twitter
    For Quick Alerts
    ALLOW NOTIFICATIONS  
    For Daily Alerts

    ಓಟಿಟಿ ಪ್ಲೇ ಅವಾರ್ಡ್ಸ್‌ನಲ್ಲಿ ಪ್ರಶಸ್ತಿ ಗೆದ್ದವರ ಪಟ್ಟಿ; ಕನ್ನಡಕ್ಕೆ ಕೇವಲ ಒಂದು ಅವಾರ್ಡ್

    |

    ಸೆಪ್ಟೆಂಬರ್ 11ರ ಭಾನುವಾರದಂದು ಮುಂಬೈನ ಜುಹುನಲ್ಲಿರುವ ಜೆಡಬ್ಲ್ಯೂ ಮ್ಯಾರಿಯೆಟ್ ಹೊಟೇಲ್‌ನಲ್ಲಿ ಒಟಿಟಿ ಪ್ಲೇ ಆಯೋಜಿಸಿದ್ದ ಒಟಿಟಿ ಪ್ಲೇ ಅವಾರ್ಡ್ಸ್ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಒಟಿಟಿಯಲ್ಲಿ ಬಿಡುಗಡೆಗೊಂಡು ಸದ್ದು ಮಾಡಿದ ಭಾರತದ ವಿವಿಧ ಭಾಷೆಯ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳನ್ನು ಹಾಗೂ ಅವುಗಳ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರಶಂಸಿಸಲಾಯಿತು.

    ಈ ವಿಭಿನ್ನ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾರತದಾದ್ಯಂತ ಅಬ್ಬರಿಸಿದ್ದ ಫ್ಯಾಮಿಲಿ ಮ್ಯಾನ್ 2, ತಮಿಳಿನಲ್ಲಿ ಇತ್ತೀಚಿಗೆ ಬಿಡುಗಡೆಯಾಗಿ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡಿದ್ದ ಸುಳಲ್ ರೀತಿಯ ವೆಬ್ ಸಿರೀಸ್‌ಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಹೀಗೆ ಪ್ರತಿಭೆಗಳಿಗೆ ತಕ್ಕ ಬೆಲೆ ಸಿಕ್ಕದ್ದು ಇನ್ನಷ್ಟು ಉತ್ತಮ ಚಿತ್ರ ಹಾಗೂ ವೆಬ್ ಸರಣಿಗಳನ್ನು ತಯಾರಿಸಲು ಪುಷ್ಟಿ ಸಿಕ್ಕಂತಾಗಿದೆ.

    ಇನ್ನು ಈ ಒಟಿಟಿ ಪ್ಲೇ ಅವಾರ್ಡ್ಸ್‌ನಲ್ಲಿ ಕನ್ನಡಕ್ಕೆ ಕೇವಲ ಒಂದು ಪ್ರಶಸ್ತಿ ದೊರಕಿತು. ರಿಷಭ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಸಿನಿಮಾ ಪ್ರಪಂಚದಲ್ಲಿ ಹೊಸತನದ ಅಲೆ ಎಬ್ಬಿಸಿದವರು ಎಂಬ ಪ್ರಶಸ್ತಿ ನೀಡಲಾಯಿತು. ಹೀಗೆ ಈ ಬಾರಿ ಯಾವ ಚಿತ್ರಕ್ಕೆ, ಯಾವ ಸರಣಿಗೆ ಹಾಗೂ ಯಾವ ಯಾವ ಕಲಾವಿದರಿಗೆ ಅವಾರ್ಡ್ ದೊರಕಿತು ಎಂಬ ಪಟ್ಟಿ ಈ ಕೆಳಕಂಡಂತಿದೆ.

