Ott Releases this week: ಜೂನ್ ಮೊದಲ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ಸೀರಿಸ್ ಲಿಸ್ಟ್

ಲೋಕಸಭೆ ಚುನಾವಣೆ ಭರಾಟೆಗೆ ಬ್ರೇಕ್ ಬೀಳುವ ಸಮಯ ಬಂದಿದೆ. ಮತ್ತೆ ಚಿತ್ರರಂಗ ಮೊದಲಿನಂತೆ ಸದ್ದು ಮಾಡುವ ಸುಳಿವು ಸಿಗುತ್ತಿದೆ. ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ದಿನಾಂಕ ನಿಗದಿಯಾಗುತ್ತಿದೆ. ಇದೆಲ್ಲದರ ನಡುವೆ ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ವೆಬ್‌ ಸೀರಿಸ್ ಈ ವಾರವೂ ವೀಕ್ಷಕರನ್ನು ರಂಜಿಸಲಿವೆ.

ಇತ್ತೀಚಿಗೆ ಕನ್ನಡ ಸಿನಿಮಾಗಳು ಕೂಡ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಇನ್ನು ಕೆಲ ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿವೆ. ಕೆಲ ಸಿನಿಮಾಗಳು ಚೆನ್ನಾಗಿದೆ ಎನ್ನುವ ಟಾಕ್ ಬಂದರೂ ಚಿತ್ರಮಂದಿರಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಗಲ್ಲ. ಅಂತಹ ಸಿನಿಮಾಗಳ ಓಟಿಟಿ ಸ್ಟ್ರೀಮಿಂಗ್‌ಗಾಗಿ ವೀಕ್ಷಕರು ಹೆಚ್ಚು ಕಾಯುತ್ತಾರೆ.

Maidaan to Bade Miyan Chote Miyan OTT releases june first week

ಜೂನ್ ಮೊದಲ ವಾರದಲ್ಲಿ ಕೂಡ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್‌ ಸೀರಿಸ್ ಪ್ರೈಂ ವಿಡಯೋ, ನೆಟ್‌ಫ್ಲಿಕ್ಸ್, ಹಾಟ್‌ಸ್ಟರ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ಆ ಪಟ್ಟಿ ಮುಂದೆ ಇದೆ ಓದಿ.

ಅಮೇಜಾನ್ ಪ್ರೈಂ

1. ಮೈದಾನ್

ಏಪ್ರಿಲ್ 10ಕ್ಕೆ ಅಜಯ್ ದೇವಗನ್, ಪ್ರಿಯಾಮಣಿ ನಟನೆಯ 'ಮೈದಾನ್' ಸಿನಿಮಾ ತೆರೆಗೆ ಬಂದಿತ್ತು. ಭಾರತದ ಖ್ಯಾತ ಫುಟ್ಬಾಲ್ ಕೋಚ್ ಸಯ್ಯದ್ ಅಬ್ದುಲ್ ರಹೀಮ್ ಜೀವನವನ್ನಾಧಿರಿ ಈ ಸಿನಿಮಾ ಕಟ್ಟಿಕೊಡಲಾಗಿದೆ. ಅಮಿತ್ ಶರ್ಮಾ ನಿರ್ದೇಶನದ ಈ ಸ್ಪೋರ್ಟ್ಸ್ ಬಯೋಗ್ರಫಿಕಲ್ ಸಿನಿಮಾ ಇತ್ತೀಚೆಗೆ ಅಮೇಜಾನ್ ಪ್ರೈಂಗೆ ಬಂದಿತ್ತು. ಆದರೆ ಚಂದಾದರರು ಹಣ ಪಾವತಿಸಿ ಸಿನಿಮಾ ನೋಡಬೇಕಿತ್ತು. ಜೂನ್ 5ರಿಂದ ಉಚಿತವಾಗಿ ಸಿನಿಮಾ ಸಿಗುತ್ತದೆ.

