"ಮದುವೆ ಆದ್ಮೇಲೆ ಫಸ್ಟ್ ನೈಟ್ ಅಲ್ಲಿ ಏನಾಗುತ್ತೆ ಅಂತ ಹೆಣ್ಣು ಮಕ್ಕಳಿಗೆ ಹೇಳ್ತಿದ್ರು.. ಯಾಕೆ ಗೊತ್ತಾ?"
ಬಾಲಿವುಡ್ ನಟಿ ನೀನಾ ಗುಪ್ತಾ 'ಲಸ್ಟ್ ಸ್ಟೋರಿಸ್'- 2 ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಶೃಂಗಾರ ದೃಶ್ಯಗಳ ಜೊತೆಗೆ ಬೋಲ್ಡ್ ಡೈಲಾಗ್ಸ್ ಕೂಡ ಇವೆ. "ಮದುವೆಗೂ ಮುನ್ನ ಟೆಸ್ಟ್ ಡ್ರೈವ್ ಯಾಕೆ ಮಾಡಬಾರದು" ಅನ್ನುವ ಅರ್ಥದಲ್ಲಿ ಹಿರಿಯ ನಟಿ ನೀನಾ ಗುಪ್ತಾ ಹೇಳಿರುವ ಡೈಲಾಗ್ ಸಖತ್ ವೈರಲ್ ಆಗಿದೆ.
ಈ ಹಿಂದೆ ಬಂದಿದ್ದ 'ಲಸ್ಟ್ ಸ್ಟೋರಿಸ್' ವೆಬ್ ಸೀರಿಸ್‌ನಲ್ಲಿ ಕೈರಾ ಅದ್ವಾನಿ ಬೋಲ್ಡ್ ದೃಶ್ಯಗಳು ವೈರಲ್ ಆಗಿದ್ದು ಗೊತ್ತೇಯಿದೆ. ಸೀಕ್ವೆಲ್‌ನಲ್ಲಿ ಅದನ್ನು ಮೀರಿಸುವಂತಹ ಸನ್ನಿವೇಶಗಳು ಇರುವ ಸಾಧ್ಯತೆಯಿದೆ. ಮುಂದಿನ ವಾರ ಈ ವೆಬ್‌ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮನ್ನಾ, ಕಾಜೋಲ್, ವಿಜಯ್ ವರ್ಮಾ, ಮೃಣಾಲ್ ಠಾಕೂರ್ ಈ ಸೀರಿಸ್‌ನ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ತಮ್ಮ ಪಾತ್ರ ಹಾಗೂ ಚಿತ್ರದಲ್ಲಿರುವ ಬೋಲ್ಡ್ ದೃಶ್ಯಗಳು ಹಾಗೂ ಡೈಲಾಗ್ಸ್ ಬಗ್ಗೆ ನೀನಾ ಗುಪ್ತಾ ಮಾತನಾಡಿದ್ದಾರೆ.

ಶೃಂಗಾರದ ಬಗ್ಗೆ ಯುವಜನತೆ ತಿಳಿದುಕೊಳ್ಳುವುದು ಬಹಳ ಅಗತ್ಯ. ಕಾಲೇಜಿಗೆ ಹೋಗುವ ಸಮಯದಲ್ಲಿ ಹುಡುಗಿಗೆ ಮುತ್ತು ಕೊಡುವುದರಿಂದ ಗರ್ಭಿಣಿ ಆಗುತ್ತಾರೆ ಅಂತ ನಾನು ಅಂದುಕೊಂಡಿದ್ದೆ. ತಮ್ಮ ತಾಯಿ ಅಷ್ಟೊಂದು ಸ್ಟ್ರಿಕ್ಟ್ ಎಂದು ತಮ್ಮ ಜೀವನದ ಆ ದಿನಗಳನ್ನು ನೀನಾ ಗುಪ್ತಾ ನೆನಪಿಸಿಕೊಂಡಿದ್ದಾರೆ. ಸದ್ಯ ಹಿರಿಯ ನಟಿಯ ಮಾತುಗಳು ವೈರಲ್ ಆಗ್ತಿದೆ.
