ಈ ವಾರಾಂತ್ಯಕ್ಕೆ ಒಟಿಟಿಗೆ ಲಗ್ಗೆ ಇಟ್ಟಿವೆ ಬ್ಲಾಕ್ ಬಸ್ಟರ್‌ ಸಿನಿಮಾಗಳು

ಶುಕ್ರವಾರ ಬಂತೆಂದರೆ ಈ ವಾರ ಯಾವ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ ಎಂಬ ಲೆಕ್ಕಾಚಾರ ಸಾಮಾನ್ಯ. ಆದರೆ ಕೋವಿಡ್ ನಂತರ ಶುಕ್ರವಾರದಂದು ಚಿತ್ರಮಂದಿರದ ಜೊತೆಗೆ ಒಟಿಟಿಗೆ ಯಾವ ಯಾವ ಸಿನಿಮಾ ಬಂದಿವೆ, ಬರುತ್ತಿವೆ ಎಂಬುದೂ ಮುಖ್ಯವಾಗುತ್ತಿದೆ.

ಕೋವಿಡ್‌ನಿಂದಾಗಿ ಚಿತ್ರಮಂದಿರಗಳು ಇಲ್ಲದ ಸಮಯದಲ್ಲಿ ಜನರನ್ನು ರಂಜಿಸಿದ್ದ, ವಿಶ್ವದ ಕಂಟೆಂಟ್‌ಗಳಿಗೆ ಪ್ರೇಕ್ಷಕರನ್ನು ಪರಿಚಯಿಸಿದ್ದ ಒಟಿಟಿಗಳು ಕೋವಿಡ್ ನಂತರವೂ ತಮ್ಮ ಪ್ರಭಾವ ಮುಂದುವರೆಸಿವೆ.

ಪ್ರತಿ ವಾರಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳು ದಾಂಗುಡಿ ಇಡುವಂತೆಯೇ ಒಟಿಟಿಗಳಿಗೂ ಹೊಸ ಸಿನಿಮಾಗಳು ಅಥವಾ ಚಿತ್ರಮಂದಿರಗಳಲ್ಲಿ ಗಮನ ಸೆಳೆದ, ಹಿಟ್ ಆದ ಸಿನಿಮಾಗಳು ಬರುತ್ತವೆ ಈ ವಾರ ಒಟಿಟಿಯಲ್ಲಿ ಯಾವ ಯಾವ ಸಿನಿಮಾಗಳು ಬಂದಿವೆ ಇಲ್ಲಿದೆ ಪಟ್ಟಿ.

ಕನ್ನಡದ ವೆಬ್ ಸರಣಿ 'ಹನಿಮೂನ್'

ಕನ್ನಡದ ವೆಬ್ ಸರಣಿ 'ಹನಿಮೂನ್'

ಕನ್ನಡದ ವೆಬ್ ಸರಣಿ 'ಹನಿಮೂನ್' ಇದೇ ಮೇ 20 ರಿಂದ ಒಟಿಟಿಗೆ ಕಾಲಿಟ್ಟಿದೆ. ನಾಗಭೂಷಣ್ ಹಾಗೂ ಸಂಜನಾ ಆನಂದ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ವೆಬ್ ಸರಣಿಗೆ ಬಂಡವಾಳ ಹೂಡಿರುವುದು ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ. ವೆಬ್ ಸರಣಿಗೆ ಕತೆ-ಚಿತ್ರಕತೆ ಬರೆದಿರುವುದು ಸ್ವತಃ ನಾಗಭೂಷಣ್. ವೆಬ್ ಸರಣಿಯಲ್ಲಿ 'ಲೂಸಿಯಾ' ಪವನ್ ಕುಮಾರ್ ಸಹ ನಟಿಸಿದ್ದಾರೆ.