    List of winners in OTT Play awards 2022

    ಅತ್ಯುತ್ತಮ ಚಿತ್ರಕಥೆ (ಸರಣಿ): ಪುಷ್ಕರ್ - ಗಾಯತ್ರಿ ( ಸುಳಲ್ - ತಮಿಳು)

    ಅತ್ಯುತ್ತಮ ಸಂಭಾಷಣೆಗಳು (ಸರಣಿ): ಮಂದಾರ (ಬಾಂಗ್ಲಾ) - ಪ್ರಾದೇಶಿಕ - ಅನಿರ್ಬನ್, ನಟ ಮತ್ತು ನಿರ್ದೇಶಕ

    ಅತ್ಯುತ್ತಮ ಉದಯೋನ್ಮುಖ ಪುರುಷ - ಸರಣಿ: ಕುನಾಲ್ ಕಪೂರ್ - ಎಂಪೈರ್

    ಅತ್ಯುತ್ತಮ ಉದಯೋನ್ಮುಖ ನಟಿ - ಸರಣಿ: ಸೋನಾಲಿ ಬೇಂದ್ರೆ - ಬ್ರೋಕನ್ ನ್ಯೂಸ್

    ಕಾಮಿಕ್ ಪಾತ್ರದಲ್ಲಿ ಅತ್ಯುತ್ತಮ ನಟ - ಸರಣಿ: ಜಮೀಲ್ ಖಾನ್ - ಗುಲ್ಲಕ್ 3

    ಗ್ರೇ ಪಾತ್ರದಲ್ಲಿ ಅತ್ಯುತ್ತಮ ನಟ - ಸರಣಿ: ಕಿಶೋರ್ - she 2

    ಅತ್ಯುತ್ತಮ ಪೋಷಕ ನಟ - ಸರಣಿ: ಪರಂಬ್ರತ ಚಟರ್ಜಿ - ಅರಣ್ಯಕ್

    ಅತ್ಯುತ್ತಮ ಪೋಷಕ ನಟಿ - ಸರಣಿ: ಕೊಂಕಣ ಸೇನ್ ಶರ್ಮಾ - ಮುಂಬೈ ಡೈರೀಸ್

    OTTplay ಓದುಗರ ಆಯ್ಕೆ ಪ್ರಶಸ್ತಿ: ಅತ್ಯುತ್ತಮ ಸರಣಿ: ಪ್ರಶಾಂತ್ ಪಾಂಡಿಯರಾಜ್ (ವಿಳಂಗು - ತಮಿಳು)

    ಅತ್ಯುತ್ತಮ ನಿರ್ದೇಶಕ - ಸರಣಿ: ಆರ್ ಮಾಧವನಿ, ವಿನೋದ್ ರಾವತ್, ಕಪಿಲ್ ಶರ್ಮಾ - ಆರ್ಯ 2

    ಅತ್ಯುತ್ತಮ ಕಥೆ (ಸರಣಿ): ಅರಣ್ಯಕ್ - ಚಾರು ದತ್ತಾ, ಬರಹಗಾರ

    ಅತ್ಯುತ್ತಮ ವೆಬ್ ಸರಣಿ (ಜ್ಯೂರಿ): ತಬ್ಬರ್ - ನಿರ್ದೇಶಕ ಅಜಿತ್ಪಾಲ್ ಸಿಂಗ್

    ಅತ್ಯುತ್ತಮ ವೆಬ್ ಸರಣಿ (ಜನಪ್ರಿಯ): ಫ್ಯಾಮಿಲಿ ಮ್ಯಾನ್ 2 - ರಾಜ್ ಮತ್ತು ಡಿಕೆ

    ಎಕ್ಸಲೆನ್ಸ್ ಇನ್ ರಿಯಾಲಿಟಿ ಫಿಕ್ಷನ್: ಮಸಬ ಗುಪ್ತಾ (ಮಸಬ ಮಸಬ 2)

