Lust Stories 2:ತಮನ್ನಾ, ಮೃಣಾಲ್ ಹಸಿಬಿಸಿ ದೃಶ್ಯಗಳು ವೈರಲ್.. ಸಿನಿಮಾ ನೋಡಿ ಟೈಮ್ ಕೋಡ್ ರಿವೀಲ್ ಮಾಡಿದ ಫ್ಯಾನ್ಸ್!
'ಲಸ್ಟ್ ಸ್ಟೋರಿಸ್ 2' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈಗಾಗಲೇ ಈ ಸಿನಿಮಾ ನೋಡಿದ ಬಳಿಕ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿಬಿಟ್ಟಿದ್ದಾರೆ. ಅದರಲ್ಲೂ ತಮನ್ನಾ ಹಾಗೂ ವಿಜಯ್ ವರ್ಮಾ ರೊಮ್ಯಾನ್ಸ್ ನೋಡುವುದಕ್ಕೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೂತಿದ್ದರು.
ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರ ಹಾವಳಿ ನೋಡೋ ಹಾಗಿಲ್ಲ. ತಮನ್ನಾ, ಮೃಣಾಲ್ ಠಾಕೂರ್, ಕಾಜೊಲ್ ಹಸಿಬಿಸಿ ದೃಶ್ಯಗಳ ಬಗ್ಗೆನೇ ಜೋರಾಗಿ ಚರ್ಚೆಯಾಗುತ್ತಿದೆ.

'ಲಸ್ಟ್ ಸ್ಟೋರೀಸ್ 2' ಸಿನಿಮಾವನ್ನು ನಾಲ್ಕು ಮಂದಿ ನಿರ್ದೇಶನ ಮಾಡಿದ್ದಾರೆ. ಆರ್ ಬಾಲ್ಕಿ, ಸುಜಯ್ ಘೋಷ್, ಅಮಿತ್ ಶರ್ಮಾ ಹಾಗೂ ಕೊಂಕಣ್ ಸೇನ್ ಶರ್ಮಾ. ಈ ನಾಲ್ಕು ಮಂದಿ ನಿರ್ದೇಶಕರ ಕಂಟೆಂಟ್ ರಿವೀಲ್ ಆಗಿದೆ. ಇತ್ತ ಸಿನಿಮಾ ನೋಡಿದವರು ತಮನ್ನಾ, ಮೃಣಾಲ್, ಕಾಜೊಲ್ ಈ ಮೂವರ ರೊಮ್ಯಾಂಟಿಕ್ ಸೀನ್‌ಗಳನ್ನು ಟೈಂ ಕೋಟ್ ಸಮೇತ ರಿವೀಲ್ ಮಾಡಿದ್ದಾರೆ.
ಹಸಿಬಿಸಿ ದೃಶ್ಯಗಳ ಟೈಮ್ ಕೋಡ್ ರಿವೀಲ್
'ಲಸ್ಟ್ ಸ್ಟೋರೀಸ್ 2' ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಓಟಿಟಿ ರಿಲೀಸ್. ಸಿನಿಮಾ ರಿಲೀಸ್ ಆದ ಬಳಿಕ ವೀಕ್ಷಕರ ಅಭಿಪ್ರಾಯ ತಿಳಿಯೋಕೆ ಇನ್ನೂ ಸಮಯ ಇದೆ. ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಕಮೆಂಟ್‌ಗಳೂ ಬರೋದು ಫಿಕ್ಸ್. ಆದರೆ, ಕಾಂಪಿಟೇಷನ್‌ಗೆ ಬಿದ್ದವರಂತೆ ಸಿನಿಮಾ ನೋಡಿ ಮುಗಿಸಿದವರು ಸೋಶಿಯಲ್ ಮೀಡಿಯಾದಲ್ಲಿ ಅವಾಂತರವನ್ನೇ ಸೃಷ್ಟಿಸುತ್ತಿದ್ದಾರೆ.
