For Quick Alerts
  ALLOW NOTIFICATIONS  
  For Daily Alerts

  'ಬಲ'ವನ್ನು 'ಎಡ' ಮಾಡಲು ತೆಲುಗಿಗೆ ಹೋದ ಲೂಸಿಯಾ ಪವನ್

  |

  ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್‌ಗಳನ್ನು ವಿರೋಧಿಸಿ, ನಮ್ಮದೇ ಆದ ಒಟಿಟಿ ಫ್ಲ್ಯಾಟ್‌ಫಾರಂ ಇರಬೇಕೆಂದು ಒತ್ತಾಯಿಸುತ್ತಿರುವ ಲೂಸಿಯಾ ಪವನ್, ತೆಲುಗಿನ ಒಟಿಟಿ ಒಂದಕ್ಕಾಗಿ ಹೊಸ ವೆಬ್ ಸರಣಿ ನಿರ್ದೇಶಿಸಿದ್ದಾರೆ.

  ಹೌದು, ತೆಲುಗಿನಲ್ಲಿ ನಿಧಾನಕ್ಕೆ ಖ್ಯಾತಿ ಗಳಿಸುತ್ತಿರುವ ಆಹಾ ಒಟಿಟಿಗಾಗಿ ಹೊಸ ವೆಬ್ ಸರಣಿಯನ್ನು ಕನ್ನಡದ ಲೂಸಿಯಾ ಪವನ್ ಅವರು ನಿರ್ದೇಶಿಸುತ್ತಿದ್ದಾರೆ.

  ವಿದೇಶಿ ಭಾಷೆಗೆ ರೀಮೇಕ್ ಆಗಲಿದೆ ಕನ್ನಡದ ಸಿನಿಮಾವಿದೇಶಿ ಭಾಷೆಗೆ ರೀಮೇಕ್ ಆಗಲಿದೆ ಕನ್ನಡದ ಸಿನಿಮಾ

  ಹೊಸ ಪ್ರಾಜೆಕ್ಟ್‌ನ ಕೆಲಸ ಹೈದರಾಬಾದ್‌ನಲ್ಲಿ ಪ್ರಾರಂಭವಾಗಿದೆ ಎಂದು ಕೆಲವು ದಿನಗಳ ಹಿಂದಷ್ಟೆ ಚಿತ್ರವೊಂದನ್ನು ಹಂಚಿಕೊಂಡಿದ್ದರು ಪವನ್. ಇಂದು ಪವನ್ ನಿರ್ದೇಶನದ ಮೊದಲ ತೆಲುಗು ವೆಬ್ ಸರಣಿಯ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.

  ವೆಬ್‌ ಸರಣಿ ಹೆಸರು ಬಿಡುಗಡೆ

  ವೆಬ್‌ ಸರಣಿ ಹೆಸರು ಬಿಡುಗಡೆ

  ಪವನ್ ನಿರ್ದೇಶಿಸಿಸುತ್ತಿರುವ ವೆಬ್ ಸರಣಿ ಹೆಸರು 'ಕುಡಿ ಎಡಮೈತೆ'. ಇದರ ಕನ್ನಡ ತರ್ಜುಮೆ 'ಬಲ, ಎಡವಾದರೆ?' ಎಂದಾಗುತ್ತದೆ. ಹೆಸರಿನಿಂದಲೇ ಗೊತ್ತಾಗುತ್ತಿದೆ ಇದು ಥ್ರಿಲ್ಲರ್ ಕತೆಯುಳ್ಳ ವೆಬ್ ಸರಣಿ ಆಗಿರಲಿದೆ ಎಂದು.

