UI OTT: ಉಪೇಂದ್ರ ನಟನೆಯ 'ಯುಐ' ಓಟಿಟಿ ರಿಲೀಸ್ ಬಗ್ಗೆ ಚಿತ್ರತಂಡ ಪ್ರತಿಕ್ರಿಯೆ

ಕಳೆದ ವರ್ಷದ ಕೊನೆಗೆ ಬಂದ 'ಯುಐ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಸುದೀಪ್ 'ಮ್ಯಾಕ್ಸ್' ಸಿನಿಮಾ ಪೈಪೋಟಿ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತೆಲಂಗಾಣ ಹಾಗೂ ವಿದೇಶಗಳಲ್ಲಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಉಪೇಂದ್ರ ನಿರ್ದೇಶನದ ಚಮತ್ಕಾರ ಎಂಥದ್ದು ಎಂದು ಮತ್ತೊಮ್ಮೆ ಸಾಬೀತಾಗಿದೆ.

ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ಗಳ ಅಡಿಯಲ್ಲಿ 'ಯುಐ' ಚಿತ್ರ ನಿರ್ಮಾಣವಾಗಿದೆ. ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ ಚಿತ್ರಕ್ಕೆ ಹಣ ಹೂಡಿದ್ದರು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಕೊಂಡುಕೊಂಡಿತ್ತು. ಡಿಸೆಂಬರ್ 20ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು ಸುಳ್ಳಲ್ಲ. ಆದರೂ ಉಪ್ಪಿ ನಿರ್ದೇಶನ ಪ್ರೇಕ್ಷಕರನ್ನು ಸೆಳೆದಿತ್ತು.

Makers of Upendra s starrer UI have clarified details about the movie s OTT partner

3ನೇ ವಾರ 'ಯುಐ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡ್ತಿದೆ. 'ಮ್ಯಾಕ್ಸ್' ಸಿನಿಮಾ ರಿಲೀಸ್ ಬಳಿಕ 'ಯುಐ' ಕಾರುಬಾರು ಕಮ್ಮಿ ಆಗಿತ್ತು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ. ಯಾವಾಗ? ಯಾವ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತದೆ? ಎಂದು ಕೆಲವರು ಕಾಯುತ್ತಿದ್ದಾರೆ.

ಈಗಾಗಲೇ ಸಿನಿಮಾ ನೋಡಿದವರು ನೋಡಿದೇ ಇರುವವರು 'ಯುಐ' ಚಿತ್ರವನ್ನು ಓಟಿಟಿಯಲ್ಲಿ ನೋಡಲು ಎದುರು ನೋಡುತ್ತಿದ್ದಾರೆ. ಇನ್ನು ಸನ್‌ನೆಕ್ಸ್ಟ್‌ಗೆ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿತ್ತು. ಈ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಿದೆ. ಅದೆಲ್ಲ ಸುಳ್ಳು ಸುದ್ದಿ. ಯಾರು ಕೂಡ ನಂಬಬೇಡಿ ಎಂದು ಮಾಹಿತಿ ನೀಡಿದ್ದಾರೆ. ಓಟಿಟಿ ಸ್ಟ್ರೀಮಿಂಗ್ ಬಗ್ಗೆ ನಾವೇ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

ಸನ್ ನೆಕ್ಸ್ಟ್(Sun Nxt) ಸಂಸ್ಥೆಗೆ 'ಯುಐ' ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದು ನಮ್ಮ ಗಮನಕ್ಕೆ ಬಂದಿದೆ. ಇದು ಸುಳ್ಳು ಸುದ್ದಿ ಎಂದು ನಾವು ಸ್ಪಷ್ಟನೆ ಪಡಿಸುತ್ತಿದ್ದೇವೆ. ಚಿತ್ರದ ಓಟಿಟಿ ರಿಲೀಸ್ ರೈಟ್ಸ್ ಸೇರಿದಂತೆ ಇತರೆ ಮಾಹಿತಿಯನ್ನು ನಾವೇ ಹಂಚಿಕೊಳ್ಳುತ್ತೇವೆ. ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಖಚಿತ ಮಾಹಿತಿ ಸಿಗುತ್ತದೆ ಕಾಯುತ್ತಿರಿ" ಎಂದು ಚಿತ್ರತಂಡ ಪೋಸ್ಟ್ ಮಾಡಿದೆ.

ನಿರ್ಮಾಪಕ ಕೆ. ಪಿ ಶ್ರೀಕಾಂತ್ ಪೋಸ್ಟ್ ನೋಡಿ ಕೆಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ದಯವಿಟ್ಟು ನೆಟ್‌ಫ್ಲಿಕ್ಸ್ ಅಥವಾ ಅಮೇಜಾನ್ ಪ್ರೈಂ ವೀಡಿಯೋಗೆ ರೈಟ್ಸ್ ಮಾರಾಟ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನೆರಡು ವಾರಗಳಲ್ಲಿ 'ಯುಐ' ಸಿನಿಮಾ ಓಟಿಟಿಗೆ ಬರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ 'ಯುಐ' ಚಿತ್ರದಲ್ಲಿ ಉಪ್ಪಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕಲ್ಕಿ ಹಾಗೂ ಸತ್ಯನ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ತೆರೆಮೇಲೆ ನಿರ್ದೇಶಕ ಉಪೇಂದ್ರ ಆಗಿಯೂ ದರ್ಶನ ಕೊಟ್ಟಿದ್ದಾರೆ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಆರ್ಮುಗ ರವಿಶಂಕರ್, ಸಾಧು ಕೋಕಿಲ ಹಾಗೂ ಅಚ್ಯುತ್‌ ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ.

ಸಿನಿಮಾದೊಳಗಿನ ಸಿನಿಮಾ ಕಥೆ 'ಯುಐ' ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳು ಸೂಪರ್ ಹಿಟ್ ಆಗಿತ್ತು. ಕಳೆದ 3 ದಿನ ಓಟಿಟಿಯಲ್ಲಿ ತಲಾ 1 ಲಕ್ಷ ಟಿಕೆಟ್ ಬುಕ್ ಆಗಿ ಸಿನಿಮಾ ದಾಖಲೆ ಬರೆದಿತ್ತು. 2024ರಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ 'ಯುಐ' ಎಂದು ಚಿತ್ರತಂಡ ಘೋಷಿಸಿತ್ತು.

More from Filmibeat

English summary
UI Movie OTT; Upendra's Movie Makers Clarify OTT Release Rumors;
Read more about: upendra ui ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X