Maidaan to Bade Miyan Chote Miyan OTT releases june first week

ನೆಟ್‌ಫ್ಲಿಕ್ಸ್

1. ಬಡೇ ಮಿಯಾನ್ ಚೋಟೆ ಮಿಯಾನ್

ಅದ್ಯಾಕೋ ಈ ವರ್ಷ ಕೂಡ ಬಾಲಿವುಡ್ ಆರಂಭ ಚೆನ್ನಾಗಿಲ್ಲ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಬಡೇ ಮಿಯಾನ್ ಚೋಟೆ ಮಿಯಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಅಕ್ಷಯ್‌ ಕುಮಾರ್ ಹಾಗೂ ಟೈಗರ್ ಶ್ರಾಫ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಅಲಿ ಅಬ್ಬಾಸ್ ಜಾಫರ್ ಆಕ್ಷನ್ ಕಟ್ ಹೇಳಿದ್ದಾರೆ. ಭಾರೀ ಬಜೆಟ್ ಸಿನಿಮಾ ಸೋತು ಸುಣ್ಣವಾಗಿತ್ತು. ಜೂನ್ 6 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

2. ಹೌ ಟು ರೌಬ್ ಎ ಬ್ಯಾಂಕ್- (ಇಂಗ್ಲೀಷ್ ಸಿನಿಮಾ) ಜೂನ್ 5

3. ಹಿಟ್ಲರ್ ಅಂಡ್ ನಾಜೀಸ್(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 5

4. ಸ್ವೀಟ್ ಟ್ರೂತ್(ವೆಬ್‌ ಸೀರಿಸ್) ಜೂನ್ 6

5. ಹಿಟ್‌ಮ್ಯಾನ್(ಇಂಗ್ಲೀಷ್ ಸಿನಿಮಾ) ಜೂನ್ 7

6. ಶೂಟಿಂಗ್ ಸ್ಟಾರ್ಟ್ಸ್ (ಇಂಗ್ಲೀಷ್ ಸಿನಿಮಾ) ಜೂನ್ 3

ಜಿಯೋ ಸಿನಿಮಾ

1. ಬ್ಲಾಕ್‌ ಔಟ್

ಕಳೆದ ವರ್ಷ ವಿಕ್ರಾಂತ್ ಮೆಸ್ಸಿ ನಟನೆಯ '12th ಫೇಲ್' ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಇದೀಗ ವಿಕ್ರಾಂತ್ ನಟನೆಯ 'ಬ್ಲಾಕ್‌ ಔಟ್' ಸಿನಿಮಾ ನೇರವಾಗಿ ಓಟಿಟಿಗೆ ಬರ್ತಿದೆ. ದೇವಾಂಗ್ ಸಶಿಂ ಭಾವಸರ್ ನಿರ್ದೇಶನದ ಚಿತ್ರದಲ್ಲಿ ಮೌನಿ ರಾಯ್, ಸುನಿಲ್ ಗೋವರ್ ಕೂಡ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು ಜೂನ್ 7ರಿಂದ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗಲಿದೆ.

2. ಲವ್ ಅಂಡರ್ ಕವರ್(ಇಂಗ್ಲೀಷ್ ಸೀರಿಸ್) ಜೂನ್ 3

3. ದಿ ರಿಯಲ್ ಹೌಸ್ ವೈವ್ಸ್ ಆಫ್ ದುಬೈ(ಇಂಗ್ಲೀಷ್ ಸೀರಿಸ್) ಜೂನ್ 3

4. ದಿ ಎಂಡ್ ವಿ ಸ್ಟಾರ್ಟ್‌ ಫ್ರಂ(ಇಂಗ್ಲೀಷ್ ಸಿನಿಮಾ) ಜೂನ್ 8

ಸೋನಿ ಲಿವ್

1. ಗುಲಕ್ ಸೀಸನ್-4(ಹಿಂದಿ ಸೀರಿಸ್) ಜೂನ್ 7

2. ವರ್ಷಂಗಲ್ಕು ಶೇಷಂ(ಕನ್ನಡ ಡಬ್ಬಿಂಗ್ ಸಿನಿಮಾ) ಜೂನ್ 7

ಹಾಟ್‌ಸ್ಟರ್

1. ಗುಣಃ (ಹಿಂದಿ ಸೀರಿಸ್) ಜೂನ್ 3

2. ಕ್ಲಿಪ್ಡ್ (ಇಂಗ್ಲೀಷ್ ಸೀರಿಸ್) ಜೂನ್ 4

3. ಸ್ಟಾರ್ ವಾರ್ಸ್ (ಇಂಗ್ಲೀಷ್ ಸೀರಿಸ್) ಜೂನ್ 4

4. ದಿ ಲೆಜೆಂಡ್ ಆಫ್ ಹನುಮಾನ್ -4(ವೆಬ್ ಸೀರಿಸ್) ಜೂನ್ 5

More from Filmibeat

English summary
20 new films and web series to watch on Netflix, Hotstar, Prime Video, sonyliv, jio cinema and more;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X