ಅಧಿಕೃತವಾಗಿ 'ಗುಂಟೂರು ಖಾರಂ' ಓಟಿಟಿ ರಿಲೀಸ್ ಡೇಟ್ ಘೋಷಣೆ; ಕನ್ನಡದಲ್ಲೂ ಸ್ಟ್ರೀಮಿಂಗ್
ಸಿನಿರಸಿಕರ ಊಹೆ ನಿಜವಾಗಿದೆ. 'ಗುಂಟೂರು ಖಾರಂ' ಸಿನಿಮಾ ಓಟಿಟಿ ರಿಲೀಸ್ ಡೇಟ್ ರಿವೀಲ್ ಆಗಿದೆ. ಮಹೇಶ್ ಬಾಬು ಅಭಿಮಾನಿಗಳು ಈ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ. ಆದರೆ ಸಂಕ್ರಾಂತಿಗೆ ತೆರೆಗಪ್ಪಳಿಸಿದ್ದ ಸಿನಿಮಾ ತಿಂಗಳಿಗೂ ಮೊದ್ಲೆ ಓಟಿಟಿಗೆ ಬರುತ್ತಿರುವುದು ಅಚ್ಚರಿ ಮೂಡಿಸಿದೆ.
ಜನವರಿ 12ಕ್ಕೆ 'ಗುಂಟೂರು ಖಾರಂ' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಹೇಶ್ ಬಾಬು ಸಿನಿಮಾ ಎನ್ನುವ ಕಾರಣಕ್ಕೆ ಅಭಿಮಾನಿಗಳು ನೋಡಿದರು. ಜೊತೆಗೆ ಸಂಕ್ರಾಂತಿ ಸಂಭ್ರಮದ ರಜೆಯಲ್ಲಿದ್ದ ಪ್ರೇಕ್ಷಕರು ಸಿನಿಮಾ ವೀಕ್ಷಿಸಿ ನಿರಾಸೆ ಅನುಭವಿಸಿದ್ದರು. 'ಗುಂಟೂರು ಖಾರಂ' ಎದುರು ಬಂದ 'ಹನುಮಾನ್' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಒಂದೇ ವಾರಕ್ಕೆ ಮಹೇಶ್ ಬಾಬು ಸಿನಿಮಾ ಸ್ಕ್ರೀನ್‌ಗಳನ್ನೆಲ್ಲಾ ಕಬಳಿಸಿತ್ತು.

ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಈ ಹಿಂದೆ ಎರಡು ಸಿನಿಮಾಗಳು ಬಂದು ಪ್ರೇಕ್ಷಕರ ಮನಗೆದ್ದಿತ್ತು. 'ಅತಡು' ಸೆನ್ಸೇಷನಲ್ ಹಿಟ್ ಆಗಿತ್ತು. 'ಖಲೇಜಾ' ಬಾಕ್ಸಾಫೀಸ್‌ನಲ್ಲಿ ಸೋತರು ಅಭಿಮಾನಿಗಳಿಗೆ ಇಷ್ಟವಾಗಿತ್ತು. ಆದರೆ ಆ ಎರಡು ಸಿನಿಮಾಗಳಿಗಿಂತ ನೆಗೆಟಿವ್ ಟಾಕ್ 'ಗುಂಟೂರು ಖಾರಂ'ಗೆ ಬಂದಿತ್ತು. ಆದರೂ ವಿಶ್ವದಾದ್ಯಂತ ಸಿನಿಮಾ 180 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಯಿತು.
ಹೊಸ ಕಥೆ, ಚಿತ್ರಕಥೆ ಇಲ್ಲದೇ ತ್ರಿವಿಕ್ರಮ್ ಹಳೇ ಕಥೆಗೆ ಮಸಾಲೆ ಬೆರಸಿ 'ಗುಂಟೂರು ಖಾರಂ' ಅರೆದಿದ್ದರು. ರಮಣ ಆಗಿ ಮಹೇಶ್ ಬಾಬು ಅಬ್ಬರಿಸಿದ್ದರೆ ನಾಯಕಿಯಾಗಿ ಶ್ರೀಲೀಲಾ ಸಾಥ್ ಕೊಟ್ಟಿದ್ದರು. ಮಹೇಶ್ ಬಾಬು ತಾಯಿ ಪಾತ್ರದಲ್ಲಿ ರಮ್ಯಕೃಷ್ಣ ಮಿಂಚಿದ್ದಾರೆ. ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ರಾಧಾಕೃಷ್ಣ ಸಿನಿಮಾ ನಿರ್ಮಾಣ ಮಾಡಿದ್ದರು.