'RRR' ಸಿನಿಮಾ ಬಂತು ಒಟಿಟಿಗೆ

'RRR' ಸಿನಿಮಾ ಬಂತು ಒಟಿಟಿಗೆ

ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ 'RRR' ಒಟಿಟಿಗೆ ಬಂದಿದೆ. ನೆಟ್‌ಫ್ಲಿಕ್ಸ್ ಹಾಗೂ ಜೀ5 ಎರಡೂ ಒಟಿಟಿಗಳಲ್ಲಿ ಏಕಕಾಲಕ್ಕೆ 'RRR' ಸಿನಿಮಾ ಬಿಡುಗಡೆ ಆಗಿದೆ. ಮೇ 20 ರಿಂದ ಎರಡೂ ಒಟಿಟಿಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಚಿತ್ರಮಂದಿರದಲ್ಲಿ ಕತ್ತರಿಸಲಾಗಿದ್ದ ಕೆಲ ದೃಶ್ಯಗಳು ಒಟಿಟಿ ಆವೃತ್ತಿಯಲ್ಲಿ ಇರಲಿವೆ ಎನ್ನಲಾಗುತ್ತಿದೆ. ರಾಜಮೌಳಿ ನಿರ್ದೇಶಿಸಿ, ಜೂ ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ನಟಿಸಿರುವ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

ನೇರ ಒಟಿಟಿಗೆ ಬಂದ '12th ಮ್ಯಾನ್'

ನೇರ ಒಟಿಟಿಗೆ ಬಂದ '12th ಮ್ಯಾನ್'

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ '12th ಮ್ಯಾನ್' ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. ನೇರವಾಗಿ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 11 ಜನ ಗೆಳೆಯರ ನಡುವೆ ನಡೆವ ಕತೆಯನ್ನು ಸಿನಿಮಾ ಒಳಗೊಂಡಿದೆ. ಆ 11 ಜನರ ಗೆಳೆಯರ ಗುಂಪಿಗೆ 12ನೇಯವನಾಗಿ ಮೋಹನ್‌ಲಾಲ್ ಸೇರಿಕೊಳ್ಳುತ್ತಾನೆ, ಅಲ್ಲಿಂದ ಕತೆ ಬೇರೆಯದೇ ತಿರುವು ಪಡೆದುಕೊಳ್ಳುತ್ತದೆ.

ಚಿತ್ರಮಂದಿರದಲ್ಲಿ ಸೋತಿದ್ದ 'ಆಚಾರ್ಯ'

ಚಿತ್ರಮಂದಿರದಲ್ಲಿ ಸೋತಿದ್ದ 'ಆಚಾರ್ಯ'

ಚಿರಂಜೀವಿ, ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿರುವ ತೆಲುಗು ಸಿನಿಮಾ 'ಆಚಾರ್ಯ' ಇಂದು ಒಟಿಟಿಗೆ ಕಾಲಿಟ್ಟಿದೆ. ಚಿತ್ರಮಂದಿರಗಳಲ್ಲಿ ಧಾರುಣವಾಗಿ ಸೋಲು ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದ್ದು, ಇಲ್ಲಿ ಏನಾದರೂ ಮ್ಯಾಜಿಕ್ ಮಾಡಲಿದೆಯೇ ಕಾದು ನೋಡಬೇಕಿದೆ. ಪೋಜಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸ್ವತಃ ರಾಮ್ ಚರಣ್ ತೇಜ. 'ಆಚಾರ್ಯ' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ.

ತೆಲುಗು ಸಿನಿಮಾ 'ಭಳಾ ತಂದನಾನ'

ತೆಲುಗು ಸಿನಿಮಾ 'ಭಳಾ ತಂದನಾನ'