    ಅತ್ಯುತ್ತಮ ನಟ - ಸರಣಿ (ಜ್ಯೂರಿ): ಮನೋಜ್ ಬಾಜಪೇಯಿ - ಕುಟುಂಬದ ವ್ಯಕ್ತಿ 2

    ಅತ್ಯುತ್ತಮ ನಟ - ಸರಣಿ (ಜನಪ್ರಿಯ): ತಾಹಿರ್ ರಾಜ್ ಭಾಸಿನ್ - ಯೇ ಕಾಲಿ ಕಾಲಿ ಆಂಖೇನ್

    ಅತ್ಯುತ್ತಮ ನಟಿ - ಸರಣಿ (ಜನಪ್ರಿಯ):ರವೀನಾ ಟಂಡನ್ (ಅರಣ್ಯಕ್)

    ಒಟಿಟಿಯಲ್ಲಿ ಬೆಸ್ಟ್ ಆನ್‌ಸ್ಕ್ರೀನ್ ಜೋಡಿ: ಧ್ರುವ್ ಸೆಹಗಲ್ ಮತ್ತು ಮಿಥಿಲಾ ಪಾಲ್ಕರ್ - ಲಿಟಲ್ ಥಿಂಗ್ಸ್ ಸೀಸನ್ 4

    ಉದಯೋನ್ಮುಖ OTT ಸ್ಟಾರ್ (ಪುರುಷ): ಪ್ರಿಯದರ್ಶಿ (ಅನ್‌ಹರ್ಡ್ ಮತ್ತು ಲೂಸರ್ಸ್ 2) - ತೆಲುಗು

    ಉದಯೋನ್ಮುಖ OTT ಸ್ಟಾರ್ (ಮಹಿಳೆ): ದುಶಾರ ವಿಜಯನ್ (ಸರ್ಪಟ್ಟ ಪರಂಬರೈ - ತಮಿಳು) ಮತ್ತು ಐಶ್ವರ್ಯ ಲಕ್ಷ್ಮಿ (ಕಾನೆಕ್ಕನೆ - ಮಲಯಾಳಂ)

    ಅತ್ಯುತ್ತಮ ಸಂಭಾಷಣೆಗಳು - ಚಲನಚಿತ್ರಗಳು: ಹಸೀನ್ ದಿಲ್ರುಬಾ - ಕನಿಕಾ ಧಿಲ್ಲೋನ್

    ವರ್ಷದ OTT ಪ್ರದರ್ಶನ: ರಾಜೇಂದ್ರ ಪ್ರಸಾದ್ (ಸೇನಾಪತಿ - ತೆಲುಗು)

    ಅತ್ಯುತ್ತಮ ಕಥೆ - ಚಲನಚಿತ್ರ: ಮಾಲಿಕ್ (ಮಲಯಾಳಂ) - ನಿರ್ದೇಶಕ ಮಹೇಶ್ ನಾರಾಯಣನ್

    ಅತ್ಯುತ್ತಮ ಉದಯೋನ್ಮುಖ ನಟ - ಚಲನಚಿತ್ರ: ಅಭಿಮನ್ಯು ದಸ್ಸಾನಿ (ಮೀನಾಕ್ಷಿ ಸುಂದರೇಶ್ವರ್) - ಭಾಗ್ಯಶ್ರೀ

    ಅತ್ಯುತ್ತಮ ಉದಯೋನ್ಮುಖ ನಟಿ - ಚಲನಚಿತ್ರ: ನಿಮ್ರತ್ ಕೌರ್ (ದಾಸ್ವಿ)

    ಕಾಮಿಕ್ ಪಾತ್ರದಲ್ಲಿ ಅತ್ಯುತ್ತಮ ನಟ - ಚಲನಚಿತ್ರ: ದೀಪಕ್ ಡೊಬ್ರಿಯಾಲ್ - ಗುಡ್ ಲಕ್ ಜೆರ್ರಿ

    ಅತ್ಯುತ್ತಮ ಖಳ ನಟ - ಚಲನಚಿತ್ರ: ಹರ್ಷವರ್ಷನ್ ರಾಣೆ (ಹಸೀನ್ ದಿಲ್ರುಬಾ)

    ಅತ್ಯುತ್ತಮ ಪೋಷಕ ನಟ - ಚಲನಚಿತ್ರ: ಸತೀಶ್ ಕೌಶಿಕ್ (ಥಾರ್)

