OTT releases this week: ಈ ವಾರ ಓಟಿಟಿ ರಿಲೀಸ್ ಸಿನಿಮಾ, ವೆಬ್ ಸೀರಿಸ್ ಲಿಸ್ಟ್
ಕಳೆದ ವಾರ ಬಾಕ್ಸಾಫೀಸ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿದ್ದವು. ರಜನಿಕಾಂತ್ ನಟನೆಯ 'ಜೈಲರ್' ಆರ್ಭಟ ಜೋರಾಗಿಯೇ ಇದೆ. 2ನೇ ವಾರವೂ ತಲೈವಾ ದರ್ಬಾರ್ ಮುಂದುವರೆದಿದೆ. ಇದರ ನಡುವೆ ಈ ವಾರ ಓಟಿಟಿಗೆ ಒಂದಷ್ಟು ಹೊಸ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಎಂಟ್ರಿ ಕೊಡುತ್ತಿದೆ.
ಶುಕ್ರವಾರ ಬಂದ್ರೆ ಸಾಕು ಕೆಲವರು ಥಿಯೇಟರ್ ಮಾತ್ರವಲ್ಲ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸಿನಿಮಾ, ವೆಬ್‌ಸೀರಿಸ್ ನೋಡಲೇಬೇಕು. ಭಾಷೆ ಗೊತ್ತಿಲ್ಲದಿದ್ದರೂ ಪರವಾಗಿಲ್ಲ ಇಂಟ್ರೆಸ್ಟಿಂಗ್ ಹೊಸ ಸಿನಿಮಾ, ಸೀರಿಸ್ ನೋಡಿದ್ರೇನೆ ಸಮಾಧಾನ. ಅಂದಹಾಗೆ ಈ ವಾರ ಥಿಯೇಟರ್‌ಗಳಲ್ಲಿ ದೊಡ್ಡ ಸಿನಿಮಾಗಳು ಬರ್ತಿಲ್ಲ. ಆದರೆ ಓಟಿಟಿಯಲ್ಲಿ ಒಂದಷ್ಟು ವೆಬ್ ಸೀರಿಸ್ ಕುತೂಹಲ ಕೆರಳಿಸಿದೆ.

ಅಮೇಜಾನ್ ಪ್ರೈಂ
1. ಹರ್ಲಾನ್ ಕೋಬೆನ್ಸ್ ಶೆಲ್ಟರ್(ವೆಬ್ ಸೀರಿಸ್)
2. ಎಪಿ ಧಿಲ್ಲೋನ್ ಫಸ್ಟ್ ಆಫ್ ಎ ಕೈಂಡ್ (ಡಾಕ್ಯೂ ಸಿರೀಸ್)
3. ಅಮಲಾ
ನೆಟ್‌ಫ್ಲಿಕ್ಸ್
1. ಗನ್ಸ್ ಅಂಡ್ ಗುಲಾಬ್ಸ್
ದುಲ್ಕರ್ ಸಲ್ಮಾನ್, ರಾಜ್‌ಕುಮಾರ್ ರಾವ್ ಮತ್ತು ಆದರ್ಶ್ ಗೌರವ್, ಗುಲ್ಷನ್ ದೇವಯ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಗನ್ಸ್ ಅಂಡ್ ಗುಲಾಬ್ಸ್' ವೆಬ್ ಸೀರೀಸ್ ಆಗಸ್ಟ್ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಡಿಕೆ ಈ ಸರಣಿಗೆ ಆಕ್ಷನ್ ಕಟ್ ಹೇಳಿದ್ದಾರೆ. 1980-90ರ ದಶಕದ ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥೆಯನ್ನು ಈ ವೆಬ್ ಸೀರಿಸ್‌ನಲ್ಲಿ ಕಟ್ಟಿಕೊಡಲಾಗಿದೆ.
2. ನೋ ಎಸ್ಕೇಪ್ ರೂಮ್
3. ಅನ್ಟೋಲ್ಡ್ ಹಾಲ್ ಆಫ್ ಶೇಮ್
4. ಮಾಸ್ಕ್ ಗರ್ಲ್(ಕೊರಿಯನ್ ಸೀರಿಸ್)
5. ದ ಮಂಕಿ ಕಿಂಗ್
6. ದ ಅಪ್‌ಷಾಸ್ ಪಾರ್ಟ್-4
7. 10 ಡೇಸ್ ಆಫ್ ಎ ಮ್ಯಾನ್
8. ಚೂಸೆನ್ ವನ್
9. ಬ್ಲೂ ಅಗೇನ್
10. ಲವ್ ಯೂ ಲಾಂಗ್ ಟೈಂ
ಜೀ 5
1. ಛತ್ರಪತಿ
ತೆಲುಗಿನ ಸೂಪರ್ ಹಿಟ್ 'ಛತ್ರಪತಿ' ಸಿನಿಮಾ ಹಿಂದಿಗೆ ರೀಮೆಕ್ ಆಗಿತ್ತು. ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ವಿ. ವಿ ವಿನಾಯಕ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ರಾಜಮೌಳಿ- ಪ್ರಭಾಸ್ ಕಾಂಬಿನೇಷನ್ ಬಂದಿದ್ದ 'ಛತ್ರಪತಿ' ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದರೆ ಹಿಂದಿ ವರ್ಷನ್ ಒಂದೇ ಒಂದು ಶೋ ಕೂಡ ಯಶಸ್ವಿಯಾಗಿ ಪ್ರದರ್ಶನವಾಗಲಿಲ್ಲ. ಜೀ-5ನಲ್ಲಿ ಸಿನಿಮಾ ಈ ವಾರ ಸ್ಟ್ರೀಮಿಂಗ್ ಆಗ್ತಿದೆ.
2. ದುರಂಗಾ ಸೀಸನ್-2
ಜಿಯೋ ಸಿನಿಮಾ
1. ತಾಲಿ
ಸುಶ್ಮಿತಾ ಸೇನ್ ನಟನೆಯ ಬಯೋಪಿಕ್ ಸಿನಿಮಾ 'ತಾಲಿ' ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರವಿ ಜಾಧವ್ ನಿರ್ದೇಶನದ ಈ ಚಿತ್ರದಲ್ಲಿ ಸುಶ್ಮಿತಾ ಸೇನ್ ಮಂಗಳಮುಖಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದ ಶ್ರೀಗೌರಿ ಸಾವಂತ್ ಪಾತ್ರದಲ್ಲಿ ಸುಶ್ಮಿತಾ ಸೇನ್ ಕಾಣಿಸಿಕೊಂಡಿದ್ದಾರೆ.
2. ಲಯನ್ಸ್ ಗೆಟ್ ಪ್ಲೇ
3. ಮೈಂಡ್ ಕೇಜ್
ಡಿಸ್ನಿ ಹಾಟ್ ಸ್ಟಾರ್
1. ಮತಗಂ(ತಮಿಳು ಸಿನಿಮಾ)


Click it and Unblock the Notifications










