ಈ ವಾರ ಒಟಿಟಿಗೆ ಬರುತ್ತಿವೆ ಭರ್ಜರಿ ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ. ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.

ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.

ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

ಚಿರಂಜೀವಿಯ 'ಗಾಡ್‌ಫಾದರ್'

ಚಿರಂಜೀವಿಯ 'ಗಾಡ್‌ಫಾದರ್'

ಚಿರಂಜೀವಿ ನಟಿಸಿರುವ ತೆಲುಗು ಸಿನಿಮಾ 'ಗಾಡ್‌ಫಾದರ್' ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್ 18 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಸಲ್ಮಾನ್ ಖಾನ್ ಸಹ ನಟಿಸಿದ್ದಾರೆ. ಸಲ್ಮಾನ್ ಖಾನ್ ನಟಿಸಿರುವ ಮೊದಲ ತೆಲುಗು ಸಿನಿಮಾ ಇದು. ಸಲ್ಮಾನ್ ಖಾನ್ ನಟಿಸಿದ್ದಾರಾದ್ದರಿಂದಲೇ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ ಖರೀದಿಸಿದೆ ಎನ್ನಲಾಗುತ್ತಿದೆ. ಈ ಸಿನಿಮಾವು ತಮಿಳಿನ 'ಲುಸಿಫರ್' ಸಿನಿಮಾದ ರೀಮೇಕ್. ಜೊತೆಗೆ ತೆಲುಗಿನ ಮತ್ತೊಂದು ಸಿನಿಮಾ 'ಐರಾವತಂ' ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನವೆಂಬರ್ 17 ರಂದು ಬಿಡುಗಡೆ ಆಗಿದೆ.

ತಮಿಳಿನ ಎರಡು ಸಿನಿಮಾ

ತಮಿಳಿನ ಎರಡು ಸಿನಿಮಾ

ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆದ ತಮಿಳಿನ ಸ್ಟಾರ್ ನಟ ಕಾರ್ತಿಯ 'ಸರ್ದಾರ್' ಒಟಿಟಿಗೆ ಬಂದಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಒಡೆತನದ ಆಹಾ ಒಟಿಟಿಯಲ್ಲಿ ನವೆಂಬರ್ 18 ರಂದು 'ಸರ್ದಾರ್' ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ರಾಶಿ ಖನ್ನ ನಾಯಕಿ. ಮತ್ತೊಂದು ತಮಿಳು ಸಿನಿಮಾ 'ಅನಲ್ ಮೇಲೆ ಪಣಿ ತುಳಿ' ಸೋನಿ ಲಿವ್‌ನಲ್ಲಿ ನೇರವಾಗಿ ಬಿಡುಗಡೆ ಆಗಿದೆ. ಮಹಿಳಾ ಪ್ರಧಾನ, ಥ್ರಿಲ್ಲರ್ ಕತೆ ಹೊಂದಿರುವ ಈ ಸಿನಿಮಾ ಸೋನಿ ಲಿವ್‌ನಲ್ಲಿ ನವೆಂಬರ್ 17 ರಿಂದ ಸ್ಟ್ರೀಮ್ ಆಗುತ್ತಿದೆ.