ಒಬ್ಬರಂತೂ 'ಲಸ್ಟ್ ಸ್ಟೋರೀಸ್ 2' ಸಿನಿಮಾದಲ್ಲಿ ಯಾವ್ಯಾವ ಟೈಮ್‌ನಲ್ಲಿ ತಮನ್ನಾ, ಮೃಣಾಲ್ ಠಾಕೂರ್ ಹಾಗೂ ಕಾಜೊಲ್ ಈ ಮೂವರ ಹಸಿಬಿಸಿ ದೃಶ್ಯಗಳು ಬರುತ್ತವೆ ಅನ್ನೋದನ್ನು ಲಿಸ್ಟ್ ಮಾಡಿದ್ದಾನೆ. ಟೈಮ್ ಕೋಡ್ ಪೋಸ್ಟ್ ಮಾಡಿ, ರೊಮ್ಯಾಂಟಿಕ್ ಸೀನ್‌ಗಳನ್ನು ಮಾತ್ರ ನೋಡಲು ಇಚ್ಚಿಸುವವರಿಗೆ ದೊಡ್ಡ ಸಹಾಯ ಮಾಡಿದ್ದಾನೆ.
ತಮನ್ನಾ ಫೋಟೊಗಳು ಖುಲ್ಲಂ ಖುಲ್ಲ
'ಲಸ್ಟ್ ಸ್ಟೋರೀಸ್ 2'ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಸೀನ್‌ಗಳ ಬಗ್ಗೆನೇ ಚರ್ಚೆಯಾಗಿತ್ತು. ಸಿನಿಮಾದಲ್ಲಿ ಇವರಿಬ್ಬರ ರೊಮ್ಯಾಂಟಿಕ್ ಸೀನ್‌ಗಳೇ ಹೈಲೈಟ್ ಅಂತಾನೂ ಹೇಳಲಾಗಿತ್ತು. ನೆಟ್ಟಿಗರು ಸಿನಿಮಾ ನೋಡಿ ಫ್ರೂಫ್ ಸಮೇತ ಪ್ರತ್ಯಕ್ಷ ಆಗಿದ್ದಾರೆ.
ತಮನ್ನಾ ಹಾಗೂ ವಿಜಯ್ ವರ್ಮಾ ಅವರ ಹಸಿಬಿಸಿ ದೃಶ್ಯಗಳ ಫೋಟೊಗಳನ್ನು ಟ್ವಿಟರ್‌ನಲ್ಲಿ ರಿವೀಲ್ ಮಾಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್‌ಗಳು ಬಿದ್ದಿದ್ದಾವೆ. ಇದೂವರೆಗೂ ಇಂತಹ ಸೀನ್‌ಗಳಲ್ಲಿ ಕಾಣಿಸಿಕೊಳ್ಳದ ತಮನ್ನಾ ನೋಡಿ ತಲೆಕೆಡಿಸಿಕೊಂಡಿದ್ದಾರೆ.
ಸೀತಾ ರಾಮಂ ಇಮೇಜ್ ಏನಾಯ್ತು?
ಮೃಣಾಲ್ ಠಾಕೂರ್ ಇತ್ತೀಚೆಗೆ ತೆಲುಗಿನಲ್ಲಿ 'ಸೀತಾ ರಾಮಂ' ಅನ್ನೋ ಸಿನಿಮಾ ಮಾಡಿದ್ದರು. ಈ ಸಿನಿಮಾ ನೋಡಿ ಪ್ರೇಕ್ಷಕರು ಮೃಣಾಲ್ ಠಾಕೂರ್‌ಗೆ ಫಿದಾ ಆಗಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸೂಪರ್ ಹಿಟ್ ಆಗಿತ್ತು. ಆದರೆ, ಸಿನಿಮಾ ರಿಲೀಸ್ ಆದ ಬಳಿಕ ಮೃಣಾಲ್ ಠಾಕೂರ್ ಇನ್‌ಸ್ಟಾಗ್ರಾಂನಲ್ಲಿ ಬಿಂದಾಸ್ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಇದಕ್ಕೆ ನೆಟ್ಟಿಗರು ನೆಗೆಟಿವ್ ಕಮೆಂಟ್‌ಗಳನ್ನು ಮಾಡಿದ್ದರು.
ಈಗ 'ಲಸ್ಟ್ ಸ್ಟೋರೀಸ್ 2'ನಲ್ಲಿ ಬೆಡ್ ರೂಮ್ ಸೀನ್‌ಗಳಲ್ಲೆಲ್ಲಾ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಿನಿಮಾ ಪ್ರೇಮಿಗಳು ಇನ್ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಂತೂ ಚರ್ಚೆಯಾಗುತ್ತಿದೆ.


Click it and Unblock the Notifications











