Manjummel Boys ott: ಸೂಪರ್ ಹಿಟ್ 'ಮಂಜುಮ್ಮೇಲ್ ಬಾಯ್ಸ್' ಓಟಿಟಿ ಸ್ಟ್ರೀಮಿಂಗ್ ಎಲ್ಲಿ, ಯಾವಾಗ?
ಬಾಕ್ಸಾಫೀಸ್‌ನಲ್ಲಿ ಸಂಚಲನ ಸೃಷ್ಟಿಸಿರುವ 'ಮಂಜುಮ್ಮೇಲ್ ಬಾಯ್ಸ್' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಈಗಾಗಲೇ ಸಿನಿಮಾ ವಿಶ್ವದಾದ್ಯಂತ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. 34 ದಿನಗಳಲ್ಲಿ ಸಿನಿಮಾ ಹಲವು ದಾಖಲೆ ಬರೆದಿದೆ.
ಮಲಯಾಳಂನಲ್ಲಿ ಮಮ್ಮುಟಿ, ಮೋಹನ್ ಲಾಲ್ ಸಿನಿಮಾಗಳು ಮಾಡದ ದಾಖಲೆಗಳು ಈ ಸಣ್ಣ ಸಿನಿಮಾ ಪಾಲಾಗಿದೆ. ಚಿದಂಬರಂ ನಿರ್ದೇಶನದ 'ಮಂಜುಮ್ಮೇಲ್ ಬಾಯ್ಸ್' ಸಿನಿಮಾ ಬಜೆಟ್‌ಗಿಂತ ನೂರಾರು ಪಟ್ಟು ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಕರ್ನಾಟಕದಲ್ಲಿ ಕೂಡ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಯಶಸ್ವಿಯಾಗಿ ಸಿನಿಮಾ 50ನೇ ದಿನದತ್ತ ದಾಪುಗಾಲು ಇಟ್ಟಿದೆ.

ಸೌಬಿನ್ ಶಾಹಿರ್, ಶ್ರೀನಾತ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊಡವಲ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್ 'ಮಂಜುಮ್ಮೇಲ್ ಬಾಯ್ಸ್' ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಸರ್ವೈವಲ್ ಜಾನರ್ ಸಿನಿಮಾ ಇದು. ಸಿಂಪ್ಲ ಕಥೆಯನ್ನು ಪರಿಣಾಮಕಾರಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿದೆ.
ನೂರಾರು ಅಡಿ ಆಳದ ಕಂದಕದಲ್ಲಿ ಬಿದ್ದ ಯುವಕನನ್ನು ಆತನ ಸ್ನೇಹಿತರು ಹೇಗೆ ರಕ್ಷಿಸಿದರು ಎನ್ನುವ ಸಣ್ಣ ಎಳೆ ಇಟ್ಟುಕೊಂಡು ಈ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡಲಾಗಿದೆ. ಕೊಚ್ಚಿಯ ಕೆಲ ಸ್ನೇಹಿತರು ಕೊಡೈಕೆನಾಲ್ ಪ್ರವಾಸಕ್ಕೆ ಹೋಗುತ್ತಾರೆ. ಆ ಪ್ರವಾಸಕ್ಕೆ ಹೋಗಲು ಒಪ್ಪದ ಸ್ನೇಹಿತ ಸುಭಾಷ್‌ನನ್ನು ಬಲವಂತ ಮಾಡಿ ಕರೆದುಕೊಂಡು ಹೋಗುತ್ತಾರೆ. ಪ್ರವಾಸದ ಹಾದಿಯಲ್ಲಿ ಗುಣ ಗುಹೆ ನೋಡಲು ಹೋಗುತ್ತಾರೆ. ಆ ಕಂದಕದಲ್ಲಿ ಬಿದ್ದವರು ಯಾರು ಬದುಕಿ ಬಂದ ಉದಾಹರಣೆ ಇಲ್ಲ. ಆದರೆ ಆಕಸ್ಮಿಕವಾಗಿ ಸುಭಾಷ್ ಆ ಕಂದಕದೊಳಗೆ ಬೀಳುತ್ತಾರೆ. ಆತ ಜೀವಂತವಾಗಿ ಮರಳಿ ಬರ್ತಾನಾ? ಆತನನ್ನು ರಕ್ಷಿಸಲು ಸ್ನೇಹಿತರ ನಡೆಸುವ ಹೋರಾಟ ಎಂಥದ್ದು? ಎನ್ನುವುದೇ ಸಿನಿಮಾ ಕಥೆ. ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

