For Quick Alerts
  ALLOW NOTIFICATIONS  
  For Daily Alerts

  ಮನೋಜ್ ಬಾಜಪೇಯಿ-ಸಮಂತಾ ನಟನೆಯ 'ಫ್ಯಾಮಿಲಿ ಮ್ಯಾನ್-2' ಬಿಡುಗಡೆ ಯಾವಾಗ?

  |

  ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದ ಮನೋಬ್ ಬಾಜ್ಪಾಯಿ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಭಾರಿ ಕುತೂಹಲದಿಂದ ಕಾಯುತ್ತಿರುವ ವೆಬ್ ಸೀರಿಸ್ ಪ್ರಿಯರಿಗೆ ಫ್ಯಾಮಿಲಿ ಮ್ಯಾನ್ ತಂಡ ಸಿಹಿ ಸುದ್ದಿ ನೀಡಿದೆ.

  2019ರಲ್ಲಿ ಬಿಡುಗಡೆಯಾಗಿದ್ದ ಫ್ಯಾಮಿಲಿ ಮ್ಯಾನ್ ನೋಡಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ದರು. ಪಾರ್ಟ್-2 ಗಾಗಿ ಎರಡು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ಇದೀಗ ಫ್ಯಾಮಿಲಿ ಮ್ಯಾನ್-2 ನೋಡುವ ಸಮಯ ಬಂದಿದೆ. ಪಾರ್ಟ್-2 ಟೀಸರ್ ಆಗುತ್ತಿದ್ದಂತೆ ಮತ್ತಷ್ಟು ನಿರೀಕ್ಷೆ ಇಮ್ಮಡಿಗೊಳಿಸಿದ ಫ್ಯಾಮಿಲಿ ಮ್ಯಾನ್-2 ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

  ಅಕ್ಷಯ್ ಕುಮಾರ್ ವಿರುದ್ಧ ಅಕ್ಷಯ್ ಕುಮಾರ್ ಪೈಪೋಟಿಅಕ್ಷಯ್ ಕುಮಾರ್ ವಿರುದ್ಧ ಅಕ್ಷಯ್ ಕುಮಾರ್ ಪೈಪೋಟಿ

  ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕರಾದ ರಾಜ್ ನಿಧಿಮೋರು ಮತ್ತು ಕೃಷ್ಣ ಡಿಕೆ, ' ಫ್ಯಾಮಿಲಿ ಮ್ಯಾನ್ ಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದೀರಿ ಎನ್ನುವುದು ತಿಳಿದಿದೆ. ನಿಮ್ಮೆಲ್ಲರ ಪ್ರೀತಿಗೆ ನಾವು ಕೃತಜ್ಞರಾಗಿರುತ್ತೇವೆ. ಫ್ಯಾಮಿಲಿ ಮ್ಯಾನ್-2 ಬೇಸಿಗೆಯಲ್ಲಿ ಅಮೆಜಾನ್ ಪ್ರೈಂನಲ್ಲಿ ಪ್ರದರ್ಶನವಾಗಲಿದೆ. ನೀವು ಇಷ್ಟಪಡುತ್ತೀರಿ ಎನ್ನುವುದು ಖಾತ್ರಿಯಿದೆ' ಎಂದು ಹೇಳಿದ್ದರು.

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಬಹುನಿರೀಕ್ಷೆಯ ವೆಬ್ ಸೀರಿಸ್ ಫ್ಯಾಮಿಲಿ ಮ್ಯಾನ್-2 ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಶೀಘ್ರದಲ್ಲೇ ತಂಡ ಅಂತಿಮ ದಿನಾಂಕ ಪ್ರಕಟಮಾಡಲಿದೆ ಎಂದು ಮೂಲವೊಂದು ತಿಳಿಸಿದೆ.

  ಪಶ್ಚಿಮ‌ ಬಂಗಾಳ ಮತ್ತು ದೀದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಗೆ ಸಸ್ಪೆಂಡ್ ಮಾಡಿದ ಟ್ವಿಟ್ಟರ್ | Filmibeat Kannada

  ಫ್ಯಾಮಿಲಿ ಮ್ಯಾನ್-2ಗೆ ಹೊಸ ಎಂಟ್ರಿ ಎಂದರೆ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ. ಸಮಂತಾ ರಾಜಿ ಎನ್ನುವ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಮೊದಲ ಭಾಗದಂತೆ ಪ್ರಿಯಾಮಣಿ ನಟ ಮನೋಜ್ ಬಾಜಪೇಯಿ ಅವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದ ಫ್ಯಾಮಿಲಿ ಮ್ಯಾನ್ ಪಾರ್ಟ್-2 ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  English summary
  Manoj Bajpayee and Samantha Akkineni's The Family man-2 likely to release on June.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X