ಈ ವಾರ ಓಟಿಟಿಯಲ್ಲಿ ಧೂಳೆಬ್ಬಿಸೋಕೆ ಬರ್ತಿರೋ ಸಿನಿಮಾ, ವೆಬ್‌ಸೀರಿಸ್ ಕಂಪ್ಲೀಟ್ ಲಿಸ್ಟ್
ಪ್ರತಿ ವೀಕೆಂಡ್ ಥಿಯೇಟರ್‌ಗಳಲ್ಲಿ ಮಾತ್ರವಲ್ಲ ಓಟಿಟಿಯಲ್ಲೂ ಮಸ್ತ್ ಮನರಂಜನೆ ಸಿಗುತ್ತದೆ. ಸಿನಿಮಾ ಹಾಗೂ ವೆಬ್‌ಸೀರಿಸ್‌ಗಳು ಡಿಜಿಟಲ್ ಫ್ಲಾಟ್‌ಪಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಿ ವೀಕ್ಷಕರನ್ನು ರಂಜಿಸುತ್ತದೆ. ಈಗಾಗಲೇ ಥಿಯೇಟರ್‌ಗೆ ಬಂದೋದ ಸಿನಿಮಾಗಳ ಜೊತೆಗೆ ಡೈರೆಕ್ಟ್ ಓಟಿಟಿ ಸಿನಿಮಾ ಹಾಗೂ ವೆಬ್‌ಶೋಗಳು ಪ್ರತಿವಾರ ರಿಲೀಸ್ ಆಗುತ್ತದೆ. ಜೂನ್ ಕೊನೆ ವಾರದ ಓಟಿಟಿ ಶೆಡ್ಯೂಲ್ ಡಿಟೈಲ್ಸ್ ಇಲ್ಲಿದೆ ಓದಿ.
ಮೊದಲೆಲ್ಲಾ ಸಿನಿಮಾ ನೋಡಬೇಕು ಅಂದ್ರೆ ಥಿಯೇಟರ್‌ಗೆ ಹೋಗಬೇಕಿತ್ತು. ಟಿವಿಯಲ್ಲಿ ಧಾರಾವಾಹಿ ನೋಡಲು ಕಾದು ಕೂರಬೇಕಿತ್ತು. ಆದರೆ ಡಿಜಿಟಲ್ ಪ್ರಪಂಚದಲ್ಲಿ ಎಲ್ಲವೂ ಬೆರಳ ತುದಿಯಲ್ಲಿದೆ. ಮೊಬೈಲ್‌ನಲ್ಲಿ ಹೊಚ್ಚ ಹೊಸ ಸಿನಿಮಾ, ವೆಬ್ ಸೀರಿಸ್ ನೋಡುವ ಅವಕಾಶ ಸಿಗುತ್ತದೆ. ನೇರವಾಗಿ ಓಟಿಟಿಗೆ ಅಂತಲೇ ಕಂಟೆಂಟ್ ಸಿದ್ಧವಾಗುತ್ತಿದೆ. ಇದರ ಮೇಲೆ ಈಗ ಕೋಟ್ಯಾಂತರ ಹಣ ಹೂಡಿಕೆಯಾಗುತ್ತಿದೆ.

ಹಿಂದಿ, ತಮಿಳು, ತೆಲುಗಿನ ಸೂಪರ್ ಸ್ಟಾರ್‌ಗಳೇ ವೆಬ್ ಸೀರಿಸ್‌ಗಳಲ್ಲಿ ನಟಿಸ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡದೇ ನೇರವಾಗಿ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ತರಲಾಗ್ತಿದೆ. ಕನ್ನಡದಲ್ಲಿ ನಿಧಾನವಾಗಿ ಈ ಪ್ರಯತ್ನ ನಡೀತಿದೆ. ಕನ್ನಡದ ಸ್ಟಾರ್ ನಟರು ಕೂಡ ವೆಬ್ ಸೀರಿಸ್‌ಗಳಲ್ಲಿ ನಟಿಸೋಕೆ ಉತ್ಸುಕರಾಗಿದ್ದಾರೆ.

