ಸಿದ್ಧವಾಗ್ತಿದೆ 'ದಿ ಫ್ಯಾಮಿಲಿ ಮ್ಯಾನ್ 3'; ಬಿಡುಗಡೆ ಬಗ್ಗೆ ಸುಳಿವು ನೀಡಿದ ಮನೋಜ್ ಬಾಜಪೇಯಿ
'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಸೂಪರ್ ಸಕ್ಸಸ್ ಆಗಿದೆ. ಮೊದಲ ಸೀಸನ್ ಬಿಡುಗಡೆಯಾದ ಬಳಿಕ ವೆಬ್ ಸರಣಿಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನೋಡಿ ಸೀಸನ್ 2 ಮಾಡಲು ನಿರ್ಧರಿಸಿ ಇದೀಗ ಬಿಡುಗಡೆ ಸಹ ಮಾಡಲಾಗಿದೆ. ಜೂನ್ 4ರಂದು ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್-2ಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ ಮತ್ತು ಡಿಕೆ ನಿರ್ದೇಶನ, ಮನೋಜ್ ಬಾಜಪೇಯಿ, ಸಮಂತಾ ಅಕ್ಕಿನೇನಿ, ಪ್ರಿಯಮಣಿ ಸೇರಿದಂತೆ ಪ್ರತಿಯೊಬ್ಬರ ಪಾತ್ರಗಳು ಅದ್ಭುತವಾಗಿ ಮೂಡಿಬಂದ್ದು, ಎಲ್ಲಿ ನೋಡಿದ್ರು ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸರಣಿಯದ್ದೇ ಮಾತು. ಅಂದಹಾಗೆ ಫ್ಯಾಮಿಲಿ ಮ್ಯಾನ್ ಸರಣಿ ಇಲ್ಲಿಗೆ ಮುಕ್ತಾಯವಾಯ್ತು ಅಂತ ಅಂದುಕೊಳ್ಳಬೇಡಿ. ಸೀಸನ್ 2 ಸಕ್ಸಸ್ ಆಗುತ್ತಿದ್ದಂತೆ ದಿ ಫ್ಯಾಮಿಲಿ ಮ್ಯಾನ್ -3 ಮಾಡುವ ಬಗ್ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಕೊರೊನಾ ಲಾಕ್ ಡೌನ್ ನ ಈ ಸಮಯದಲ್ಲಿ ವೆಬ್ ಸರಣಿಯ ಕಥೆ ಸಿದ್ಧಮಾಡಲಾಗುತ್ತಿದೆ ಎನ್ನುವ ಮಾಹಿತಿ ಕೇಳಿಬಂದಿದೆ. ಈ ಬಗ್ಗೆ ಮನೋಜ್ ಬಾಜಪೇಯಿ ಪ್ರತಿಕ್ರಿಯೆ ನೀಡಿದ್ದಾರೆ. ಸೀಸನ್-2ನ ಕೊನೆಯಲ್ಲಿ ಚೀನಾ ಸಂಪರ್ಕ ಹೊಂದಿರುವ ಬಗ್ಗೆ ಹೇಳುವ ಮೂಲಕ ವೆಬ್ ಸರಣಿ ಮುಗಿಸಲಾಗಿದೆ. ಇದು ಸೀಸನ್-3ನ ಪ್ರಾರಂಭ ಎನ್ನಲಾಗುತ್ತಿದೆ.

ಇನ್ನು ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಮನೋಜ್ ಬಾಜಪೇಯಿ, 'ಲಾಕ್ ಡೌನ್ ನಿಂದ ಎಲ್ಲರೂ ಮನೆಯಲ್ಲೇ ಲಾಕ್ ಆಗಿದ್ದಾರೆ. ಲಾಕ್ ಡೌನ್ ತೆರವು ಆಗುತ್ತಿದ್ದಂತೆ ಮತ್ತೆ ಸಿನಿಮಾ ಕೆಲಸಗಳು ಪ್ರಾರಂಭವಾಗಲಿದೆ. ವೆಬ್ ಸರಣಿ ಮುಂದುವರೆಯಲಿದೆ ಎನ್ನುವುದು ಖಾತ್ರಿ ಇದೆ. ಏಕೆಂದರೆ ಚಿತ್ರಕಥೆ ಸಿದ್ಧವಿದೆ.' ಎಂದಿದ್ದಾರೆ.
'ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಒಂದೂವರೆ ವರ್ಷದಲ್ಲಿ 3ನೇ ಸೀಸನ್ ಸಿದ್ಧವಾಗಲಿದೆ. ಅಥವಾ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ' ಎಂದು ಮನೋಜ್ ಬಾಜಪೇಯಿ ಬಹಿರಂಗ ಪಡಿಸಿದ್ದಾರೆ. ಇದೀಗ ಅಭಿಮಾನಿಗಳ ಕುತೂಹಲ ದಿ ಫ್ಯಾಮಿಲಿ ಮ್ಯಾನ್ ಸೀಸನ್ 3 ಬಗ್ಗೆ ಇದೆ.


Click it and Unblock the Notifications











