ಜೂನ್ 9ರಂದು ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ
ನಾಳೆ ಜೂನ್ 9ರ ಶುಕ್ರವಾರದಂದು ವಿವಿಧ ಭಾಷೆಗಳ ಹಲವು ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿವೆ. ಒಂದೆಡೆ ಚಿತ್ರಮಂದಿರಗಳಲ್ಲಿ ಹಲವು ಚಿತ್ರಗಳು ತೆರೆಗೆ ಬಂದರೆ, ಮತ್ತೊಂದೆಡೆ ಓಟಿಟಿಯಲ್ಲಿ ವಿವಿಧ ಭಾಷೆಗಳ ಹಲವು ಚಿತ್ರಗಳು ತೆರೆಗೆ ಬರಲಿವೆ. ಅವತಾರ್ ದ ವೇ ಆಫ್ ವಾಟರ್ ಹಾಗೂ 2018 ಸೇರಿದಂತೆ ಈ ವಾರ ಈಗಾಗಲೇ ಹಲವಾರು ಸೂಪರ್ ಹಿಟ್ ಚಿತ್ರಗಳು ಈ ವಾರ ಓಟಿಟಿಗೆ ಲಗ್ಗೆ ಇಟ್ಟಿದ್ದು, ನಾಳೆ ಮತ್ತಷ್ಟು ಚಿತ್ರಗಳು ಓಟಿಟಿಗೆ ಬರಲಿವೆ.
ಹೀಗೆ ನಾಳೆ ಓಟಿಟಿಯಲ್ಲಿ ತೆರೆಗೆ ಬರಲಿರುವ ಚಿತ್ರಗಳು ಯಾವುವು ಎಂಬ ಮಾಹಿತಿ ಹಾಗೂ ಅವುಗಳು ಯಾವ ಓಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

* 2010ರಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ರಜನಿಕಾಂತ್ ಹಾಗೂ ಶಂಕರ್ ಕಾಂಬಿನೇಶನ್‌ನ ತಮಿಳಿನ ಇಂಡಸ್ಟ್ರಿ ಹಿಟ್ ಎಂದಿರನ್ ಚಿತ್ರದ 4K ಮಾಸ್ಟರ್ಡ್ ವರ್ಷನ್ ನಾಳೆ ಸನ್ ನೆಕ್ಸ್ಟ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಯಾಗಲಿದೆ.
* ಕಳೆದ ತಿಂಗಳು ಬಿಡುಗಡೆಯಾಗಿ ಮಕಾಡೆ ಮಲಗಿ ತೀವ್ರ ನಷ್ಟ ಅನುಭವಿಸಿದ ಅಕ್ಕಿನೇನಿ ನಾಗಚೈತನ್ಯ ಹಾಗೂ ವೆಂಕಟ್ ಪ್ರಭು ಕಾಂಬಿನೇಶನ್‌ನ ಕಸ್ಟಡಿ ಚಿತ್ರ ನಾಳೆ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ.
* ಮೆನ್ ಟೂ ಎಂಬ ತೆಲುಗು ಚಿತ್ರ ಆಹಾ ತೆಲುಗು ಅಪ್ಲಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿದೆ.
* ಮಾಲೈ ನೇರ ಮಾಲಿಪೋ ಎಂಬ ತಮಿಳು ಚಿತ್ರ ಆಹಾ ತಮಿಳು ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿದೆ.
* ಬ್ಲಡಿ ಡ್ಯಾಡಿ ಎಂಬ ಹಿಂದಿ ಚಿತ್ರ ನಾಳೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿದೆ.
* ಎಂಪೈರ್ಸ್ ಆಫ್ ಲೈಟ್ ಎಂಬ ಹಾಲಿವುಡ್ ಚಿತ್ರ ನಾಳೆ ಹಾಟ್ ಸ್ಟಾರ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಯಾಗಲಿದೆ.
* ತಮಿಳಿನ ಅದೇ ಮಳೆಕಾಲಂ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
* ಇಂಗ್ಲಿಷ್‌ನ ವೆಬ್ ಸರಣಿ ಅರ್ನಾಲ್ಡ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
* ಕೊರಿಯನ್‌ನ ಬ್ಲಡ್ ಹೌಂಡ್ಸ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











