ಏಪ್ರಿಲ್ 7ರಂದು ಓಟಿಟಿಗೆ ಬಂದ ಹೊಸ ಚಿತ್ರಗಳ ಪಟ್ಟಿ; ಯಾವ ಅಪ್ಲಿಕೇಶನ್‌ನಲ್ಲಿ ಯಾವ ಚಿತ್ರ?
ಒಂದೆಡೆ ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಹಾಗೂ ಮತ್ತೊಂದೆಡೆ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಅಬ್ಬರ ಇದ್ದರೂ ಸಹ ಇಂದು ( ಏಪ್ರಿಲ್ 7 ) ವಿವಿಧ ಚಿತ್ರರಂಗಗಳ ಹಲವಾರು ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬರುವ ಸಾಹಸ ಮಾಡಿವೆ.
ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ನಟನೆಯ ವೀರಂ, ಕಾಂಟ್ರವರ್ಸಿ ಇಂದಲೇ ಸುದ್ದಿ ಮಾಡಿದ ಪೆಂಟಗನ್, ರಾಮಾಚಾರಿ 2.0, ಪ್ರವೀಣಾ ಹಾಗೂ ನಮ್ ನಾಣಿ ಮದ್ವೆ ಪಾರ್ಟ್ 1 ಚಿತ್ರಗಳು ಬಿಡುಗಡೆಗೊಂಡಿವೆ. ಅತ್ತ ತೆಲುಗಿನಲ್ಲಿ ರಾವಣಾಸುರ, ಮೀಟರ್ ಚಿತ್ರಗಳು ಬಿಡುಗಡೆಗೊಂಡರೆ, ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ಮರು ಬಿಡುಗಡೆಗೊಂಡಿವೆ. ಇನ್ನು ತಮಿಳಿನಲ್ಲಿ 1947, ಮುಂದಿರಿಕ್ಕಾದು, ರೇಸರ್, ಇದು ಕದೈ ಅಲ್ಲ ನಿಜಮ್ ಹಾಗೂ ಯೋಸಿ ಚಿತ್ರಗಳು ರಿಲೀಸ್ ಆಗಿವೆ.

ಬಾಲಿವುಡ್‌ನಲ್ಲಿ ಗುಮ್ರಾ ಹಾಗೂ ಗೀತಾಸಾಕ್ಷಿಗಾ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೊಂಡಿವೆ. ಹೀಗೆ ಈ ಚಿತ್ರಗಳು ಥಿಯೇಟರ್ ಅಂಗಳಕ್ಕೆ ಬಂದಿದ್ದರೆ, ಈ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಕೆಲ ಚಿತ್ರಗಳು ಹಾಗೂ ಹೊಸ ಚಿತ್ರಗಳು ಇಂದು ಓಟಿಟಿಯಲ್ಲಿ ತೆರೆಕಂಡಿವೆ. ಅಂತಹ ಚಿತ್ರಗಳು ಯಾವುವು ಹಾಗೂ ಯಾವ ಓಟಿಟಿ ಅಪ್ಲಿಕೇಶನ್‌ಗಳಲ್ಲಿ ಆ ಚಿತ್ರಗಳು ಬಿಡುಗಡೆಗೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ರೋಮಾಂಚಂ - ಹಾಟ್‌ಸ್ಟಾರ್, ಚಲನಚಿತ್ರ - ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ.
ಅಯೋಧಿ - ಜೀ ಫೈವ್, ಚಲನಚಿತ್ರ - ತಮಿಳು
ಬುರ್ಕಾ - ಆಹಾ, ಚಲನಚಿತ್ರ - ತಮಿಳು
ಪ್ರಣಯ ವಿಲಾಸಂ - ಜೀ ಫೈವ್, ಚಲನಚಿತ್ರ - ಮಲಯಾಳಂ
ಚುಪಾ - ನೆಟ್‌ಫ್ಲಿಕ್ಸ್, ಚಲನಚಿತ್ರ - ಇಂಗ್ಲಿಷ್
ಕೊಕೈನ್ ಬೀರ್ - ಬುಕ್ ಮೈ ಶೋ, ಚಲನಚಿತ್ರ - ಇಂಗ್ಲಿಷ್
ಕಾಸ್ಮೊಸ್ - ಬುಕ್ ಮೈ ಶೋ, ಚಲನಚಿತ್ರ - ಇಂಗ್ಲಿಷ್
ಗುಡ್ ಲಕ್ ಟು ಯು - ಅಮೆಜಾನ್ ಪ್ರೈಮ್ ವಿಡಿಯೊ, ಚಲನಚಿತ್ರ - ಇಂಗ್ಲಿಷ್
ಗ್ಯಾಂಗ್ಸ್ ಆಫ್ ಲಾಗೊಸ್ - ಅಮೆಜಾನ್ ಪ್ರೈಮ್ ವಿಡಿಯೊ, ಚಲನಚಿತ್ರ - ಇಂಗ್ಲಿಷ್
ಬುಬಿಲಿ - ಅಮೆಜಾನ್ ಪ್ರೈಮ್ ವಿಡಿಯೊ, ವೆಬ್ ಸಿರೀಸ್ - ಹಿಂದಿ
ಖಾಲಿ ಪರ್ಸ್ ಆಫ್ ಬಿಲಿಯನೈರ್ಸ್ - ಸನ್ ನೆಕ್ಸ್ಟ್, ಚಲನಚಿತ್ರ - ಮಲಯಾಳಂ
ಕಿಂಗ್ಸ್ ಆಫ್ ಮಲ್ಬರಿ ಸ್ಟ್ರೀಟ್ಸ್ - ನೆಟ್‌ಫ್ಲಿಕ್ಸ್, ಚಲನಚಿತ್ರ - ಇಂಗ್ಲಿಷ್, ಹಿಂದಿ
ಮಹೇಶಂ ಮಾರುತಿಯುಮ್ - ಅಮೆಜಾನ್ ಪ್ರೈಮ್ ವಿಡಿಯೊ, ಚಲನಚಿತ್ರ - ಮಲಯಾಳಂ
ಥಿಕ್ಕರ್ ದ್ಯಾನ್ ವಾಟರ್ - ನೆಟ್‌ಫ್ಲಿಕ್ಸ್, ವೆಬ್ ಸರಣಿ - ಫ್ರೆಂಚ್
ಈ ವಾರ ಸ್ಟ್ರೀಮ್ ಆಗುತ್ತಿರುವ ಚಿತ್ರಗಳು: ಸ್ಮೈಲ್ - ಅಮೆಜಾನ್ ಪ್ರೈಮ್ ವಿಡಿಯೊ, ಚಲನಚಿತ್ರ - ಇಂಗ್ಲಿಷ್, ಹಿಂದಿ
ಬೇಬಿಲಾನ್ - ಅಮೆಜಾನ್ ಪ್ರೈಮ್ ವಿಡಿಯೊ, ಚಲನಚಿತ್ರ - ಇಂಗ್ಲಿಷ್, ಹಿಂದಿ
ಮಿಸ್ಸಿಂಗ್ - ಅಮೆಜಾನ್ ಪ್ರೈಮ್ ವಿಡಿಯೊ, ಚಲನಚಿತ್ರ - ಇಂಗ್ಲಿಷ್
ದ ಕ್ರಾಸ್ ಓವರ್ - ಹಾಟ್‌ಸ್ಟಾರ್, ವೆಬ್ ಸರಣಿ - ಇಂಗ್ಲಿಷ್


Click it and Unblock the Notifications