  ತೆಲುಗಿನಲ್ಲಿ ಕೆಲಸ ಪವನ್‌ಗೆ ಮೊದಲಲ್ಲ

  ತೆಲುಗಿನಲ್ಲಿ ಕೆಲಸ ಪವನ್‌ಗೆ ಮೊದಲಲ್ಲ

  ಪವನ್‌ ಆಂಧ್ರದಲ್ಲಿ ಕೆಲಸ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ಈ ಮೊದಲು ಸಮಂತಾ ಅಭಿನಯದ 'ಯೂ ಟರ್ನ್' ತೆಲುಗು ಸಿನಿಮಾವನ್ನು ಅವರು ನಿರ್ದೇಶಿಸಿದ್ದರು. ಕನ್ನಡದ 'ಯೂ ಟರ್ನ್‌'ನ ರೀಮೇಕ್ ಆಗಿತ್ತು ಅದು.

  ಶಿಕ್ಷೆ ಆಗುತ್ತದೆಂದು ಗೊತ್ತಿದ್ದರೂ ದಿಟ್ಟ ಹೆಜ್ಜೆ ಇಟ್ಟ ಕನ್ನಡದ ನಾಲ್ಕು ನಿರ್ದೇಶಕರು!ಶಿಕ್ಷೆ ಆಗುತ್ತದೆಂದು ಗೊತ್ತಿದ್ದರೂ ದಿಟ್ಟ ಹೆಜ್ಜೆ ಇಟ್ಟ ಕನ್ನಡದ ನಾಲ್ಕು ನಿರ್ದೇಶಕರು!

  ಎಫ್‌ಯುಸಿ ಕಟ್ಟುತ್ತಿರುವ ಪವನ್ ಕುಮಾರ್

  ಎಫ್‌ಯುಸಿ ಕಟ್ಟುತ್ತಿರುವ ಪವನ್ ಕುಮಾರ್

  ಪ್ರಸ್ತುತ ಪವನ್ ಕುಮಾರ್ ಅವರು, ಎಫ್‌ಯುಸಿ ಎಂಬ ಸಮಾನ ಮನಸ್ಕ್ ಸಿನಿಮಾ ತಂತ್ರಜ್ಞರ ತಂಡವೊಂದನ್ನು ಕಟ್ಟುತ್ತಿದ್ದಾರೆ. ಜನರಿಂದ ಹಣ ಪಡೆದು ಜನರಿಗೆ ಸಿನಿಮಾವನ್ನು ಒದಗಿಸುವ ಯೋಜನೆ ಮೇಲೆ ಕೆಲಸ ನಡೆಯುತ್ತಿದೆ. ಎಫ್‌ಯುಸಿ ನಲ್ಲಿ ಅನುಭವಿ, ಯುವ ನಿರ್ದೇಶಕರ ದಂಡಿದೆ.

  ನಾನು ಕರ್ಣ ಯಾವಾಗ್ಲೂ ರವಿ ಬೆಳಗೆರೆ ಹತ್ರ ಬೈಸಿಕೊಳ್ತಾ ಇದ್ವಿ ಎಂದ ರಾಕೇಶ್ ಅಡಿಗ
  ತೆಲುಗಿನ ಒಟಿಟಿ 'ಆಹಾ'

  ತೆಲುಗಿನ ಒಟಿಟಿ 'ಆಹಾ'

  ಆಹಾ ಒಟಿಟಿಯು ತೆಲುಗು ಭಾಷೆಯ ಒಟಿಟಿ ಆಗಿದೆ. ಇಲ್ಲಿ ತೆಲುಗು ಭಾಷೆಯ ಕಂಟೆಂಟ್ ಅನ್ನು ಮಾತ್ರವೇ ಪ್ರಸಾರ ಮಾಡಲಾಗುತ್ತದೆ. ಈ ಒಟಿಟಿಗೆ ತೆಲುಗಿನ ಸೂಪರ್ ಸ್ಟಾರ್ ಅಲ್ಲಿ ಒಬ್ಬರಾದ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ ಮಾಲೀಕರು.

  'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಹೆಸರಲ್ಲಿ ವಂಚನೆ'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಹೆಸರಲ್ಲಿ ವಂಚನೆ

  English summary
  Lucia Pawan Kumar directing new Telugu web series for Aha OTT. Web series name is Kudi Edamaithe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X