ಲೂಸ್ ಮಾದ ಯೋಗಿ ನಟನೆಯ 'ಸಿದ್ಲಿಂಗು- 2' ಓಟಿಟಿ ಸ್ಟ್ರೀಮಿಂಗ್ ಡಿಟೈಲ್ಸ್

ಯಾವುದೇ ದೊಡ್ಡ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಒಂದ್ಕಡೆ ಭಾರತ- ಪಾಕ್ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದೆ. ಮತ್ತೊಂದು ಕಡೆ ಐಪಿಎಲ್ ಟೂರ್ನಿ. ಒಂದು ವಾರ ಸ್ಥಗಿತಗೊಂಡಿದ್ದ ಟೂರ್ನಿ ಶೀಘ್ರದಲ್ಲೇ ಪುನರಾರಂಭವಾಗಲಿದೆ. ಹಾಗಾಗಿ ಸದ್ಯಕ್ಕೆ ಯಾವುದೇ ಸಿನಿಮಾ ತೆರೆಗೆ ಬರುವ ಧೈರ್ಯ ಆಡುವುದಿಲ್ಲ.

ಚಿತ್ರಮಂದಿರಗಳಲ್ಲಿ ಮನರಂಜನೆ ಮಿಸ್ ಮಾಡಿಕೊಂಡವರಿಗೆ ಓಟಿಟಿ ಕಡೆ ಮುಖ ಮಾಡಿದ್ದಾರೆ. ಪ್ರತಿ ವೀಕೆಂಡ್ ಯಾವ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎಂದು ಕಾಯುವಂತಾಗಿದೆ. ಕನ್ನಡದ ಕೆಲ ಸಿನಿಮಾಗಳು ಇತ್ತೀಚೆಗೆ ಓಟಿಟಿಗೆ ಬಂದು ವೀಕ್ಷಕರನ್ನು ರಂಜಿಸುತ್ತಿದೆ. ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳ ಸ್ಟ್ರೀಮಿಂಗ್‌ಗಾಗಿ ವೀಕ್ಷಕರು ಕಾಯುವಂತಾಗಿದೆ.

Loose Maada Yogi starrer Sidlingu- 2 movie ott streaming details

ಲೂಸ್ ಮಾದ ಯೋಗಿ ನಟನೆಯ 'ಸಿದ್ಲಿಂಗು'-2 ಸಿನಿಮಾ ಓಟಿಟಿಗೆ ಬರಲೇಯಿಲ್ಲ. ಫೆಬ್ರವರಿ 14ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆದರೆ ದೊಡ್ಡ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಸಾಕಷ್ಟು ಜನ ಸಿನಿಮಾ ಓಟಿಟಿಗೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ವಿಜಯ ಪ್ರಸಾದ್ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಚಿತ್ರವನ್ನು ಶ್ರೀಹರಿ ಹಾಗೂ ರಾಜು ಶೆರೆಗರ್ ನಿರ್ಮಾಣ ಮಾಡಿದ್ದರು.

13 ವರ್ಷಗಳ ಹಿಂದೆ ಬಂದಿದ್ದ 'ಸಿದ್ಲಿಂಗು' ಹಿಟ್ ಆಗಿತ್ತು. ಸಿದ್ಲಿಂಗು ಯೋಗಿ ಜೊತೆ ಟೀಚರ್ ಮಂಗಳಾ ಆಗಿ ರಮ್ಯಾ ನಟಿಸಿದ್ದರು. ಅದರ ಸೀಕ್ವೆಲ್‌ನಲ್ಲಿ ಸೋನು ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಸುಮನ್ ರಂಗನಾಥ್, ಮಂಜುನಾಥ್ ಹೆಗ್ಡೆ, ಬಿ. ಸುರೇಶ್, ಪದ್ಮಜಾ ರಾವ್ ಚಿತ್ರದ ತಾರಾಗಣದಲ್ಲಿದ್ದಾರೆ. ಇದು ಕೂಡ ಪಕ್ಕಾ ವಿಜಯ್ ಪ್ರಸಾದ್ ಸ್ಟೈಲ್ ಕಾಮಿಡಿ ಎಂಟರ್‌ಟೈನರ್.

ನಾಯಕ ಕಾರ್ ಖರೀದಿಸುವ ಸಂಗತಿ ಸುತ್ತಾ 'ಸಿದ್ಲಿಂಗು' ಕಥೆ ಸುತ್ತಿತ್ತು. ಇನ್ನೇನು ಆತ ಕಾರ್ ತೆಗೆದುಕೊಂಡ ಎನ್ನುವ ವೇಳೆಗೆ ಎಲ್ಲಾ ಉಲ್ಟಾ ಪಲ್ಟಾ ಆಗಿತ್ತು. ಮಂಗಳಾ ಟೀಸರ್ ಕೂಡ ಸತ್ತು ಚಿತ್ರ ಟ್ರ್ಯಾಜಿಡಿ ಅಂತ್ಯ ಕಂಡಿತ್ತು. ಸೀಕ್ವೆಲ್ ಕಥೆ ಅಲ್ಲಿಂದಲೇ ಶುರುವಾಗುತ್ತದೆ. ಸಿದ್ಲಿಂಗು ಈಗ ಪೋಲಿಯಾಗಿ ಮಾತನಾಡುವ ಪಡ್ಡೆ ಹುಡುಗ ಅಲ್ಲ. ಬಹಳ ಪ್ರಬುದ್ಧನಾಗಿದ್ದಾನೆ. ಎಮೋಷನಲ್ ಸನ್ನಿವೇಶಗಳಲ್ಲಿ ಬಹಳ ಇಷ್ಟವಾಗುತ್ತಾರೆ.

Loose Maada Yogi starrer Sidlingu- 2 movie ott streaming details

ಸೀಕ್ವೆಲ್‌ನಲ್ಲಿ ಕೂಡ 'ಸಿದ್ಲಿಂಗು' ಕಾರ್ ಹಿಂದೆ ಬಿದ್ದಿದ್ದಾನೆ. ಜೊತೆಗೆ ಒಂದಷ್ಟು ಹೊಸ ಜೀವಗಳು ಜೊತೆಯಾಗುತ್ತವೆ. ಮುಂದೇನು ಎನ್ನುವುದು ಸಿನಿಮಾ ಕಥೆ. ಅಂದಹಾಗೆ 'ಸಿದ್ಲಿಂಗು'-2 ಸಿನಿಮಾ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂ ವೀಡಿಯೋಗೆ ಮಾರಾಟ ಆಗಿರುವುದಾಗಿ ನಿರ್ದೇಶಕ ವಿಜಯ ಪ್ರಸಾದ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಆದರೆ ಸಿನಿಮಾ ಸ್ಟ್ರೀಮಿಂಗ್ ಡೇಟ್ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದಷ್ಟು ಬೇಗ ಸ್ಟ್ರೀಮಿಂಗ್ ಆಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಈ ವಾರವೇ 'ಸಿದ್ಲಿಂಗು'-2 ಸಿನಿಮಾ ಪ್ರೈಂ ವೀಡಿಯೋಗೆ ಬಂದರೂ ಅಚ್ಚರಿಪಡಬೇಕಿಲ್ಲ. ಚಿತ್ರದಲ್ಲಿ 2 ಹಾಡುಗಳಿದ್ದು ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಸನ್ನ ಗುರ್ಲೆಕೆರೆ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಚಿತ್ರಕ್ಕಿದೆ.

More from Filmibeat

English summary
Director Vijaya Prasad reacts on Sidlingu- 2 movie ott release date and platform
Read more about: yogesh sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X