ಶೃಂಗಾರದ ಬಗ್ಗೆ ಯುವಜನತೆಗೆ ಗೊತ್ತಿರಬೇಕು
"ನನಗೆ 12- 13 ವರ್ಷ ವರ್ಷ ವಯಸ್ಸಾಗುವವರೆಗೂ ನಾನು ಪೋಷಕರನ್ನು ಬಿಟ್ಟು ಬೇರೆ ರೂಮಿನಲ್ಲಿ ಮಲಗಲಿಲ್ಲ. ನಾವೆಲ್ಲಾ ಒಂದೇ ರೂಮಿನಲ್ಲಿ ಮಲಗುತ್ತಿದ್ದೆವು. ನಾನು, ನನ್ನ ಸಹೋದರ ಮಂಚದ ಪಕ್ಕ ಕೆಳಗೆ ಮಲಗಿದರೆ ಅಪ್ಪ- ಅಮ್ಮ ಮಂಚದ ಮೇಲೆ ಮಲಗುತ್ತಿದ್ದರು. ಆದರೆ ಕೆಲವೊಮ್ಮೆ ನಾನು ನನ್ನ ಅಪ್ಪ ಅಮ್ಮನ ನಡುವೆ ಮಲಗುತ್ತಿದ್ದೆ. ಆಗ ನಮಗೆ ಶೃಂಗಾರದ ಬಗ್ಗೆ ಏನೂ ಗೊತ್ತಿರಲಿಲ್ಲ"

ನಮ್ಮ ತಾಯಿ ಬಹಳ ಕಟ್ಟುನಿಟ್ಟು
"ನಮ್ಮ ತಾಯಿ ಆಗೆಲ್ಲಾ ಶೃಂಗಾರ ಅಂದರೆ ಏನು ಎನ್ನುವುದನ್ನು ಹೇಳಲಿಲ್ಲ. ಪೀರಿಯಡ್ಸ್ ಅಂದರೆ ಏನು ಅಂತಲೂ ಹೇಳಲಿಲ್ಲ. ನಾನು ಕಾಲೇಜಿನಲ್ಲಿ ಓದುವಾಗ ನಮ್ಮ ತಾಯಿ ಬಹಳ ಸ್ಟ್ರಿಕ್ಟ್ ಆಗಿ ಇದ್ದರು. ಸ್ನೇಹಿತೆಯರ ಜೊತೆ ಸೇರಿ ಸಿನಿಮಾ ನೋಡೋಕೆ ಹೋಗಲು ಬಿಡುತ್ತಿರಲಿಲ್ಲ. ನನಗೆ ಇನ್ನು ನೆನಪಿದೆ. ನಾನು ಕಾಲೇಜಿನಲ್ಲಿ ಇರುವಾಗ ಹುಡುಗಿಗೆ ಮುತ್ತು ಕೊಟ್ಟರೆ ಆಕೆ ಗರ್ಭಿಣಿ ಆಗುತ್ತಾಳೆ ಎಂದುಕೊಂಡಿದ್ದೆ. ಆ ಸಮಯದಲ್ಲಿ ಇಂತಹ ವಿಷಯಗಳನ್ನು ತಾಯಂದಿರು ಹೆಣ್ಣುಮಕ್ಕಳಿಗೆ ಹೇಳಲು ಭಯಪಡುತ್ತಿದ್ದರು"
ಫಸ್ಟ್ ನೈಟ್ ಏನಾಗುತ್ತೆ ಹೇಳ್ತಿದ್ರು
"ಹಿಂದಿನ ಕಾಲದಲ್ಲಿ ಮದುವೆಗೂ ಮುನ್ನ ಹುಡುಗಿಯರಿಗೆ ಶೃಂಗಾರದ ಬಗ್ಗೆ ಕೊಂಚ ಮಾಹಿತಿ ನೀಡುತ್ತಿದ್ದರು. ಫಸ್ಟ್ ನೈಟ್‌ನಲ್ಲಿ ಏನಾಗುತ್ತದೆ ಎಂದು ಹೇಳುತ್ತಿದ್ದರು. ಯಾಕಂದರೆ ಹುಡುಗಿಗೆ ಭಯವಾಗಬಾರದು, ಅಥವಾ ಹುಡುಗ ಓಡಿ ಹೋಗಬಾರದು ಎನ್ನುವ ಕಾರಣಕ್ಕೆ ಇಂತಹ ವಿಚಾರಗಳನ್ನು ಹೇಳುತ್ತಿದ್ದರು"
ಯಾವುದು ಇನ್ನು ಬದಲಾಗಿಲ್ಲ
"ಇದೆಲ್ಲದರ ಜೊತೆಗೆ ಮಹಿಳೆಯರಿಗೆ ಮಕ್ಕಳನ್ನು ಹೆರುವುದು ಅವರ ಕೆಲಸ, ಮತ್ತು ಪತಿ ಶೃಂಗಾರ ಬಯಸಿದಾಗ ಅದನ್ನು ಪೂರೈಸುವುದು ಅವರ ಕರ್ತವ್ಯ ಇವತ್ತಿಗೆ ಸಾಕಷ್ಟು ವಿಚಾರಗಳು ಹೀಗೆ ಇವೆ. ಯಾವುದು ಬದಲಾಗಲಿಲ್ಲ. ಹಾಗಾಗಿ 'ಲಸ್ಟ್ ಸ್ಟೋರಿಸ್'- 2 ವೆಬ್ ಸೀರಿಸ್ ಬಹಳ ಮುಖ್ಯ ಎಂದು ನೀನಾ ಗುಪ್ತಾ ಹೇಳಿದ್ದಾರೆ. ತಾವು ಬಹಳ ಇಷ್ಟಪಟ್ಟು ಈ ಸೀರಿಸ್‌ನಲ್ಲಿ ನಟಿಸೋಕೆ ಒಪ್ಪಿದ್ದಾಗಿ ತಿಳಿಸಿದ್ದಾರೆ. ಅಜ್ಜಿ ಪಾತ್ರದಲ್ಲಿ ನಟಿಸಲು ಆಕೆ ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











