'ಮಂಜುಮ್ಮೆಲ್ ಬಾಯ್ಸ್' ಓಟಿಟಿ ರಿಲೀಸ್ ಡೇಟ್ ಫಿಕ್ಸ್!; ಕನ್ನಡದಲ್ಲೂ ಸ್ಟ್ರೀಮಿಂಗ್

ಮಲಯಾಳಂ ಬ್ಲಾಕ್‌ಬಸ್ಟರ್ 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಇತ್ತೀಚೆಗೆ ಸಿನಿಮಾ ತೆಲುಗಿಗೂ ಡಬ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆಂಧ್ರ, ತೆಲಂಗಾಣದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಹೆಚ್ಚಾಗಿದೆ.

ಸಿಂಪಲ್ ಕಥೆ ಆಧರಿಸಿ ಮಲಯಾಳಂನಲ್ಲಿ ಚಿದಂಬರಂ ಕಟ್ಟಿಕೊಟ್ಟಿದ್ದ 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ಸಂಚಲನ ಸೃಷ್ಟಿಸಿದೆ. 56 ದಿನಕ್ಕೆ ಸಿನಿಮಾ ಗ್ರಾಸ್ ಕಲೆಕ್ಷನ್ 200 ಕೋಟಿ ರೂ. ದಾಟಿದೆ. ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾ ಪಾತ್ರವಾಗಿದೆ.

Malayalam film Manjummel Boys is expected to premiere on May 3rd

ಶೌಬಿನ್ ಶಾಹಿರ್, ಶ್ರೀನಾಥ್ ಬಾಸಿ, ಬಾಲು ವರ್ಗೀಸ್, ಗಣಪತಿ ಸೇರಿದಂತೆ ಸಾಕಷ್ಟು ಜನ ಕಲಾವಿದರು 'ಮಂಜುಮ್ಮೆಲ್ ಬಾಯ್ಸ್' ಚಿತ್ರದಲ್ಲಿದ್ದಾರೆ. ಸ್ಟಾರ್ ನಟರಿಲ್ಲದ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿವುದು ಎಲ್ಲರ ಹುಬ್ಬೇರಿಸಿದೆ. ಅಂದಾಜು 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಎಲ್ಲರ ನಿರೀಕ್ಷೆ ಮೀರಿ ಹಲವು ಪಟ್ಟು ಅಧಿಕ ಗಳಿಕೆ ಕಂಡಿದೆ.

ಕೇರಳದ ಕೊಚ್ಚಿಯಲ್ಲಿ ಕುಟ್ಟನ್ (ಶೌಬಿನ್ ಶಾಹಿರ್), ಸುಭಾಷ್ (ಶ್ರೀನಾಥ್ ಬಾಷಿ) ಹಾಗೂ ಅವರ ಸ್ನೇಹಿತರೆಲ್ಲಾ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಇರುತ್ತಾರೆ. ಈ ಗ್ಯಾಂಗ್‌ನಲ್ಲಿ 'ಮಂಜುಮ್ಮೆಲ್ ಬಾಯ್ಸ್' ಎನ್ನುವ ಅಸೋಷಿಯೇಷನ್ ಇರುತ್ತದೆ. ಮಂಜುಮ್ಮೆಲ್ ಬ್ಯಾಚ್ ಕೊಡೈಕೆನಾಲ್ ಪ್ರವಾಸಕ್ಕೆ ಹೊರಡುತ್ತಾರೆ. ಆ ಪ್ರವಾಸದಲ್ಲಿ ಆಸಕ್ತಿ ಇಲ್ಲದ ಸುಭಾಷ್‌ನನ್ನು ಕುಟ್ಟನ್ ಒಪ್ಪಿಸಿ ಕರೆದುಕೊಂಡು ಹೋಗುತ್ತಾನೆ"

