Manjummel Boys OTT: ಸೂಪರ್ ಹಿಟ್ 'ಮಂಜುಮ್ಮೆಲ್ ಬಾಯ್ಸ್' ಓಟಿಟಿ ರಿಲೀಸ್ ಡೇಟ್ ಘೋಷಣೆ

ಮಲಯಾಳಂ ಸೂಪರ್ ಹಿಟ್ 'ಮಂಜುಮೇಲ್ ಬಾಯ್ಸ್' ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಯಾವುದೇ ಸ್ಟಾರ್ ನಟರಿಲ್ಲದೇ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.

ಚಿದಂಬರಂ ನಿರ್ದೇಶನದ 'ಮಂಜುಮೇಲ್ ಬಾಯ್ಸ್' ಸಿನಿಮಾ ಫೆಬ್ರವರಿ 22ಕ್ಕೆ ತೆರೆಕಂಡಿತ್ತು. ಬಾಲು ವರ್ಗೀಸ್, ಸೌಬಿನ್ ಶಾಹಿರ್, ಶ್ರೀನಾಥ್ ಬಾಸಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಂದಾಜು 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 10 ಪಟ್ಟು ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಈ ಚಿತ್ರವನ್ನ ಪರಭಾಷಾ ಪ್ರೇಕ್ಷಕರು ನೋಡಲು ಕಾಯುತ್ತಿದ್ದಾರೆ.

Manjummel Boys to stream on Disney plus Hostar from May 5th in including kannada

'ಮಂಜುಮೇಲ್ ಬಾಯ್ಸ್' ಸಿನಿಮಾ ತೆಲುಗುಗೂ ಡಬ್ ಆಗಿ ತೆರೆಗಪ್ಪಳಿಸಿ ಗೆದ್ದಿದೆ. ಇದೀಗ 5 ಭಾಷೆಗಳಲ್ಲಿ ಚಿತ್ರವನ್ನು ಓಟಿಟಿ ತರುವ ಪ್ರಯತ್ನ ನಡೀತಿದೆ. ಕನ್ನಡದಕ್ಕೂ ಸಿನಿಮಾ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ. ಶೈಜು ಕಾಲಿದ್ ಛಾಯಾಗ್ರಹಣ ಹಾಗೂ ಸುಶಿನ್ ಶ್ಯಾಮ್ ಸಂಗೀತ ಚಿತ್ರಕ್ಕಿದೆ. ಮೊದಲ ದಿನವೇ ಸಿನಿಮಾ 3.3 ಕೋಟಿ ರೂ. ಕಲೆಕ್ಷನ್ ಮಾಡಿ ಗೆಲುವಿನ ಓಟ ಆರಂಭಿಸಿತ್ತು.

ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿತು. ನೋಡ ನೋಡುತ್ತಲೇ ಪರಭಾಷಿಕರು ಕೂಡ ಸಿನಿಮಾ ನೋಡಲು ಮುಗಿಬಿದ್ದರು. ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 50 ದಿನ ಪೂರೈಸಿ ಸಿನಿಮಾ ಮುನ್ನುಗ್ಗುತ್ತಿದೆ. ಈಗಾಗಲೇ ಗ್ರಾಸ್ ಕಲೆಕ್ಷನ್ 236 ಕೋಟಿ ರೂ. ದಾಟಿದೆ ಎನ್ನಲಾಗುತ್ತಿದೆ. ಕೆಲವರು ತಮ್ಮದೇ ಭಾಷೆಯಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ.

ಕೇರಳದಲ್ಲಿ ಕುಟ್ಟನ್, ಸುಭಾಷ್ ಮತ್ತವರ ಸ್ನೇಹಿತರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಈ ಗ್ಯಾಂಗ್‌ಗೆ 'ಮಂಜುಮೇಲ್ ಬಾಯ್ಸ್' ಹೆಸರಿನ ಅಸೋಸಿಯೇಷನ್ ಇರುತ್ತದೆ. ಈ ತಂಡದವರೆಲ್ಲಾ ಕೊಡೆಕೆನಾಲ್ ಪ್ರವಾಸಕ್ಕೆ ತೆರಳುತ್ತಾರೆ. ಆರಂಭದಲ್ಲಿ ಎಲ್ಲವೂ ಜಾಲಿಯಾಗಿಯೇ ಇರುತ್ತದೆ. ಆದರೆ ಗುಣ ಕೇವ್ಸ್ ನೋಡಲು ಹೋದಾಗ ತಂಡದ ಸುಭಾಷ್ ಕಂದಕದಲ್ಲಿ ಬಿದ್ದು ಬಿಡುತ್ತಾನೆ. ಅಲ್ಲಿಂದ ಸಿನಿಮಾ ಕಥೆಗೆ ದೊಡ್ಡ ತಿರುವು ಸಿಗುತ್ತದೆ.

Manjummel Boys to stream on Disney plus Hostar from May 5th in including kannada

ಆ ಕಂದಕದಲ್ಲಿ ಬಿದ್ದವರು ಬದುಕಿ ಬಂದ ಉದಾಹರಣೆ ಇರುವುದಿಲ್ಲ. ಹಾಗಾದರೆ ಸುಭಾಷ್ ಬದುಕಿ ವಾಪಸ್ ಬರ್ತಾನಾ? ಇಲ್ವಾ? ಎನ್ನುವುದೇ ಇನ್ನುಳಿದ ಸಿನಿಮಾ ಕಥೆ. ಈ ಕಥೆ ಮೇಲ್ನೋಟಕ್ಕೆ ಸಿಂಪಲ್ ಎನಿಸಿದರೂ ಅದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿದೆ. ಅದೇ ಕಾರಣಕ್ಕೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಡಿಸ್ನಿ ಹಾಟ್‌ಸ್ಟರ್ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ.

ಮೇ 5ರಂದು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಮಂಜುಮೇಲ್ ಬಾಯ್ಸ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸಿನಿಮಾ ವೀಕ್ಷಿಸಬಹುದು. ಜೊತೆಗೆ ಏಷ್ಯಾನೆಟ್ ಸಂಸ್ಥೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಖರೀದಿಸಿದೆ. ಶೀಘ್ರದಲ್ಲೇ ಸಿನಿಮಾ ಟಿವಿಗೂ ಬರಲಿದೆ.

ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಮಂಜುಮೇಲ್ ಬಾಯ್ಸ್' ಪಾತ್ರವಾಗಿದೆ. ಮಲಯಾಳಂ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಮೋಹನ್ ಲಾಲ್, ಮಮ್ಮುಟಿ, ದುಲ್ಕರ್ ಸಲ್ಮಾನ್ ಹೀಗೆ ಮಾಲಿವುಡ್ ಟಾಪ್ ಹೀರೊಗಳ ಸಿನಿಮಾ ದಾಖಲೆಗಳನ್ನು ಮುರಿದು ಸಂಚಲನ ಸೃಷ್ಟಿಸಿದೆ.

More from Filmibeat

English summary
Mollywood super hit Manjummel Boys ott Streaming details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X