    ಅತ್ಯುತ್ತಮ ಪೋಷಕ ನಟಿ - ಚಲನಚಿತ್ರ: ನೇಹಾ ಧೂಪಿಯಾ (ಎ ಥರ್ಸ್‌ಡೇ)ಹಾಗೂ ಸಾಯಿ ತಮ್ಹಂಕರ್ (ಮಿಮಿ)

    ಅತ್ಯುತ್ತಮ ವೆಬ್ ಮೂಲ ಚಿತ್ರ (ಜ್ಯೂರಿ): ದಸ್ವಿ (ನಿರ್ದೇಶಕ - ತುಷಾರ್ ಜಲೋಟಾ, ಇಬ್ಬರು ನಿರ್ಮಾಪಕರು)

    ಅತ್ಯುತ್ತಮ ವೆಬ್ ಮೂಲ ಚಿತ್ರ (ಜನಪ್ರಿಯ): ಶೇರ್ಷಾ - ನಿರ್ಮಾಪಕರು - ಕರಣ್, ಶಬೀರ್, ಅಪೂರ್ವ ಹಾಗೂ ಜೈ ಭೀಮ್ - ನಿರ್ದೇಶಕ ಮತ್ತು ಸಹ ನಿರ್ಮಾಪಕ

    ಅತ್ಯುತ್ತಮ ನಿರ್ದೇಶಕ - ಚಲನಚಿತ್ರ: ಶೂಜಿತ್ ಸಿರ್ಕಾರ್ - ಉದ್ಧಮ್ ಸಿಂಗ್

    ದಶಕದ ಚಲನಚಿತ್ರ ನಿರ್ಮಾಪಕ: ಪಾ ರಂಜಿತ್ - ತಮಿಳು

    ಬ್ರೇಕ್‌ಥ್ರೋ ಪರ್ಫಾರ್ಮರ್ ಆಫ್ ದ ಇಯರ್ (ನಟ): ಗುರು ಸೋಮಸುಂದರಂ (ಮಿನ್ನಲ್ ಮುರಳಿ)

    ಬ್ರೇಕ್‌ಥ್ರೋ ಪರ್ಫಾರ್ಮರ್ ಆಫ್ ದ ಇಯರ್ ( ನಟಿ ): ಸಾರಾ ಅಲಿ ಖಾನ್ (ಅತ್ರಂಗಿ ರೆ)

    ಹೊಸ ಅಲೆಯ ಸಿನಿಮಾಕ್ಕೆ ಪ್ರವರ್ತಕ ಕೊಡುಗೆಗಳು: ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ (ಕನ್ನಡ)

    ಅತ್ಯುತ್ತಮ ನಟ - ಚಲನಚಿತ್ರ (ಜ್ಯೂರಿ): ಆರ್ಯ (ಸರ್ಪಟ್ಟ ಪರಂಪರೈ) ಹಾಗೂ ಫರ್ಹಾನ್ ಅಖ್ತರ್ (ತೂಫಾನ್)

    ಅತ್ಯುತ್ತಮ ನಟಿ - ಚಲನಚಿತ್ರ (ಜ್ಯೂರಿ): ವಿದ್ಯಾ ಬಾಲನ್ - ಜಲ್ಸಾ

    ಅತ್ಯುತ್ತಮ ನಟ ನಟಿ - ಚಲನಚಿತ್ರ (ಜನಪ್ರಿಯ): ತಾಪ್ಸಿ ಪನ್ನು (ಹಸೀನ್ ದಿಲ್ರುಬಾ)

    ಅತ್ಯುತ್ತಮ ನಟ - ಚಲನಚಿತ್ರ (ಜನಪ್ರಿಯ): ಕಾರ್ತಿಕ್ ಆರ್ಯನ್ (ಧಮಾಕಾ)

    English summary
    Description: List of award winners in OTT Play awards 2022 . Take a look
    Wednesday, September 14, 2022, 19:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X