For Quick Alerts
  ALLOW NOTIFICATIONS  
  For Daily Alerts

  Lucky Man OTT : 'ಲಕ್ಕಿಮ್ಯಾನ್' ಓಟಿಟಿ ರಿಲೀಸ್ ಡೇಟ್ ಫಿಕ್ಸ್: ಎಲ್ಲಿ ಯಾವಾಗ ಅಪ್ಪು ಕೊನೆ ಸಿನಿಮಾ ಸ್ಟ್ರೀಮಿಂಗ್?

  |

  ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಫ್ಯಾಂಟಸಿ ಕಾಮಿಡಿ ಸಿನಿಮಾ 'ಲಕ್ಕಿಮ್ಯಾನ್'. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದರು. ಪವರ್ ಪುನೀತ್ ರಾಜ್‌ಕುಮಾರ್ ದೇವರಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೆಪ್ಟೆಂಬರ್ 9ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ಚಿತ್ರವನ್ನು ಓಟಿಟಿಯಲ್ಲಿ ನೋಡುವ ಸಮಯ ಬಂದಿದೆ.

  ಒಂದು ದಿನ ಮೊದಲೇ 'ಲಕ್ಕಿಮ್ಯಾನ್' ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಿತ್ತು. ಅಪ್ಪು ಕೊನೆ ಸಿನಿಮಾವನ್ನು ತೆರೆಮೇಲೆ ನೋಡಿ ಪ್ರೇಕ್ಷಕರು ಭಾವುಕರಾಗಿದ್ದರು. ರಾಘವೇಂದ್ರ ರಾಜ್‌ಕುಮಾರ್ ಫ್ಯಾಮಿಲಿ ಸಮೇತ ನರ್ತಕಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಪ್ಪು ದೇವರ ಅವತಾರದಲ್ಲಿ ತೆರೆಮೇಲೆ ದರ್ಶನ ಕೊಟ್ಟಾಗ ಥಿಯೇಟರ್‌ಗಳು ಅಕ್ಷರಶಃ ದೇವಾಲಯದಂತಾಗಿತ್ತು. ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡು ಸದ್ದು ಮಾಡಿತ್ತು. ಜಾಕ್‌ ಮಂಜು ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಇನ್ನು ಚಿತ್ರದ ಸ್ಪೆಷಲ್ ಸಾಂಗ್‌ವೊಂದಕ್ಕೆ ಪ್ರಭುದೇವಾ ಜೊತೆ ಸೇರಿ ಪುನೀತ್ ರಾಜ್‌ಕುಮಾರ್ ಡ್ಯಾನ್ಸ್ ಮಾಡಿರೋದು ವಿಶೇಷ.

  ಸಾವಿನಲ್ಲೂ ಸಾರ್ಥಕತೆ: ತಂಗಿ ಮೃತದೇಹದ ಮುಂದೆ 'ಗೊಂಬೆ ಹೇಳುತೈತೆ' ಹಾಡಿ ಕಣ್ಣೀರಿಟ್ಟ ಅಣ್ಣಸಾವಿನಲ್ಲೂ ಸಾರ್ಥಕತೆ: ತಂಗಿ ಮೃತದೇಹದ ಮುಂದೆ 'ಗೊಂಬೆ ಹೇಳುತೈತೆ' ಹಾಡಿ ಕಣ್ಣೀರಿಟ್ಟ ಅಣ್ಣ

  ಇದೇ ಶುಕ್ರವಾರ ಅಮೇಜಾನ್ ಪ್ರೈಮ್‌ನಲ್ಲಿ 'ಲಕ್ಕಿಮ್ಯಾನ್' ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈಗಾಗಲೇ ತೆರೆಮೇಲೆ ಸಿನಿಮಾ ನೋಡಿರುವವರು, ನೋಡದೇ ಇರುವವರು ಸ್ಮಾಲ್‌ ಸ್ಕ್ರೀನ್‌ನಲ್ಲಿ ಸಿನಿಮಾ ಕಣ್ತುಂಬಿಕೊಳ್ಳು ಕಾಯುತ್ತಿದ್ದಾರೆ. ಇನ್ನು ಕ್ರೇಜ್‌ ತಕ್ಕಂತೆ ಭಾರೀ ಮೊತ್ತಲ್ಲೆ ಅಮೇಜಾನ್ ಪ್ರೈಂ 'ಲಕ್ಕಿಮ್ಯಾನ್' ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ತಮಿಳಿನ 'ಓ ಮೈ ಕಡವುಲೆ' ರೀಮೆಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಅಪ್ಪು ಮಾಡಿದ್ದಾರೆ.

  Lucky Man Ott Release date When And Where To Stream Puneeth Rajkumars Romantic Comedy Drama

  ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ಪುನೀತ್ ರಾಜ್‌ಕುಮಾರ್ ಜೊತೆಗೆ ನಾಗಭೂಷಣ್, ಸುಂದರ್‌ ರಾಜ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಚಿತ್ರದ ತಾರಾಬಳಗದಲ್ಲಿ ಇದ್ದಾರೆ. ವಿ2 ವಿಜಯ್ ವಿಕ್ಕಿ ಮ್ಯೂಸಿಕ್‌ ಚಿತ್ರಕ್ಕಿದೆ. ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ ನಿರ್ಮಾಣದ 'ಲಕ್ಕಿಮ್ಯಾನ್' ಚಿತ್ರವನ್ನು ಛಾಯಾಗ್ರಾಹಕ ಜೀವ ಶಂಕರ್ ಬಹಳ ಸೊಗಸಾಗಿ ಸೆರೆ ಹಿಡಿದಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಹೊಸ ದೇಶಗಳಲ್ಲೂ ಸಿನಿಮಾ ತೆರೆಕಂಡು ಪ್ರೇಕ್ಷಕರ ಮನಗೆದ್ದಿತ್ತು.

  ಲಕ್ಕಿಮ್ಯಾನ್‌: ಅಪ್ಪು ಕೂತಿದ್ದ ಕುರ್ಚಿ ಕೇಳಿದ್ದ ರಾಘಣ್ಣ; ಎಲ್ಲಿದೆಯೋ ಹುಡುಕಬೇಕೆಂದ ಕೃಷ್ಣ!ಲಕ್ಕಿಮ್ಯಾನ್‌: ಅಪ್ಪು ಕೂತಿದ್ದ ಕುರ್ಚಿ ಕೇಳಿದ್ದ ರಾಘಣ್ಣ; ಎಲ್ಲಿದೆಯೋ ಹುಡುಕಬೇಕೆಂದ ಕೃಷ್ಣ!

  English summary
  Lucky Man Ott Release date When And Where To Stream Puneeth Rajkumar's Romantic Comedy Drama.
  Tuesday, October 4, 2022, 13:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X