For Quick Alerts
  ALLOW NOTIFICATIONS  
  For Daily Alerts

  'ಲೂಸಿಯಾ' ಪವನ್ ಕುಮಾರ್ ವೆಬ್ ಸರಣಿಯಲ್ಲಿ ಅಮಲಾ ಪೌಲ್

  |

  ಸ್ಯಾಂಡಲ್ ವುಡ್ ನಲ್ಲಿ ಲೂಸಿಯ ಮತ್ತು ಯು ಟರ್ನ್ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿರುವ ನಿರ್ದೇಶಕ ಪವನ್ ಕುಮಾರ್ ಸದ್ಯ ವೆಬ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಪವನ್ ವೆಬ್ ಸರಣಿ ನಿರ್ದೇಶನ ಮಾಡುತ್ತಿರುವುದು ತೆಲುಗಿನಲ್ಲಿ.

  ತೆಲುಗು ಒಟಿಟಿಗಾಗಿ ಪವನ್ ಕುಮಾರ್ ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನಲ್ಲಿ ತಮ್ಮದೆ ಆದ ಒಟಿಟಿ ಇರಬೇಕೆಂದು ಆಹಾ ಒಟಿಟಿಯನ್ನು ಮಾಡಿಕೊಂಡಿದ್ದಾರೆ. ಅಹಾ ಒಟಿಟಿಗೆ ಪವನ್ ಕುಮಾರ್ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ವೆಬ್ ಸರಣಿಯ ಚಿತ್ರೀಕರಣ ಪ್ರಾರಂಭವಾಗಿದ್ದು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ವಿಶೇಷ ಎಂದರೆ ವೆಬ್ ಸರಣಿಯಲ್ಲಿ ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದೆ ಓದಿ...

  'ಬಲ'ವನ್ನು 'ಎಡ' ಮಾಡಲು ತೆಲುಗಿಗೆ ಹೋದ ಲೂಸಿಯಾ ಪವನ್'ಬಲ'ವನ್ನು 'ಎಡ' ಮಾಡಲು ತೆಲುಗಿಗೆ ಹೋದ ಲೂಸಿಯಾ ಪವನ್

  'ಕುಡಿ ಎಡಮೈತೆ' ವೆಬ್ ಸರಣಿ ಚಿತ್ರೀಕರಣದಲ್ಲಿ ಪವನ್

  'ಕುಡಿ ಎಡಮೈತೆ' ವೆಬ್ ಸರಣಿ ಚಿತ್ರೀಕರಣದಲ್ಲಿ ಪವನ್

  ವೆಬ್ ಸರಣಿಗೆ 'ಕುಡಿ ಎಡಮೈತೆ' ಎನ್ನುವ ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ರಾಹುಲ್ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಸೈನ್ಸ್ ಫಿಕ್ಷನ್ ಥ್ರಿಲ್ಲರ್ ವೆಬ್ ಸರಣಿಯಾಗಿದ್ದು ನಿರ್ದೇಶಕ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಮುಂದಿನ ವರ್ಷ ಜನವರಿ ಕೊನೆಯಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿದೆ ತಂಡ.

  ಚಿತ್ರೀಕರಣದ ಫೋಟೋ ಹಂಚಿಕೊಂಡ ಪವನ್

  ಚಿತ್ರೀಕರಣದ ಫೋಟೋ ಹಂಚಿಕೊಂಡ ಪವನ್

  ಅಂದಹಾಗೆ 'ಕುಡಿ ಎಡಮೈತೆ' ಪವನ್ ಕುಮಾರ್ ನಿರ್ದೇಶನದ ಎರಡನೇ ವೆಬ್ ಸರಣಿ. ಈಗಾಗಲೇ ಪವನ್ ನೆಟ್ ಫ್ಲಿಕ್ಸ ನಲ್ಲಿ ವೆಬ್ ಸರಣಿ ಮಾಡುವ ಮೂಲಕ ಆನ್ ಲೈನ್ ವಿಭಾಗದಲ್ಲಿ ಸಕ್ರೀಯರಾಗಿದ್ದಾರೆ. 'ಕುಡಿ ಎಡಮೈತೆ' ವೆಬ್ ಸರಣಿಯ ಚಿತ್ರೀಕರಣ ಪೋಟೋಗಳನ್ನು ಪವನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ವಿದೇಶಿ ಭಾಷೆಗೆ ರೀಮೇಕ್ ಆಗಲಿದೆ ಕನ್ನಡದ ಸಿನಿಮಾವಿದೇಶಿ ಭಾಷೆಗೆ ರೀಮೇಕ್ ಆಗಲಿದೆ ಕನ್ನಡದ ಸಿನಿಮಾ

  ಯುಟರ್ನ್ ತೆಲುಗು ರಿಮೇಕ್ ನಿರ್ದೇಶನ

  ಯುಟರ್ನ್ ತೆಲುಗು ರಿಮೇಕ್ ನಿರ್ದೇಶನ

  ಅಂದಹಾಗೆ ಪವನ್ ಕುಮಾರ್ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕನ್ನಡದ ಯು ಟರ್ನ್ ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಿದ್ದಾರೆ. ನಟಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ವೆಬ್ ಸರಣಿ ಮೂಲಕ ಮತ್ತೆ ತೆಲುಗು ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿದ್ದಾರೆ.

  ಗಾಳಿಪಟ-2 ಸಿನಿಮಾದಲ್ಲಿ ಪವನ್ ನಟನೆ

  ಗಾಳಿಪಟ-2 ಸಿನಿಮಾದಲ್ಲಿ ಪವನ್ ನಟನೆ

  ಪವನ್ ಕುಮಾರ್ ಸದ್ಯ ಕನ್ನಡದಲ್ಲಿ ಗಾಳಿಪಟ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಚಿತ್ರೀಕರಣ ಆಗಲೇ ಪ್ರಾರಂಭವಾಗಿದೆ. ಆದರೆ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಮುಂದಿನ ವರ್ಷ ಅಂದರೆ ಜನವರಿಯಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

  English summary
  Lusia fame director Pawan Kumar joined hands with Actress Amala paul for web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X