ಬಹಳ ಹಿಂದೆ ಶುರುವಾಗಿದ್ದ 'ಗುಂಟೂರು ಖಾರಂ' ಸಿನಿಮಾ ಕಾರಣಾಂತರಗಳಿಂದ ತಡವಾಗಿ ತೆರೆಗೆ ಬಂದಿತ್ತು. ಶೂಟಿಂಗ್ ವೇಳೆಗೆ ಸಾಕಷ್ಟು ಗೊಂದಲ ಶುರುವಾಗಿತ್ತು. ಸಾಕಷ್ಟು ಭಾರೀ ರೀಶೂಟ್ ಮಾಡಿದ್ದ ಬಗ್ಗೆ ಚರ್ಚೆ ನಡೀತು. ಇನ್ನು ನಾಯಕಿಯಾಗಿ ಚಿತ್ರಕ್ಕೆ ಪೂಜಾ ಹೆಗ್ಡೆ ಆಯ್ಕೆ ಆಗಿದ್ದರು. ಆದರೆ ದಿಢೀರನೇ ಸಿನಿಮಾದಿಂದ ಹೊರ ನಡೆದಿದ್ದರು. ಬಳಿಕ ಆ ಅವಕಾಶ ಶ್ರೀಲೀಲಾ ಪಾಲಾಗಿತ್ತು.
ಎಲ್ಲಾ ಅಡೆತಡೆ ಮೀರಿ ಸುಗ್ಗಿ ಸಂಭ್ರಮದಲ್ಲಿ 'ಗುಂಟೂರು ಖಾರಂ' ಸಿನಿಮಾ ತೆರೆಗೆ ಬಂದಿತ್ತು. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಫೆಬ್ರವರಿ 9ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಅಂದ್ರೆ ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಸಿನಿಮಾ ಓಟಿಟಿಯಲ್ಲಿ ಸಿಗಲಿದೆ.
ತೆಲುಗಿನಲ್ಲಿ ಮಾತ್ರ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಓಟಿಟಿ ಸ್ಟ್ರೀಮಿಂಗ್ ಆಗಲಿದೆ. ಸದ್ಯ ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಮಹೇಶ್ ಬಾಬು ನಿರ್ದೇಶನದಲ್ಲಿ ಟಾಲಿವುಡ್ ಪ್ರಿನ್ಸ್ ನಟಿಸಲಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
Rowdy Ramana ni cinemascope 70 mm lo choosaaru. Ippudu Netflix lo choodandi 🎬😎
— Netflix India South (@Netflix_INSouth) February 4, 2024
Guntur Kaaram, coming to Netflix on 9 February in Telugu, Tamil, Malayalam, Kannada and Hindi.#GunturKaaramOnNetflix pic.twitter.com/VL5Rb4Wioj
ಬಹಳ ಹಿಂದೆಯೇ ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಖಚಿತವಾಗಿತ್ತು. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ನಿರ್ಮಾಣ ಪ್ರಯತ್ನಗಳು ನಡೀತಿದೆ. 'ಗುಂಟೂರು ಖಾರಂ' ರಿಲೀಸ್ ಬಳಿಕ ಮಹೇಶ್ ಬಾಬು ಜರ್ಮನಿ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಫಿಟ್ನೆಸ್ ಡಾಕ್ಟರ್ ಜೊತೆ ವಿಶೇಷ ತರಬೇತಿ ಪಡೆದು ಬಂದಿದ್ದಾರೆ. ಉದ್ದ ಜುಟ್ಟು ಬಿಟ್ಟು ಸ್ಟೈಲಿಶ್ ಲುಕ್‌ನಲ್ಲಿ ಮಹೇಶ್ ಬಾಬು ಹೈದರಾಬಾದ್‌ಗೆ ಬಂದಿಳಿದಿರುವ ಫೋಟೊ, ವಿಡಿಯೋ ವೈರಲ್ ಆಗುತ್ತಿದೆ.
ಮೌಳಿ- ಮಹೇಶ್ ಬಾಬು ಜೋಡಿಯ ಚಿತ್ರಕ್ಕೆ ಕಥೆ ಸಿದ್ಧವಾಗಿದೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಏಪ್ರಿಲ್ 9ರಿಂದ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ. ಚಿತ್ರದಲ್ಲಿ ಹಾಲಿವುಡ್ ಕಲಾವಿದರು, ತಂತ್ರಜ್ಞರು ನಟಿಸುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