'ಧಾರಾವಿ ಬ್ಯಾಂಕ್' ಹಿಂದಿ ವೆಬ್ ಸರಣಿ

'ಧಾರಾವಿ ಬ್ಯಾಂಕ್' ಹಿಂದಿ ವೆಬ್ ಸರಣಿ

ಸುನಿಲ್ ಶೆಟ್ಟಿ, ವಿವೇಕ್ ಒಬೆರಾಯ್ ಇನ್ನೂ ಕೆಲವರು ನಟಿಸಿರುವ 'ಧಾರಾವಿ ಬ್ಯಾಂಕ್' ವೆಬ್ ಸರಣಿ ಮ್ಯಾಕ್ಸ್ ಪ್ಲೇಯರ್‌ನಲ್ಲಿ ಬಿಡುಗಡೆ ಆಗಿದೆ. ಅಂಡರ್‌ವರ್ಲ್ಡ್‌ ಮತ್ತು ಪೊಲೀಸರ ನಡುವೆ ನಡೆವ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ಸುನಿಲ್ ಶೆಟ್ಟಿ ತಲೈವಾ ಹೆಸರಿನ ಡಾನ್‌ ಪಾತ್ರದಲ್ಲಿ ನಟಿಸಿದ್ದಾರೆ. ಸುಮಾರು 30,000 ಕೋಟಿ ಡೀಲ್‌ನ ಸುತ್ತ ಇಡೀ ವೆಬ್ ಸರಣಿ ನಡೆಯುತ್ತದೆ ಎನ್ನಲಾಗಿದೆ.

ಗರ್ಭಿಣಿ ಮಹಿಳೆಯರ ಸಿನಿಮಾ 'ವಂಡರ್ ವುಮನ್'

ಗರ್ಭಿಣಿ ಮಹಿಳೆಯರ ಸಿನಿಮಾ 'ವಂಡರ್ ವುಮನ್'

'ವಂಡರ್ ವುಮನ್' ಹೆಸರಿನ ಮಹಿಳಾ ಪ್ರಧಾನ ಸಿನಿಮಾ ಒಂದು ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಇಂಗ್ಲೀಷ್, ತಮಿಳು, ಮಲಯಾಳಂ ಎಲ್ಲ ಭಾಷೆಗಳೂ ಒಂದೇ ಸಿನಿಮಾದಲ್ಲಿರುವ ಕಾರಣ ಇದು ನಿರ್ದಿಷ್ಟ ಭಾಷೆಯ ಸಿನಿಮಾ ಎನ್ನಲಾಗದು. ಸಿನಿಮಾವು ಗರ್ಭಿಣಿ ಮಹಿಳೆಯರ ಬಗೆಗಿನ ಸಿನಿಮಾ ಆಗಿದೆ. ಸಿನಿಮಾದಲ್ಲಿ ನಿತ್ಯಾ ಮೆನನ್, ಪಾರ್ವತಿ ತಿರುವೋತು ಇನ್ನೂ ಹಲವು ಉತ್ತಮ ನಟಿಯರಿದ್ದಾರೆ. ಗರ್ಭಿಣಿ ಮಹಿಳೆಯರೆಲ್ಲ ಒಂದೆಡೆ ತರಬೇತಿ ಒಂದಕ್ಕೆ ಸೇರುವ ಅಲ್ಲಿ ಎಲ್ಲರೂ ಆತ್ಮೀಯರಾಗುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವು ನವೆಂಬರ್ 18 ರಂದು ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆಗಲಿದೆ.

'ಸಿತಾ ರಾಮಮ್' ಮತ್ತೆ ಬಿಡುಗಡೆ

'ಸಿತಾ ರಾಮಮ್' ಮತ್ತೆ ಬಿಡುಗಡೆ

ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಎನಿಸಿಕೊಂಡು ಸುಂದರ ಪ್ರೇಮಕತೆ 'ಸೀತಾ ರಾಮಮ್' ಇದೀಗ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಕಂಡಿದೆ. ಈ ಹಿಂದೆ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದ ಈ ಸಿನಿಮಾ ಇದೀಗ ಹಿಂದಿಯಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತೆರೆಗೆ ಬಂದಿದೆ. ಚಿತ್ರಮಂದಿರ ಹಾಗೂ ಒಟಿಟಿ ಎರಡರಲ್ಲೂ ಈ ಸಿನಿಮಾ ಸೂಪರ್ ಹಿಟ್ ಆಗಿದೆ.

More from Filmibeat

English summary
Here is the list of movies and web series releasing on OTT this week starting from November 17 to November 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X