ನೆಟ್‌ಫ್ಲಿಕ್ಸ್
1. ಲಸ್ಟ್ ಸ್ಟೋರಿಸ್- 2'
ಇಂದು ಮಧ್ಯರಾತ್ರಿ(ಜೂನ್ 29)ಯಿಂದಲೇ ಬಹುನಿರೀಕ್ಷಿತ 'ಲಸ್ಟ್ ಸ್ಟೋರಿಸ್- 2' ವೆಬ್ ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮನ್ನಾ, ಕಾಜೋಲ್, ಮೃಣಾಲ್ ಠಾಕೂರ್, ನೀನಾ ಗುಪ್ತಾ ಮುಖ್ಯಭೂಮಿಕೆಯಲ್ಲಿರೋ ಈ ಸರಣಿ ಭಾರೀ ಕುತೂಹಲ ಮೂಡಿಸಿದೆ. ಬೋಲ್ಡ್ ಕಾನ್ಸೆಪ್ಟ್‌ನಿಂದಲೇ ಈ ಆಂಥಾಲಜಿ ಸ್ಯಾಂಪಲ್ಸ್ ಕುತೂಹಲ ಹೆಚ್ಚಿಸಿವೆ. 4 ಸೆಗ್‌ಮೆಂಟ್‌ಗಳಾಗಿ ಬರ್ತಿರೋ ಸರಣಿಯನ್ನು ಆರ್. ಬಾಲ್ಕಿ, ಕೊಂಕಣ ಸೇನ್ ಶರ್ಮಾ, ಅಮಿರ್ ರವೀಂದ್ರನಾಥ್, ಸುಜಯ್ ಘೋಷ್ ನಿರ್ದೇಶನ ಮಾಡಿದ್ದಾರೆ.
2. ಸೆಲೆಬ್ರಿಟಿ
3. ನಿಮೊನ
4. ಸಿ ಯು ಇನ್ ಮೈ 19 ಲೈಫ್
5. ಡೂಮ್ ಏಟ್ ಯುವರ್ ಸರ್ವಿಸ್
6. ಡಿಲೇಟ್
7. ದಿ ವಿಟ್ಜನ್ ಸೀಸನ್- 3
8. ಮೇಕಿಂಗ್ ಇಟ್ ಅಪ್
ಜೀ 5
1. ವಿಮಾನಂ
ತೆಲುಗಿನ 'ವಿಮಾನಂ' ಸಿನಿಮಾ ಈ ವಾರ ಜೀ5ಗೆ ಬರ್ತಿದೆ. ಅನುಸೂಯ ಭಾರಧ್ವಜ್, ಸಮುದ್ರಖನಿ, ಮೀರಾ ಜಾಸ್ಮಿನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅನಸೂಯ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಪ್ರಸಾದ್ ಯಾನಲಾ ಆಕ್ಷನ್ ಕಟ್ ಹೇಳಿದ್ದಾರೆ. 2 ವಾರದ ಹಿಂದೆ ರಿಲೀಸ್ ಆಗಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಓಟಿಟಿಗೆ ಹೇಳಿಮಾಡಿಸಿದ ಸಿನಿಮಾ ಎನ್ನುವುದು ಕೆಲವರ ವಾದ.
2. ಲಡಕ್‌ಬಗ್ಗಾ
ಅಮೇಜಾನ್ ಪ್ರೈಂ
1. ವೀರನ್(ತಮಿಳು ಸಿನಿಮಾ)
2. ಜಾಕ್ ರ್ಯಾನ್ ಸೀಸನ್ -4
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ದಿ ನೈಟ್ ಮ್ಯಾನೇಜರ್ ಸೀಸನ್-2
2. ವೀಕೆಂಡ್ ಫ್ಯಾಮಿಲಿ(ವೆಬ್ ಸೀರಿಸ್)
ಅಹಾ ವಿಡಿಯೋ
1. ಅರ್ಥಮೈಂದಾ ಅರುಣ್‌ಕುಮಾರ್
ಇನ್ನುಳಿದಂತೆ ಜಿಯೋ ಸಿನಿಮಾದಲ್ಲಿ 'ಸಾರ್ಜೆಂಟ್', ಬುಕ್ ಮೈಶೋದಲ್ಲಿ 'ಫಾಸ್ಟ್- 10'(ಸಿನಿಮಾ), ಮನೋರಮಾ ಮ್ಯಾಕ್ಸ್‌ನಲ್ಲಿ 'ಲೈವ್' ಸೇರಿದಂತೆ ಹಲವು ಸಿನಿಮಾ ಹಾಗೂ ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರ್ತಿದೆ.


Click it and Unblock the Notifications











