Love Mocktail 2: 'ಲವ್ ಮಾಕ್ಟೇಲ್ 2' ಒಟಿಟಿಯಲ್ಲೂ No.1!

ಕನ್ನಡ ಸಿನಿಮಾಗಳು ಒಟಿಟಿ ವೇದಿಕೆಯಲ್ಲೂ ಕೂಡ ಇತ್ತೀಚೆಗೆ ಹೆಚ್ಚಾಗಿ ಸದ್ದು ಮಾಡುತ್ತಾ ಇವೆ. 'ಭಜರಂಗಿ 2' ಮತ್ತು 'ಗರುಡ ಗಮನ ವೃಷಭ ವಾಹನ' ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡು ದೊಡ್ಡ ಮಟ್ಟದ ದಾಖಲೆ ಮಾಡಿದ್ದವು. ಅಂತೆಯೇ ಈಗ ಕನ್ನಡದ 'ಲವ್‌ ಮಾಕ್ಟೇಲ್ 2' ಸಿನಿಮಾ ಕೂಡ ಸದ್ದು ಮಾಡೋಕೆ ಶುರು ಮಾಡಿದೆ.

'ಲವ್ ಮಾಕ್ಟೇಲ್ 2' ಚಿತ್ರ ಈಗಾಗಲೇ ಥಿಯೇಟರ್‌ನಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಥಿಯೇಟರ್ ಬಳಿಕ ಸಿನಿಮಾ ಒಟಿಟಿಗೆ ಬಂದಿದೆ. ಒಟಿಟಿಯಲ್ಲಿ ಕೂಡ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ವಿಚಾರವನ್ನು ನಟಿ, ನಿರ್ಮಾಪಕಿ ಮಿಲನಾ ನಾಗರಾಜ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಒಟಿಟಿಯಲ್ಲಿ ಸಿನಿಮಾ ಮೊದಲ ಸ್ಥಾನದಲ್ಲಿ ಇರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಮಾರ್ಚ್ 15ರ ಮಧ್ಯ ರಾತ್ರಿ ಸಿನಿಮಾ ರಿಲೀಸ್ ಆಗಿದೆ. ಒಂದು ದಿನ ಪೂರ್ಣಗೊಳ್ಳುವ ಮೊದಲೇ ಸಿನಿಮಾ ದಾಖಲೆ ಬರೆದಿದೆ. ಅಮೆಜಾನ್ ಟಾಪ್ ಹತ್ತು ಸಿನಿಮಾಗಳಲ್ಲಿ 'ಲವ್ ಮಾಕ್ಟೇಲ್ 2' ಮೊದಲ ಸ್ಥಾನದಲ್ಲಿ ಇದೆ.

Love Mocktail 2 Movie No.1 In Ott Amazon Prime Video

ಈ ಚಿತ್ರದಲ್ಲಿ ನಟ ಕೃಷ್ಣ, ಮಿಲನಾ ನಾಗರಾಜ್ ಹೈಲೈಟ್. ಜೊತೆಗೆ ರಾಚೆಲ್ ಡೇವಿಡ್, ಅಮೃತಾ ಅಯ್ಯಂಗಾರ್, ಸುಷ್ಮಿತಾ ಸೇರಿದಂತೆ ಹಲವು ಕಲಾವಿದರು ಇದ್ದಾರೆ. ಸಿನಿಮಾ ಕೇವಲ ಲವ್, ಬ್ರೇಕಪ್, ಟ್ರ್ಯಾಜಿಡಿ ಹಿಂದೆ ಹೋಗದೇ ನಗುವಿನ ಹೋನಲನ್ನು ಹರಿಸುತ್ತದೆ. ಕಾಮಿಡಿಯನ್ನು ಚಿತ್ರದಲ್ಲಿ ಹೆಚ್ಚಾಗಿ ಹೈಲೈಟ್ ಮಾಡಲಾಗಿದೆ. ಹಾಗಾಗಿ ಎಲ್ಲಾ ರೀತಿಯ ಎಮೋಷನ್‌ಗಳು ಚಿತ್ರದಲ್ಲಿ ಮಿಕ್ಸ್ ಆಗಿವೆ.

ಇನ್ನು ಒಟಿಟಿ ವಿಚಾರಕ್ಕೆ ಬರುವುದಾದರೆ ಸಿನಿಮಾ ಕನ್ನಡದ 'ಭಜರಂಗಿ 2' ಮತ್ತು 'ಗರುಡ ಗಮನ ವೃಷಭ ವಾಹನ' ಸಿನಿಮಾಗಳು ದಾಖಲೆ ಬರೆದಿವೆ. ರಿಲೀಸ್ ಆದ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು 'ಭಜರಂಗಿ 2' ಸಿನಿಮಾ ಅತಿ ವೇಗವಾಗಿ 200 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳ ಗಡಿ ಮುಟ್ಟಿ ಸೈ ಎನಿಸಿಕೊಂಡಿತ್ತು. ಇನ್ನು 'ಗರುಡ ಗಮನ ವೃಷಭ ವಾಹನ' ಚಿತ್ರ ಕೂಡ 8 ಕೋಟಿ ಸ್ಟ್ರೀಮಿಂಗ್ ನಿಮಿಷಗಳನ್ನು ಅತಿ ವೇಗವಾಗಿ ದಾಟಿ ದಾಖಲೆ ಮಾಡಿತ್ತು.

More from Filmibeat

English summary
Love Mocktail 2 Movie No.1 In Ott Amazon Prime Video, Actress Milana Nagaraj Talk About it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X