ಸೇತುಪತಿ ಸೂಪರ್ ಹಿಟ್ 'ಮಹಾರಾಜ' ಓಟಿಟಿ ಡೇಟ್ ಫಿಕ್ಸ್; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್
ದೊಡ್ಡ ಸಿನಿಮಾಗಳೆಲ್ಲಾ ಬಹಳ ಬೇಗ ಓಟಿಟಿಗೆ ಬರ್ತಿವೆ. ಇತ್ತೀಚೆಗೆ ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಸಿನಿಮಾ ಬಿಡುಗಡೆ ಆಗಿ ಸದ್ದು ಮಾಡಿತ್ತು. ಜೂನ್ 14ರಂದು ಬಿಡುಗಡೆಯಾಗಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.
ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ 'ಮಹಾರಾಜ' ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿತ್ತು. ಪ್ರಭಾಸ್ ನಟನೆಯ 'ಕಲ್ಕಿ 2898 AD' ಆರ್ಭಟದ ನಡುವೆಯೂ ವಿಜಯ್ ಸೇತುಪತಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಇಂತಹ ಸಮಯದಲ್ಲೇ ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದೆ. ಚಿತ್ರದಲ್ಲಿ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ಅಭಿರಾಮಿ ಸೇರಿದಂತೆ ಹಲವರು ನಟಿಸಿದ್ದಾರೆ.

ಮಹಾರಾಜ (ವಿಜಯ್ ಸೇತುಪತಿ) ಒಂದು ಸಲೂನ್ ಶಾಪ್ ನಡೆಸುತ್ತಿರುತ್ತಾನೆ. ಅಪಘಾತವೊಂದರಲ್ಲಿ ಆತನ ಪತ್ನಿ ಕೊನೆಯುಸಿರೆಳೆಯುತ್ತಾಳೆ. ಅದೇ ಅಪಘಾತದಲ್ಲಿ ಮಗಳು ಜ್ಯೋತಿ ಬದುಕುಳಿಯುತ್ತಾಳೆ. ಒಂದು ಕಬ್ಬಿಣದ ಕಸದ ಡಬ್ಬಿ ಮಗಳ ಜೀವ ಉಳಿಸಿದೆ ಎಂದು ಅದಕ್ಕೆ ಲಕ್ಷ್ಮಿ ಎಂದು ಹೆಸರಿಟ್ಟು ಮನೆಯ ಸದಸ್ಯನಂತೆ ಅದನ್ನು ನೋಡಿಕೊಳ್ಳುತ್ತಿತ್ತಾರೆ. ಒಮ್ಮೆ ಮಗಳು ಬೇರೆ ಊರಿಗೆ ಹೋದಾಗ ತಮ್ಮ ಮನೆಯಲ್ಲಿ ಕಸದ ಬುಟ್ಟಿ(ಲಕ್ಷ್ಮಿ) ಕಾಣೆಯಾಗಿದೆ ಎಂದು ಮಹಾರಾಜ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾನೆ. ಮುಂದೇನಾಗುತ್ತದೆ? ಎನ್ನುವುದು 'ಮಹಾರಾಜ' ಸಿನಿಮಾ ಕಥೆ.
ಕೇಳೋಕೆ ಒನ್‌ಲೈನ್ ಸ್ಟೋರಿ ಸಿಂಪಲ್ ಎನಿಸಿದರೂ ಅದನ್ನು 2 ಗಂಟೆ ಹೇಗೆ ಕಟ್ಟಿಕೊಟ್ಟಿದ್ದಾರೆ ಎನ್ನುವುದು ಇಂಟ್ರೆಸ್ಟಿಂಗ್. ವಿಜಯ್ ಸೇತುಪತಿ ತಮ್ಮ ವಿಭಿನ್ನ ನಟನೆಯಿಂದ ಗಮನ ಸೆಳೆಯುತ್ತಾ ಬರ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಮ್ಮೆ ತಮ್ಮ ನಟನೆಯಿಂದ ಮೋಡಿ ಮಾಡಿದ್ದಾರೆ. ಅಂದಹಾಗೆ 'ಮಹಾರಾಜ' ಚಿತ್ರಕ್ಕೆ ಕನ್ನಡ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿರೋದು ವಿಶೇಷ.

ಮೊದಲ ಪ್ರಯತ್ನದಲ್ಲೇ ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಕಮಾಲ್ ಮಾಡಿದ್ದಾರೆ. ಸಿಂಪಲ್ ಕಥೆಗೆ ಪರಿಣಾಮಕಾರಿಯಾಗಿ ಸ್ಕ್ರೀನ್‌ಪ್ಲೇ ಮಾಡಿ ಸೊಗಸಾಗಿ ಚಿತ್ರವನ್ನು ತೆರೆಗೆ ತಂದಿದ್ದಾರೆ. ಇನ್ನು ಅಲ್ಲಲ್ಲಿ ಟ್ವಿಸ್ಟ್ ಕೊಡುತ್ತಾ, ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಸಿನಿಮಾ ಮತ್ತಷ್ಟು ರಂಜಿಸುತ್ತದೆ. ಅನುರಾಗ್ ಕಶ್ಯಪ್ ನಟನೆ ಕೂಡ 'ಮಹಾರಾಜ' ಚಿತ್ರಕ್ಕೆ ಪ್ಲಸ್ ಆಗಿದೆ. ಪಿಟಿ ಟೀಚರ್ ಆಗಿ ಮಮತಾ ಮೋಹನ್ ದಾಸ್ ಹಾಗೂ ಅನುರಾಗ್ ಕಶ್ಯಪ್ ಪತ್ನಿಯಾಗಿ ಅಭಿರಾಮಿ ನಟಿಸಿದ್ದಾರೆ.
ಚಿತ್ರಮಂದಿರಗಳಲ್ಲಿ 'ಮಹಾರಾಜ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇಂತಹ ಸಮಯದಲ್ಲೇ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಮಾಡಲು ತಯಾರಿ ಶುರುವಾಗಿದೆ. ತಮಿಳು ಹಾಗೂ ತೆಲುಗಿನಲ್ಲಿ ಮಾತ್ರ ತೆರೆಕಂಡಿದ್ದ ಚಿತ್ರವನ್ನು ಮಲಯಾಳಂ, ಹಿಂದಿ ಹಾಗೂ ಕನ್ನಡ ಭಾಷೆಗಳಿಗೂ ಡಬ್ ಮಾಡಿ ಓಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಜಲೈ 12ರಂದು 'ಮಹಾರಾಜ' ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ಈಗಾಗಲೇ ಅಧಿಕೃತವಾಗಿ ಟ್ರೈಲರ್ ಸಮೇತ ಈ ವಿಚಾರವನ್ನು ಘೋಷಿಸಿಲಾಗಿದೆ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾ ಓಟಿಟಿಯಲ್ಲಿ ಹೇಗೆ ದಾಖಲೆ ಬರೆಯುತ್ತದೆ ಕಾದು ನೋಡಬೇಕಿದೆ.


Click it and Unblock the Notifications











