'ದಿ ಫ್ಯಾಮಿಲಿ ಮ್ಯಾನ್-3'ಗೆ ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟ ಮನೋಜ್ ಬಾಜಪೇಯಿ
ದಿ ಫ್ಯಾಮಿಲಿ ಮ್ಯಾನ್-2 ಸೂಪರ್ ಸಕ್ಸಸ್ ಬಳಿಕ ಸೀಸನ್ 3 ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಈಗಾಗಲೇ ದಿ ಫ್ಯಾಮಿಲಿ ಮ್ಯಾನ್ 3 ಬಗ್ಗೆ ಮನೋಜ್ ಬಾಜಪೇಯಿ ಸುಳಿವು ನೀಡಿದ್ದು ಇನ್ನು ಒಂದೂವರೆ ವರ್ಷದಲ್ಲಿ ಸಿದ್ಧವಾಗಲಿದೆ ಎಂದಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್ 1 ಮತ್ತು 2ರ ಮೂಲಕ ಚಿತ್ರಪ್ರೇಕ್ಷಕರ ಹೃದಯ ಗೆದ್ದಿರುವ ಮನೋಜ್ ಬಾಜಪೇಯಿ ಸದ್ಯ ಟ್ರೆಂಡಿಂಗ್ ನಲ್ಲಿದ್ದಾರೆ. ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ನಟಿಸಿರುವ ಮನೋಜ್ ಬಾಜಪೇಯಿಗೆ ಫಿದಾ ಆಗದವರಿಲ್ಲ. ದಿ ಫ್ಯಾಮಿಲಿ ಮ್ಯಾನ್-2 ನೋಡಿ ಸಂಭ್ರಮಿಸಿದ ಅಭಿಮಾನಿಗಳು, ಸೀಸನ್ 3ಗೆ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಮನೋಜ್ ಬಾಜಪೇಯಿ ಸಂಭಾವನೆ ವಿಚಾರ ಸದ್ದು ಮಾಡುತ್ತಿದೆ. ಮುಂದೆ ಓದಿ..

ಡಬಲ್ ಸಂಭಾವನೆ ಬೇಡಿಕೆ ಇಟ್ಟ ಮನೋಜ್ ಬಾಜಪೇಯಿ
ಈಗಾಗಲೇ ಸೀಸನ್ 3 ಬಗ್ಗೆ ಚರ್ಚೆ ನಡೆಯುತ್ತಿದ್ದು, ಮನೋಜ್ ಬಾಜಪೇಯಿ ಸಂಭಾವನೆ ವಿಚಾರ ಸದ್ದು ಮಾಡುತ್ತಿದ್ದಾರೆ. ಎರಡು ಸೀಸನ್ ಸೂಪರ್ ಸಕ್ಸಸ್ ಆದ ಬಳಿಕ ಮನೋಜ್ ಬಾಜಪೇಯಿ 3ನೇ ಸೀಸನ್ ಗೆ ಡಬಲ್ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಪ್ರತಿ ಎಪಿಸೋಡ್ ಗೆ 2.50 ಕೋಟಿ ರೂ.
ದಿ ಫ್ಯಾಮಿಲಿ ಮ್ಯಾನ್ ಸೀಸನ್ 3ಗೆ ಮನೋಜ್ ಬಾಜಪೇಯಿ ಪ್ರತಿ ಎಪಿಸೋಡ್ ಗೆ 2.25 ರಿಂದ 2.50 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಸೀಸನ್ 3ನಲ್ಲೂ 9 ಎಪಿಸೋಡ್ ಗಳಿದ್ದು ಒಟ್ಟು 20.25 ರಿಂದ 22.50 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಮನೋಜ್ ಬಾಜಪೇಯಿ.

ದಿ ಫ್ಯಾಮಿಲ್ ಮ್ಯಾನ್-2ಗೆ ಪಡೆದ ಸಂಭಾವನೆ
ಅಂದಹಾಗೆ ದಿ ಫ್ಯಾಮಿಲಿ ಮ್ಯಾನ್-2ಗೆ ಮನೋಜ್ ಬಾಜಪೇಯಿ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಇದೀಗ ಸೀಸನ್ 3ಗೆ ಸಂಭಾವನೆಯನ್ನು ದುಪ್ಪಟ್ಟು ಏರಿಸಿಕೊಂಡಿದ್ದಾರೆ. ಎರಡೂ ಸೀಸನ್ ಗೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣ 3ನೇ ಸೀಸನ್ ಗೆ ಮನೋಜ್ ಬಾಜಪೇಯಿ ಬೇಡಿಕೆ ಇಟ್ಟ ಸಂಭಾವನೆ ಸಿಕ್ಕಿದರೂ ಅಚ್ಚರಿ ಪಡಬೇಕಾಗಿಲ್ಲ.

ಸಮಂತಾ ಪಡೆದ ಸಂಭಾವನೆ ಎಷ್ಟು?
ಮೊದಲ ಬಾರಿಗೆ ವೆಬ್ ಸರಣಿಯಲ್ಲಿ ಮಿಂಚಿರುವ ಸಮಂತಾ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರೆಬಲ್ ಮಹಿಳೆಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಸಮಂತಾ ಮೊದಲ ವೆಬ್ ಸರಣಿಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ. ಸಮಂತಾ 3 ರಿಂದ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.


Click it and Unblock the Notifications