'ಮಂಜುಮ್ಮೇಲ್ ಬಾಯ್ಸ್' ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಕೆಲವರು ಓಟಿಟಿಯಲ್ಲೇ ನೋಡಲು ಕಾಯುತ್ತಿದ್ದಾರೆ. ಏಪ್ರಿಕ್ 5ಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಇದು ಸುಳ್ಳು ಎನ್ನುವ ವಾದವೂ ಇದೆ. ಚಿತ್ರವನ್ನು ಕೊಂಡುಕೊಳ್ಳಲು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಮುಂದೆ ಬರುತ್ತಿಲ್ಲ ಎನ್ನುವ ವಾದವೂ ಇದೆ.
ಸಿನಿಮಾ ಬಿಡುಗಡೆಗೂ ಮುನ್ನ ಓಟಿಟಿ ಪಾರ್ಟ್ನರ್ ಫಿಕ್ಸ್ ಆಗಿರಲಿಲ್ಲ. ಆದರೆ ದಿಢೀರನೆ ಸಿನಿಮಾ ಸೂಪರ್ ಹಿಟ್ ಆಗಿದೆ. ಮಾಲಿವುಡ್ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. ಹಾಗಾಗಿ ಡಿಜಿಟಲ್ ರೈಟ್ಸ್ ಬೆಲೆ ಹೆಚ್ಚಿಸಿದ್ದಾರೆ. ಅದೇ ಕಾರಣಕ್ಕೆ ಯಾರು ಕೂಡ ರೈಟ್ಸ್ ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ. 'ಮಂಜುಮ್ಮೇಲ್ ಬಾಯ್ಸ್' ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ರಯತ್ನ ನಡೀತಿದೆ.
ಮಲಯಾಳಂನಲ್ಲೇ ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಚಿತ್ರವನ್ನು ಶೀಘ್ರದಲ್ಲೇ ತೆಲುಗು ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರಲ್ಲ ಎನ್ನಲಾಗುತ್ತಿದೆ. ನಿರ್ಮಾಪಕರು ಕೂಡ ಇದೇ ಮಾತನ್ನು ಹೇಳಿದ್ದಾರೆ ಎಂದು ವರದಿಯಾಗಿದೆ. ಕನ್ನಡಕ್ಕೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಸಾಧ್ಯತೆಯಿದೆ.
ಕೆಲ ಮೂಲಗಳ ಪ್ರಕಾರ ಡಿಸ್ನಿಪ್ಲಸ್ ಹಾಟ್‌ಸ್ಟರ್ 'ಮಂಜುಮ್ಮೇಲ್ ಬಾಯ್ಸ್' ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಸಾಮಾನ್ಯವಾಗಿ ಸಿನಿಮಾ ತೆರೆಕಂಡು 45 ದಿನಗಳ ಬಳಿಕ ಸ್ಮಾಲ್ ಸ್ಕ್ರೀನ್‌ಗೆ ಬರುತ್ತದೆ. ಆದರೆ ಸಿನಿಮಾ ಇನ್ನು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಸ್ಟ್ರೀಮಿಂಗ್ ಮುಂದೂಡಲಾಗುತ್ತಿದೆಯಂತೆ.


Click it and Unblock the Notifications