ಆಕ್ಷನ್, ಥ್ರಿಲ್ಲರ್ ಸಿನಿಮಾ 'ಭಳಾ ತಂದನಾನ' ಸಿನಿಮಾ ಇದೇ ಶುಕ್ರವಾರ ಒಟಿಟಿಗೆ ಕಾಲಿಟ್ಟಿದೆ. ಮೇ 6 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ತುಸು ಗಮನ ಸೆಳೆದಿತ್ತು. ಇದೀಗ ಒಟಿಟಿಗೆ ಕಾಲಿಟ್ಟಿದೆ. ಪತ್ರಕರ್ತೆ ಹಾಗೂ ಆಕೆಯ ಬಾಯ್‌ಫ್ರೆಂಡ್ ಕತೆಯನ್ನು ಸಿನಿಮಾ ಒಳಗೊಂಡಿದೆ. 2000 ಕೋಟಿ ಯಾರ ಪಾಲಾಗುತ್ತದೆ ಎಂಬುದು ಕತೆಯ ಸಸ್ಪೆನ್ಸ್ ಅಂಶ. ಸಿನಿಮಾದಲ್ಲಿ ಕನ್ನಡಿಗ ಗರುಡ ರಾಮಚಂದ್ರ ವಿಲನ್.

'ಜೆರ್ಸಿ' ಸಿನಿಮಾ ಸ್ಟ್ರೀಮ್

'ಜೆರ್ಸಿ' ಸಿನಿಮಾ ಸ್ಟ್ರೀಮ್

'ಕೆಜಿಎಫ್ 2' ಜೊತೆಗೆ ಪ್ರತಿಸ್ಪರ್ಧೆಗೆ ನಿಂತು ನಂತರ ಹಿಂದೆ ಸರಿದ ಶಾಹಿದ್ ಕಪೂರ್ ಸಿನಿಮಾ 'ಜೆರ್ಸಿ' ಮೇ 20 ರಿಂದ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ತೆಲುಗಿನಲ್ಲಿ ನಾನಿ ನಟಿಸಿದ್ದ 'ಜೆರ್ಸಿ' ಸಿನಿಮಾದ ರೀಮೇಕ್ ಈ ಸಿನಿಮಾ ಆಗಿದ್ದು, ಶಾಹಿದ್ ನಟನೆ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸಿನಿಮಾವು ಚಿತ್ರಮಂದಿರದಲ್ಲಿ ಸಾಧಾರಣ ಯಶಸ್ಸು ಕಂಡಿತು.

'ಪಂಚಾಯತ್' ಮತ್ತು 'ಎಸ್ಕೈಪ್‌ ಲೈವ್'

'ಪಂಚಾಯತ್' ಮತ್ತು 'ಎಸ್ಕೈಪ್‌ ಲೈವ್'

ಜನಪ್ರಿಯ ವೆಬ್ ಸರಣಿ 'ಪಂಚಾಯತ್ 2' ಈಗಾಗಲೇ ಬಿಡುಗಡೆ ಆಗಿದ್ದು, ಈ ವಾರಾಂತ್ಯಕ್ಕೆ ವೀಕ್ಷಣೆಗೆ ಲಭ್ಯವಿದೆ. 'ಪಂಚಾಯತ್ 2' ವೆಬ್ ಸರಣಿ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಹಾಟ್‌ಸ್ಟಾರ್‌ನಲ್ಲಿ 'ಎಸ್ಕೈಪ್ ಲೈವ್' ಹೆಸರಿನ ಹೊಸ ವೆಬ್ ಸರಣಿ ಸಹ ಇಂದೇ ಬಿಡುಗಡೆ ಆಗಿದೆ. ತಮಿಳಿನ ಸ್ಟಾರ್ ನಟ ಸಿದ್ಧಾರ್ಥ್ ಈ ವೆಬ್ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಸಾಮಾಜಿಕ ಜಾಲತಾಣ ಹಾಗೂ ಕಿರು ವಿಡಿಯೋ ಆಪ್‌ಗಳ ಬಗ್ಗೆ ಈ ವೆಬ್ ಸರಣಿ ಚರ್ಚಿಸುತ್ತಿದೆ.

More from Filmibeat

English summary
movies releasing this week of May on OTT. Many Telugu, Hindi, Malayalam movies releasing this weekend. Kannada web series Honeymoon also releasing this week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X