ಮನೆಯಲ್ಲಿಯೇ ಕಣ್ತುಂಬಿಕೊಳ್ಳಿ ಕಲ್ಯಾಣಿಯ ಬ್ಲಾಕ್‌ಬಸ್ಟರ್ 'ಲೋಕ', ಕನ್ನಡದಲ್ಲಿಯೂ ನೋಡಬಹುದು

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.

ಆದರೆ ಈಗ .. ಎಷ್ಟೇ ಪ್ರಚಾರ ಮಾಡಿದರು ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಹೊಸಬರು ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ.

Lokah Chapter 1 Chandra OTT When to watch Malayalam s record 300-crore film on JioHotstar

ಹೀಗಿರುವಾಗ ಮಲಯಾಳಂ ಚಿತ್ರರಂಗವನ್ನು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವನ್ನು ತಮ್ಮ ''ಲೋಕಾ-ಚಾಪ್ಟರ್ 1 : ಚಂದ್ರ'' ಚಿತ್ರದ ಮೂಲಕ ಬೆಕ್ಕಸ ಬೆರಗಾಗಿಸಿದವರು ಕಲ್ಯಾಣಿ ಪ್ರಿಯದರ್ಶನ್.

''ಲೋಕಾ'' ಚಿತ್ರದ ಮೂಲಕ ಲೋಕ ಇನ್ನೊಮ್ಮೆ ಮಲಯಾಳಂ ಚಿತ್ರರಂಗದತ್ತ ತಿರುಗಿ ನೋಡಿತ್ತು. ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಇಷ್ಟೇ ಅಲ್ಲ ಹತ್ತು ಹಲವು ದಾಖಲೆಗಳನ್ನು ಮುರಿದ ''ಲೋಕಾ-ಚಾಪ್ಟರ್ 1 : ಚಂದ್ರ'' 300 ಕೋಟಿಯ ಗಡಿಯನ್ನು ದಾಟಿದ ಮೊದಲ ಮಲಯಾಳಂ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿತ್ತು.

ಇಂಥಾ ಲೋಕ-ಚಾಪ್ಟರ್ 1 : ಚಂದ್ರ ಚಿತ್ರವನ್ನು ಮನೆಯಲ್ಲಿಯೇ ಮನೆ ಮಂದಿ ಜೊತೆ ಕುಳಿತು ನೋಡಲು ಹಲವರು ಕಾಯುತ್ತಿದ್ದರು. ಈ ಕಾಯುವಿಕೆ ಈಗ ಕೊನೆಯಾಗಿದೆ. ''ಲೋಕಾ-ಚಾಪ್ಟರ್ 1 : ಚಂದ್ರ'' ಕೊನೆಗೂ ಓಟಿಟಿಗೆ ಲಗ್ಗೆ ಇಡುತ್ತಿದೆ.

ವಿಶೇಷ ಅಂದರೆ ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಮಲಯಾಳಂನಲ್ಲಿ ಮೊದಲು ಬಿಡುಗಡೆಯಾಗಿ ಆ ನಂತರ ಬಹುಬೇಡಿಕೆಯ ಮೇರೆಗೆ ಹಿಂದಿಗೆ ಡಬ್ ಆಗಿದ್ದ 'ಲೋಕಾ-ಚಾಪ್ಟರ್ 1 : ಚಂದ್ರ'' ಚಿತ್ರ ಕನ್ನಡಕ್ಕೂ ಕೂಡ ಡಬ್ ಮಾಡಲಾಗಿದೆ. ಈ ಹಿನ್ನೆಲೆ ಕನ್ನಡದಲ್ಲಿಯೇ ನೀವು ಕೂಡ ನೋಡಬಹುದು. ಕೇವಲ ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಬೆಂಗಾಲಿ ಮತ್ತು ಮರಾಠಿಗೆ ಕೂಡ ಈ ಚಿತ್ರವನ್ನು ಡಬ್ ಮಾಡಿರುವುದು ವಿಶೇಷ.

Lokah Chapter 1 Chandra OTT When to watch Malayalam s record 300-crore film on JioHotstar

ಅಂದ್ಹಾಗೇ ಆಗಸ್ಟ್ 28ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ, ಅಲ್ಲಿ.. ಇಲ್ಲಿ.. ಪ್ರದರ್ಶನ ಕಾಣುತ್ತೆ ಎನ್ನುವ ಊಹಾಪೋಹಗಳಿದ್ದವು. ಇನ್ನೇನು, ಚಿತ್ರ ಓಟಿಟಿಯಲ್ಲಿ ಪ್ರಸಾರವಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅಕ್ಟೋಬರ್ 17.. ಅಕ್ಟೋಬರ್ 20.. ಹೀಗೆ ಒಂದಾದ ಮೇಲೊಂದರಂತೆ ದಿನಾಂಕಗಳನ್ನು ಪ್ರಕಟಿಸಲಾಗಿತ್ತು.

ಆದರೆ, ಚಿತ್ರತಂಡವಾಗಲಿ ಅಥವಾ ಓಟಿಟಿಯ ವೇದಿಕೆಯಿಂದ ಆಗಲಿ.. ಈ ಕುರಿತು ಯಾವ ಸ್ಪಷ್ಟನೆ ಸಿಕ್ಕಿರಲಿಲ್ಲ. ಸ್ಪಷ್ಟವಾದ ಚಿತ್ರಣ ಕೂಡ ಇರಲಿಲ್ಲ. ಆದರೆ ಈಗ ಖುದ್ದು ಚಿತ್ರದ ಹಕ್ಕುಗಳನ್ನು ಖರೀದಿ ಮಾಡಿರುವ ಜೀಯೋ ಹಾಟ್‌ ಸ್ಟಾರ್‌ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದು ಇದೇ ಅಕ್ಟೋಬರ್ 31ರಂದು ಪ್ರಸಾರವಾಗಲಿದೆ ಎಂದು ತಿಳಿಸಿದೆ. ಈ ಮೂಲಕ ''ಲೋಕ'' ಚಿತ್ರಕ್ಕೆ ಕಾಯುತ್ತಿದ್ದ ಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಇನ್ನುಳಿದಂತೆ ಡೊಮಿನಿಕ್ ಅರುಣ್ ನಿರ್ದೇಶನದ ಈ ಚಿತ್ರವನ್ನು ಮಲಯಾಳಂನ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ಜೊತೆ ನಸ್ಲೀನ್.. ಸ್ಯಾಂಡಿ ಮಾಸ್ಟರ್.. ಚಂದ್ರು ಸಲೀಂ ಕುಮಾರ್.. ಅರುಣ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ಧಾರೆ. ಒಟ್ನಲ್ಲಿ ಸದ್ಯ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ''ಲೋಕ'' ಇದೇ ಅಕ್ಟೋಬರ್ 31ರಂದು ಜೀಯೋ ಹಾಟ್‌ ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಆಸಕ್ತರು ಮನೆಯಲ್ಲಿಯೇ ಚಿತ್ರವನ್ನು ನೋಡಬಹುದು. ಕನ್ನಡದಲ್ಲಿ ಕೂಡ ಆಯ್ಕೆ ಇದೆ ಎನ್ನುವುದನ್ನು ಮರೆಯಬೇಡಿ.

More from Filmibeat

English summary
Watch Kalyani Priyadarshan as India's first female superhero, Chandra, in the record-shattering film, Lokah: Chapter 1. Stream the beginning of the new cinematic universe, exclusively on JioHotstar
Read more about: mollywood blockbuster
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X