OTT Release this week: ಈ ವಾರ ಓಟಿಟಿಯಲ್ಲಿ 16 ಸಿನಿಮಾ & 12 ವೆಬ್ ಸೀರಿಸ್ ರಿಲೀಸ್

ಸಿನಿರಸಿಕರು ಪ್ರತಿವಾರ ಥಿಯೇಟರ್‌ನಲ್ಲಿ ರಿಲೀಸ್ ಆಗುವ ಸಿನಿಮಾಗಳು ಮಾತ್ರವಲ್ಲ, ಓಟಿಟಿಗೆ ಬರುವ ಸಿನಿಮಾಗಳ ಮೇಲೂ ಒಂದು ಕಣ್ಣಿರುತ್ತಾರೆ. ಹೊಸ ಸಿನಿಮಾಗಳ ಜೊತೆಗೆ ವೀಕೆಂಡ್‌ನಲ್ಲಿ ವೆಬ್‌ ಸೀರಿಸ್‌ಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿ ಗಮನ ಸೆಳೆಯುತ್ತವೆ. ಈ ವಾರ ಒಂದಲ್ಲ ಎರಡಲ್ಲ ಬರೋಬ್ಬರಿ 16ಕ್ಕೂ ಹೆಚ್ಚು ಸಿನಿಮಾಗಳು, 10ಕ್ಕೂ ಹೆಚ್ಚು ವೆಬ್‌ ಸೀರಿಸ್ ರಿಲೀಸ್ ಆಗುತ್ತಿದೆ.

ಕನ್ನಡದಲ್ಲಿ ವೆಬ್‌ ಸೀರಿಸ್‌ಗಳ ಸಂಖ್ಯೆ ಕಮ್ಮಿ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುತ್ತದೆ. ಕೆಲ ಸಿನಿಮಾಗಳು ನೇರವಾಗಿ ಓಟಿಟಿಗೆ ಬರೋದು ಉಂಟು. ಇನ್ನು ಥಿಯೇಟರ್‌ನಲ್ಲಿ ರಿಲೀಸ್ ಆದ ಸಿನಿಮಾಗಳು ತಿಂಗಳು ಕಳೆಯುವುದರೊಳಗೆ ಡಿಜಿಟಲ್ ಫ್ಲಾಟ್‌ಪಾರ್ಮ್‌ಗಳಲ್ಲಿ ದರ್ಶನ ಕೊಡುತ್ತಿವೆ. 'ರಾಘವೇಂದ್ರ ಸ್ಟೋರ್ಸ್', 'ಗುರುದೇವ್ ಹೊಯ್ಸಳ', 'ಕಬ್ಜ', 'ಕ್ರಾಂತಿ' ಸಿನಿಮಾಗಳು ಇದೇ ರೀತಿ ಬಹಳ ಬೇಗ ಓಟಿಟಿಗೆ ಅಮೇಜಾನ್ ಪ್ರೈಂ ವಿಡಿಯೋಗೆ ಬಂದಿತ್ತು.

List of movies and web series releasing on OTT platforms this week

ಫಹಾದ್ ಫಾಸಿಲ್ ನಟನೆಯ 'ಧೂಮಮ್' ಸಿನಿಮಾ ಬಹಳ ಬೇಗ ಓಟಿಟಿಗೆ ಬರೋ ನಿರೀಕ್ಷೆ ಇತ್ತು. ಥಿಯೇಟರ್‌ನಲ್ಲಿ ಅಷ್ಟಾಗಿ ಸದ್ದು ಮಾಡದ ಸಿನಿಮಾ ಬಹಳ ಬೇಗ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತೆ ಎನ್ನಲಾಗಿತ್ತು. ಆದರೆ ಯಾಕೋ ಸಿನಿಮಾ ಇನ್ನು ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿಲ್ಲ. ಈ ವಾರ ಈಗಾಗಲೇ ಕೆಲ ವೆಬ್‌ಸೀರಿಸ್‌ಗಳು ಸ್ಟ್ರೀಮಿಂಗ್ ಶುರುವಾಗಿದೆ.

ನೆಟ್‌ಫ್ಲಿಕ್ಸ್

1. ಮಾಮನನ್

ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾಗಳಲ್ಲಿ ತಮಿಳಿನ 'ಮಾಮನನ್' ಸಿನಿಮಾ ಕುತೂಹಲ ಮೂಡಿಸಿದೆ. ಉದಯ್‌ನಿಧಿ ಸ್ಟಾಲಿನ್‌, ಫಹಾದ್ ಫಾಸಿಲ್, ಕೀರ್ತಿ ಸುರೇಶ್, ವಡಿವೇಲು ನಟನೆಯ ಈ ಸಿನಿಮಾ ಜೂನ್ 29ಕ್ಕೆ ತೆರೆಗಪ್ಪಳಿಸಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಆದರೆ ತಿಂಗಳಿಗೂ ಮೊದ್ಲೆ ಸಿನಿಮಾ ಓಟಿಟಿಗೆ ಬರ್ತಿದೆ. ಜುಲೈ 27ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಮಾರಿ ಸೆಲ್ವರಾಜ್ ಈ ಪೊಲಿಟಿಕಲ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

