Mana Shankaravaraprasad Garu Ott: 'ಮನ ಶಂಕರವರಪ್ರಸಾದ್ ಗಾರು' ಓಟಿಟಿ ಎಂಟ್ರಿ ಎಲ್ಲಿ? ಯಾವಾಗ?
ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ 'ಮನ ಶಂಕರವರಪ್ರಸಾದ್ ಗಾರು'. ಸಂಕ್ರಾಂತಿ ಸಂಭ್ರಮದಲ್ಲಿ ಹಲವು ಸಿನಿಮಾಗಳು ತೆರೆಗೆ ಬಂದಿದ್ದವು. ಆದರೆ ಚಿರಂಜೀವಿ ಹಾಗೂ ನಯನತಾರಾ ನಟನೆಯ ಈ ಕಾಮಿಡಿ ಎಂಟರ್‌ಟೈನರ್ ಬಾಕ್ಸಾಫೀಸ್ ಶೇಕ್ ಮಾಡಿತ್ತು. 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ.
3ನೇ ವಾರದಲ್ಲಿ ಕೂಡ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ. ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಸಿಂಪಲ್ ಕಥೆಯನ್ನು ಅನಿಲ್ ರಾವಿಪುಡಿ ಸೊಗಸಾಗಿ ತೆರೆಗೆ ತಂದು ಗೆದ್ದಿದ್ದಾರೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ಮೆಗಾಸ್ಟಾರ್ ಚಿರಂಜೀವಿಗೆ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಒಳ್ಳೆ ಬ್ರೇಕ್ ಕೊಟ್ಟಿದೆ. ಕಮರ್ಷಿಯಲ್ ಆಗಿ ಮಾತ್ರವಲ್ಲ ಪ್ರೇಕ್ಷಕರ ಮೆಚ್ಚುಗೆ ಕೂಡ ಗಳಿಸಿದೆ. ಡ್ಯಾನ್ಸ್, ಫೈಟ್ಸ್ ಮೂಲಕ ಚಿರು ಮತ್ತೆ ದರ್ಬಾರ್ ನಡೆಸಿದ್ದಾರೆ. ಬಾಸ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಓಟಿಟಿಯಲ್ಲಿ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ನೋಡಲು ಸಾಕಷ್ಟು ಜನ ಕಾಯುತ್ತಿದ್ದಾರೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಯಾವಾಗ ಓಟಿಟಿಗೆ ಬರಬಹುದು ಎನ್ನುವ ಚರ್ಚೆ ನಡೀತಿದೆ. ಫೆಬ್ರವರಿ 11ರಂದು ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಜೀ5 ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಕನ್ನಡಕ್ಕೂ ಡಬ್ ಆಗಿ ಬರುವ ಸಾಧ್ಯತೆಯಿದೆ.
ಶ್ರೀಮಂತರ ಮನೆ ಮಗಳು ಶಶಿರೇಖಾಳನ್ನು ಶಂಕರ ವರಪ್ರಸಾದ್ ಪ್ರೀತಿಸಿ ಮದುವೆ ಆಗುತ್ತಾನೆ. ಇಬ್ಬರೂ ಮಕ್ಕಳು ಹುಟ್ಟಿದ ಬಳಿಕ ಭಿನ್ನಾಭಿಪ್ರಾಯಗಳಿಂದ ದಂಪತಿ ಡಿವೋರ್ಸ್ ಪಡೆದು ದೂರಾಗುತ್ತಾರೆ. ಮಕ್ಕಳ ಮೂಲಕ ವರಪ್ರಸಾದ್ ಮತ್ತೆ ಹೇಗೆ ಪತ್ನಿಗೆ ಹತ್ತಿರವಾಗುತ್ತಾನೆ ಎನ್ನುವುದು ಇನ್ನುಳಿದ ಕಥೆ.
ಬಾಕ್ಸಾಫೀಸ್ ಕಲೆಕ್ಷನ್
'ಮನ ಶಂಕರವರಪ್ರಸಾದ್ ಗಾರು' ಚಿತ್ರ 15 ದಿನಕ್ಕೆ 350 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿದೆ. ನೈಜಾಂನಲ್ಲಿ ಮಾತ್ರ 30 ಲಕ್ಷ ಟಿಕೆಟ್ ಮಾರಾಟವಾಗಿರುವುದಾಗಿ ಮಾಹಿತಿ ನೀಡಿದೆ. ಆ ಮೂಲಕ ಚಿರಂಜೀವಿ ಸಿನಿಮಾ ಹೊಸ ದಾಖಲೆ ನಿರ್ಮಾಣ ಮಾಡಿದೆ.
ಸಂಕ್ರಾಂತಿ ವಿನ್ನರ್
ಈ ಬಾರಿ ಸುಗ್ಗಿ ಸಂಭ್ರಮದಲ್ಲಿ 'ಮನ ಶಂಕರವರಪ್ರಸಾದ್ ಗಾರು' ಜೊತೆ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಹಾಗೂ ತಮಿಳಿನ 'ಪರಾಶಕ್ತಿ' ಸೇರಿ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗಿದ್ದವು. ಆದರೆ ಯುವುದೇ ಸಿನಿಮಾ ವರಪ್ರಸಾದ್ ಎದುರು ನಿಲ್ಲಲಿಲ್ಲ. 'ದಿ ರಾಜಾಸಾಬ್' ಸಿನಿಮಾ ಹೀನಾಯವಾಗಿ ಸೋತು ನಷ್ಟಕ್ಕೆ ಸಿಲುಕಿದೆ. ಈ ಚಿತ್ರ ಫೆಬ್ರವರಿ 6ಕ್ಕೆ ಓಟಿಟಿಗೆ ಬರುವುದು ಖಚಿತವಾಗಿದೆ.
30 ದಿನಕ್ಕೆ ಓಟಿಟಿಗೆ
ಚಿತ್ರರಂಗದಲ್ಲೀಗ ವಿಚಿತ್ರ ಟ್ರೆಂಡ್ ನಡೀತಿದೆ. ದೊಡ್ಡ ಸಿನಿಮಾಗಳು ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿವೆ. ಇದು ಮುಂದೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಲು ಹಿಂದೇಟು ಹಾಕುವಂತೆ ಮಾಡುತ್ತದೆ. 'ಕಾಂತಾರ- 1' ರೀತಿಯ ಸಿನಿಮಾಗಳೇ 30 ದಿನಕ್ಕೆ ಓಟಿಟಿಗೆ ಬಂದು ಅಚ್ಚರಿ ಮೂಡಿಸಿದ್ದವು. ಬಾಲಿವುಡ್‌ನಲ್ಲಿ ಮಾತ್ರ 8 ವಾರಗಳ ಬಳಿಕ ಚಿತ್ರಗಳು ಓಟಿಟಿಗೆ ಬರುವ ನಿಯಮವಿದೆ.
ವಿಶೇಷ ಸೂಚನೆ: 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಫೆಬ್ರವರಿ 11ರಂದು ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.


Click it and Unblock the Notifications











