ಏಪ್ರಿಲ್ 14ರಂದು ಕಬ್ಜ ಸೇರಿ ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ

List of films releasing on OTT on April 14 along with Kabzaa and Masooda

ನಾಳೆ ( ಏಪ್ರಿಲ್ 14 ) ತಿಂಗಳ ಮೂರನೇ ಶುಕ್ರವಾರದಂದು ಹಲವು ಚಿತ್ರಗಳು ಬಿಡುಗಡೆಯಾಗಲಿವೆ. ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಅಬ್ಬರ, ಮತ್ತೊಂದೆಡೆ ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ರಾಜ್ಯದಲ್ಲಿ ಜೋರಾಗಿದ್ದರೂ ಸಹ ಹಲವು ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬರುವ ಧೈರ್ಯ ಮಾಡಿವೆ.

ನಾಳೆ ಕನ್ನಡ ಸೇರಿದಂತೆ ಹಲವು ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಸಹ ಹಲವು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕನ್ನಡದ ಪೈಕಿ ರಮೇಶ್ ಅರವಿಂದ್ ನಟನೆಯ ನಿರೀಕ್ಷಿತ ಸಿನಿಮಾ ಶಿವಾಜಿ ಸುರತ್ಕಲ್ 2, ಕೋಮಲ್ ಕುಮಾರ್ ನಟನೆಯ ಉಂಡೆನಾಮ, ಹೊಸಬರ ಸುರಾರಿ ಚಿತ್ರಗಳು ಬಿಡುಗಡೆಯಾಗುತ್ತಿದ್ದರೆ, ತೆಲುಗಿನಲ್ಲಿ ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ, ತಮಿಳಿನಲ್ಲಿ ರಾಘವ ಲಾರೆನ್ಸ್ ನಟನೆಯ ರುದ್ರನ್ ಚಿತ್ರಗಳು ಬಿಡುಗಡೆಗೊಳ್ಳಲಿವೆ.

ಹೀಗೆ ಒಂದೆಡೆ ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳು ತೆರೆ ಕಾಣುತ್ತಿದ್ದರೆ, ಮತ್ತೊಂದೆಡೆ ಇದೇ ದಿನ ಓಟಿಟಿಯಲ್ಲಿಯೂ ಸಹ ಹಲವಾರು ಚಿತ್ರಗಳು ತೆರೆಗೆ ಬರಲು ತಯಾರಾಗಿವೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಚಿತ್ರಗಳ ಜತೆ ಕೆಲ ಚಿತ್ರಗಳು ನೇರ ಓಟಿಟಿ ಬಿಡುಗಡೆಯಾಗುತ್ತಿವೆ. ಹೀಗೆ ನಾಳೆ ( ಏಪ್ರಿಲ್ 14 ) ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳು ಯಾವುವು ಎಂಬ ಪಟ್ಟಿ ಈ ಕೆಳಕಂಡಂತಿವೆ..

ಆಹಾ ಅಪ್ಲಿಕೇಶನ್‌: ತೆಲುಗು ನಟ ವಿಶ್ವಕ್ ಸೇನ್ ಇದೇ ಮೊದಲ ಬಾರಿಗೆ ನಟನೆ ಜತೆ ನಿರ್ದೇಶನವನ್ನೂ ಸಹ ಮಾಡಿರುವ ಚಿತ್ರ ದಾಸ್ ಕಾ ಧಮ್ಕಿ ಚಿತ್ರ ನಾಳೆ ಆಹಾ ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಜತೆಗೆ ತೆಲುಗಿನ ಸೂಪರ್ ಹಿಟ್ ಹಾರರ್ ಚಿತ್ರ ಮಸೂದ ತಮಿಳಿಗೆ ಡಬ್ ಆಗಿದ್ದು ಈ ವರ್ಷನ್ ಸಹ ನಾಳೆ ಆಹಾ ತಮಿಳು ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿದೆ.

ಅಮೆಜಾನ್ ಪ್ರೈಮ್ ವಿಡಿಯೊ: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಕಬ್ಜ ಚಿತ್ರ ನಾಳೆ ( ಏಪ್ರಿಲ್ 14 ) ಬಿಡುಗಡೆಗೊಳ್ಳಲಿದೆ. ಜುಬಿಲಿ ಎಂಬ ವೆಬ್ ಸರಣಿ ಸಹ ನಾಳೆ ಬಿಡುಗಡೆಯಾಗಲಿದ್ದು, ಈ ವೆಬ್ ಸರಣಿ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ವರ್ಷನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.

ಉಳಿದಂತೆ ಈ ಟಿವಿ ವಿನ್‌ನಲ್ಲಿ ಅಸಲು ಎಂಬ ತೆಲುಗು ಚಿತ್ರ ಬಿಡುಗಡೆಯಾಗಲಿದೆ. ಹಾಟ್‌ಸ್ಟಾರ್‌ನಲ್ಲಿ ಓ ಕಲ ಎಂಬ ತೆಲುಗು ಚಿತ್ರ ಬಿಡುಗಡೆಯಾಗಲಿದೆ. ಕಣ್ಣೈ ನಂಬಾದೆ ಎಂಬ ತಮಿಳು ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ವೆದರಿಂಗ್ ಎಂಬ ಇಂಗ್ಲಿಷ್ ಚಿತ್ರ, ಸ್ಪಾನಿಷ್‌ನ ಫೆನೋಮಿನ, ಮೆಕ್ಸಿಕನ್‌ನ ಸಿನಿಮಾ ಕ್ವೀನ್ಸ್ ಆಫ್ ದ ರನ್ ಹಾಗೂ ಕೊರಿಯನ್‌ನ ಕ್ವೀನ್ ಮೇಕರ್ ಎಂಬ ವೆಬ್ ಸರಣಿಗಳು ನೆಟ್‌ಫ್ಲಿಕ್ಸ್‌ನಲ್ಲಿ ನಾಳೆಯಿಂದ ಸ್ಟ್ರೀಮ್ ಆಗಲಿವೆ.

ಮಲಯಾಳಂನ ಪ್ರಣಯ ವಿಲಾಸಂ ಎಂಬ ಸಿನಿಮಾ, ಹಿಂದಿಯ ಮಿಸ್ಸಸ್ ಅಂಡರ್‌ಕವರ್ ( ಚಲನಚಿತ್ರ ), ಮಿತ್ರನ್ ಡ ನಾ ಚಲ್ಡಾ ಎಂಬ ಪಂಜಾಬಿ ಸಿನಿಮಾ ಬೆಂಗಾಲಿಯ ಪ್ರೊಜಾಪತಿ ಎಂಬ ಸಿನಿಮಾ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿವೆ.

ಒಟ್ಟಿನಲ್ಲಿ ನಾಳೆ ಏಪ್ರಿಲ್ 14ರ ಶುಕ್ರವಾರ ಸಿನಿ ರಸಿಕರಿಗೆ ಚಿತ್ರಮಂದಿರಗಳಲ್ಲಿ ಹಾಗೂ ಓಟಿಟಿಯಲ್ಲಿ ಎರಡೂ ಕಡೆ ಹೊಸ ಚಿತ್ರಗಳನ್ನು ವೀಕ್ಷಿಸುವ ಅವಕಾಶವಿದ್ದು, ಮನರಂಜನೆಗೇನೂ ಕೊರತೆಯಿಲ್ಲ.

More from Filmibeat

English summary
List of films releasing on OTT on April 14 along with Kabzaa and Masooda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X