Malayalam film Manjummel Boys is expected to premiere on May 3rd

ಮಂಜುಮ್ಮೆಲ್ ಬಾಯ್ಸ್ ಗುಣ ಕೇವ್ ಎನ್ನುವ ಜಾಗಕ್ಕೆ ಹೋಗುತ್ತಾರೆ. ಆ ಕಂದಕದಲ್ಲಿ ಬಿದ್ದವರು ಜೀವಂತವಾಗಿ ಬದುಕಿಬಂದ ಉದಾಹರಣೆಗಳಿಲ್ಲ. ಅದಕ್ಕಾಗಿಯೇ ಗುಣ ಗುಹೆಯೊಳಗೆ ಹೋಗುವುದನ್ನು ನಿಷೇಧಿಸಲಾಗಿರುತ್ತದೆ. ಆದರೆ, ಮಂಜುಮ್ಮೆಲ್ ಬಾಯ್ಸ್ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಆ ಗುಣ ಗುಹೆಯೊಳಗೆ ಹೋಗುತ್ತಾರೆ. ಅನಿರೀಕ್ಷಿತವಾಗಿ ಸುಭಾಷ್ ಕಿರಿದಾದ ಕಂದಕದಲ್ಲಿ ಬೀಳುತ್ತಾನೆ. ಆ ನಂತರ ಸುಭಾಷ್ ಜೀವಂತವಾಗಿ ಬರ್ತಾನಾ? ಆತ‌ನನ್ನು ರಕ್ಷಿಸಲು ಕುಟ್ಟನ್ ಹಾಗೂ ಸ್ನೇಹಿತರು ಏನೆಲ್ಲಾ ಸಾಹಸ ಮಾಡುತ್ತಾರೆ? ಎನ್ನುವುದು ಸಿನಿಮಾ ಕಥೆ.

ಹೆಚ್ಚು ಕಡಿಮೆ ಒಂದೂವರೆ ಗಂಟೆ ಸಿನಿಮಾ ಒಂದೇ ಲೋಕೇಶನ್‌ನಲ್ಲಿ ನಡೆಯುತ್ತದೆ. ಸ್ಕ್ರಿಪ್ಟ್ ಬಿಗಿಯಾಗಿದ್ದರೆ ಮಾತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ. ಆ ಮ್ಯಾಜಿಕ್ 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ಮಾಡಿದೆ. ಅದಕ್ಕೆ ತಕ್ಕ ರೆಸ್ಪಾನ್ಸ್ ಸಿಕ್ಕಿದೆ.

ಸರ್ವೈವಲ್ ಕಾನ್ಸೆಪ್ಟ್‌ ಭಾರತದ ಸಿನಿಮಾಗಳಲ್ಲಿ ಕಮ್ಮಿ. ಒಂದು ಗುಹೆಯ ನಡುವಿನ ಆಳವಾದ ಕಂದಕದ ಸುತ್ತಾ ನಿರ್ದೇಶಕರು ಕಟ್ಟಿದ ಸನ್ನಿವೇಶಗಳು, ಜೊತೆಗೆ ಸ್ನೇಹಿತರ ಎಮೋಷನ್, ಒಂದು ತಂಡ ಪ್ರವಾಸಕ್ಕೆ ಹೋಗುವುದು, ಅದರಲ್ಲಿ ಒಬ್ಬ ಕಂದಕದಲ್ಲಿ ಬೀಳುವುದು ಹೀಗೆ ಎಲ್ಲವನ್ನು ಸೊಗಸಾಗಿ ಸೆರೆಹಿಡಿದು ಚಿತ್ರತಂಡ ಗೆದ್ದಿದೆ. ಕಮರ್ಷಿಯಲ್ ಅಂಶಗಳನ್ನು ಪಕ್ಕಕ್ಕಿಟ್ಟು ಬಹಳ ರಿಯಲಿಸ್ಟಿಕ್ ಆಗಿ ಸಿನಿಮಾ ಕಟ್ಟಿಕೊಡಲಾಗಿದೆ.

'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಮೇ 3ರಂದು ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತವಾಗಿದೆ. ಫೆಬ್ರವರಿ 22ರಂದು ತೆರೆಗೆ ಬಂದಿದ್ದ ಸಿನಿಮಾ ಈಗಾಗಲೇ 50 ದಿನ ಪೂರೈಸಿದೆ. ಸದ್ಯ ತೆಲುಗು, ತಮಿಳು, ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು ಏಕಕಾಲಕ್ಕೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವ ಚರ್ಚೆ ನಡೀತಿದೆ.

More from Filmibeat

English summary
Manjummel Boys Ott streaming details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X