2. ಹಿಡನ್ ಸ್ಟ್ರೈಕ್ (ಇಂಗ್ಲೀಷ್ ಸಿನಿಮಾ)

3. ದಿ ಫ್ಲಾಷ್ (ಹಾಲಿವುಡ್ ಸಿನಿಮಾ)

4. ಮಿಸ್ಸಿಂಗ್(ಹಾಲಿವುಡ್ ಸಿನಿಮಾ)

5. ಹ್ಯಾಪಿನೆಸ್ ಫಾರ್ ಬಿಗಿನಿರ್(ಇಂಗ್ಲೀಷ್ ಸಿನಿಮಾ)

6. ಡ್ರೀಮ್(ಕೊರಿಯನ್ ಸಿನಿಮಾ)

7. ಪ್ಯಾರಡೈಜ್(ಜರ್ಮನ್ ಸಿನಿಮಾ)

8. ಎ ಪರ್ಫೆಕ್ಟ್ ಸ್ಟೋರಿ

9. ದಿ ವಿಟ್ಚರ್ ಸೀಜನ್- 3 ಭಾಗ- 2

10. ದಿ ಡ್ರಾಗನ್ ಪ್ರಿನ್ಸ್ ಸೀಜನ್- 5

11. ದಿ ಲೇಡಿ ಆಫ್ ಸೈಲೆನ್ಸ್ (ಸ್ಪಾನಿಷ್ ಸಿನಿಮಾ)

12. ಕ್ಯಾಪ್ಟನ್ ಪಾಲ್

13. ಹೌ ಟು ಬಿಕಮ್ ಕಲ್ಟ್ ಲೀಡರ್(ವೆಬ್‌ ಸೀರಿಸ್)

List of movies and web series releasing on OTT platforms this week

ಪ್ರೈಂ ವಿಡಿಯೋ

1. ರೆಜಿನಾ

ಡೊಮಿನ್ ಡಿ. ಸೆಲ್ವಾ ನಿರ್ದೇಶನದ ತಮಿಳು ಕ್ರೈಂ ಥ್ರಿಲ್ಲರ್ 'ರೆಜಿನಾ' ಸಿನಿಮಾ ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿದೆ. ಸುನೈನಾ, ವಿವೇಕ್ ಪ್ರಸನ್ನ, ಭಾವ ಚೆಲ್ಲದೊರೆ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜೂನ್ 23ಕ್ಕೆ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ರೆಜಿನಾ ಎನ್ನುವ ಒಬ್ಬ ಗೃಹಿಣಿ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ.

ಜಿಯೋ ಸಿನಿಮಾ

1. ಕಾಲಕೂಟ್ (ವೆಬ್‌ ಸೀರಿಸ್)

ವಿಜಯ್ ವರ್ಮಾ, ಶ್ವೇತಾ ತ್ರಿಪಾಠಿ ನಟನೆಯ ಕಾಲಕೂಟ್ ಇದೇ ಗುರುವಾರ ಜಿಯೋ ಸಿನಿಮಾದಲ್ಲಿ ರಿಲೀಸ್ ಆಗುತ್ತಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಒಬ್ಬ ಪೊಲೀಸ್ ಆಫೀಸರ್ ಕಥೆ ಈ ವೆಬ್‌ ಸೀರಿಸ್‌ನಲ್ಲಿದೆ. ಅನುರಬ್ ಕುಮಾರ್ ಮತ್ತು ಸುಮಿತ್ ಸಕ್ಸೇನಾ ಆಕ್ಷನ್ ಕಟ್ ಹೇಳಿದ್ದಾರೆ.

2. ಅಪ್ಪತ(ತಮಿಳು ಸಿನಿಮಾ)

3. ಒವ್ ಫ್ರೈಡೇ ನೈಟ್(ಹಿಂದಿ ಸಿನಿಮಾ)

ಜೀ 5

1. ಕೊಲ್ಲ

2. ಸುರೇಶ್ ಕೃಷ್ಣ ಪೊಲೀಸ್ ಸ್ಟೋರಿ

ಸೋನಿ ಲಿವ್

1. ಟ್ವಿಸ್ಟೆಡ್ ಮೆಟಲ್(ಇಂಗ್ಲೀಸ್ ಸೀರಿಸ್)

ಬುಕ್‌ ಮೈ ಶೋ

1. ಜಸ್ಟಿನ್ ಲೀಗ್: ವಾರ್ ವರ್ಲ್ಡ್(ಇಂಗ್ಲೀಷ್ ಸಿನಿಮಾ)
2. ಟ್ರಾನ್ಸ್‌ಫಾರ್ಮರ್ಸ್: ರೈಸ್ ಆಫ್ ದಿ ಬೀಸ್ಟ್ (ಇಂಗ್ಲೀಷ್ ಸಿನಿಮಾ)

ಅಹಾ

1. ಸಾಮವರಜಗಮನ(ತೆಲುಗು ಸಿನಿಮಾ)

More from Filmibeat

English summary
Maamanan to Appatha: Ott Release July last week. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X