ತೆರೆಗೆ ಬಂದಿದ್ದು, ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದಸರಾ, ತಮಿಳಿನಲ್ಲಿ ಮಫ್ತಿ ಚಿತ್ರದ ರಿಮೇಕ್ ಪತ್ತು ತಲ ಹಾಗೂ ಹಿಂದಿಯಲ್ಲಿ ಖೈದಿ ರಿಮೇಕ್ ಭೋಲಾ ಚಿತ್ರಗಳು ತೆರೆಗೆ ಬಂದವು.
ಶುಕ್ರವಾರ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ವಿಡುದಲೈ ಪಾರ್ಟ್ 1 ಚಿತ್ರ ಹಾಗೂ ತೆಲುಗಿನ ವೀರಖಡ್ಗಂ ಚಿತ್ರ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೊಂಡವು. ಈ ಪೈಕಿ ಬಹುತೇಕ ಎಲ್ಲಾ ಚಿತ್ರಗಳೂ ಸಹ ಭರ್ಜರಿ ಓಪನಿಂಗ್ ಪಡೆದುಕೊಂಡಿವೆ. ವೀರ ಖಡ್ಗಂ ಹೊರತುಪಡಿಸಿ ಉಳಿದೆಲ್ಲಾ ಸಿನಿಮಾಗಳೂ ಸಹ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿವೆ. ಡಾಲಿ ಧನಂಜಯ್ ನಟನೆಯ ಹೊಯ್ಸಳ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು, ನಾನಿ ನಟನೆಯ ತೆಲುಗು ಚಿತ್ರ ದಸರಾ ಬ್ಲಾಕ್‌ಬಸ್ಟರ್ ಓಪನಿಂಗ್ ಪಡೆದುಕೊಂಡಿದೆ. ಅತ್ತ ರಿಮೇಕ್ ಚಿತ್ರಗಳಾದ ಭೋಲಾ ಹಾಗೂ ಪತ್ತು ತಲ ಚಿತ್ರಗಳೂ ಸಹ ಗೆದ್ದಿವೆ.
ಇನ್ನು ನಿನ್ನೆ ಬಿಡುಗಡೆಗೊಂಡಿರುವ ತಮಿಳಿನ ವೆಟ್ರಿಮಾರನ್ ನಿರ್ದೇಶನದ ವಿಡುದಲೈ ಪಾರ್ಟ್ 1 ಚಿತ್ರವೂ ಸಹ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹೀಗೆ ಒಂದೆಡೆ ಚಿತ್ರಮಂದಿರಗಳಿಗೆ ಹೊಸ ಚಿತ್ರಗಳು ಲಗ್ಗೆ ಇಟ್ಟಿದ್ದರೆ, ಮತ್ತೊಂದೆಡೆ ನಿನ್ನೆ ( ಮಾರ್ಚ್ 31 ) ಹಾಗೂ ಇಂದು ( ಏಪ್ರಿಲ್ 1 ) ಓಟಿಟಿಗೆ ಸಹ ಹಲವು ಚಿತ್ರಗಳು ಆಗಮಿಸಿವೆ. ಹಾಗಾದರೆ ಎರಡು ದಿನಗಳಂದು ಓಟಿಟಿಗೆ ಲಗ್ಗೆ ಇಟ್ಟಿರುವ ಚಿತ್ರಗಳು ಯಾವುವು ಹಾಗೂ ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಚಿತ್ರಗಳು ಬಿಡುಗಡೆಯಾಗಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಮಾರ್ಚ್ 31ರಂದು ಓಟಿಟಿಗೆ ಬಂದ ಚಿತ್ರಗಳು:
* ಅಗಿಲನ್ - ಜೀ ಫೈವ್ - ತಮಿಳು, ಚಲನಚಿತ್ರ
* ಅಯೋಧಿ - ಜೀ ಫೈವ್ - ತಮಿಳು, ಚಲನಚಿತ್ರ
* ಅರಿಯವನ್ - ಸಿಂಪ್ಲಿ ಸೌತ್, ತೆಂಕೊಟ್ಟ - ತಮಿಳು, ಚಲನಚಿತ್ರ
* ಆಲ್‌ಮೋಸ್ಟ್ ಪ್ಯಾರ್ ವಿತ್ ಮೊಹಬ್ಬತ್ - ನೆಟ್‌ಫ್ಲಿಕ್ಸ್ - ಹಿಂದಿ, ಚಲನಚಿತ್ರ
* ಭಗೀರ - ಸನ್‌ನೆಕ್ಸ್ಟ್ - ತಮಿಳು, ಚಲನಚಿತ್ರ
* ಗ್ಯಾಸ್ ಲೈಟ್ - ಹಾಟ್‌ಸ್ಟಾರ್ - ಹಿಂದಿ ಚಲನಚಿತ್ರ
* ಮರ್ಡರ್ ಮಿಸ್ಟರಿ 2 - ನೆಟ್‌ಫ್ಲಿಕ್ಸ್ - ಇಂಗ್ಲಿಷ್ , ಚಲನಚಿತ್ರ
* ಕಿಲ್ ಬೊಕ್ಸೂನ್ - ನೆಟ್‌ಫ್ಲಿಕ್ಸ್ - ಕೊರಿಯನ್, ಚಲನಚಿತ್ರ
* ಫರಾಜ್ - ನೆಟ್‌ಫ್ಲಿಕ್ಸ್ - ಹಿಂದಿ, ಚಲನಚಿತ್ರ
* ಮಿಸ್ಟರ್ ಬ್ಯಾಚುಲರ್ - ಸನ್‌ನೆಕ್ಸ್ಟ್ - ಕನ್ನಡ, ಚಲನಚಿತ್ರ
* ದ ಪವರ್ - ಅಮೆಜಾನ್ ಪ್ರೈಮ್ ವಿಡಿಯೊ - ಇಂಗ್ಲಿಷ್, ವೆಬ್ ಸಿರೀಸ್
ಏಪ್ರಿಲ್ 1ರಂದು ಓಟಿಟಿಗೆ ಬಂದ ಚಿತ್ರಗಳು:
* ಅಮಿಗೊಸ್ - ನೆಟ್‌ಫ್ಲಿಕ್ಸ್ - ತೆಲುಗು, ಚಲನಚಿತ್ರ
* ಸತಿಗಾನಿ ರೆಂಡು ಎಕರಲು - ಆಹಾ - ತೆಲುಗು, ಚಲನಚಿತ್ರ
* ಶೆಹ್ಜಾದಾ - ನೆಟ್‌ಫ್ಲಿಕ್ಸ್ - ಹಿಂದಿ, ಚಲನಚಿತ್ರ
* ಫೈಂಡಿಂಗ್ ಯು - ನೆಟ್‌ಫ್ಲಿಕ್ಸ್ - ಇಂಗ್ಲಿಷ್, ಚಲನಚಿತ್ರ
* ಹೊಂದಿಸಿ ಬರೆಯಿರಿ - ಅಮೆಜಾನ್ ಪ್ರೈಮ್ ವಿಡಿಯೊ - ಕನ್ನಡ, ಚಲನಚಿತ್ರ


Click it and Unblock the Notifications











