For Quick Alerts
  ALLOW NOTIFICATIONS  
  For Daily Alerts

  ಕೊಲ್ಲಲು ಬಂದ ಸಮಂತಾ: ಕುತೂಹಲ ಮೂಡಿಸಿದ 'ದಿ ಫ್ಯಾಮಿಲಿ ಮ್ಯಾನ್ 2'

  |

  ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಜನಮನ ಗೆದ್ದಿದ್ದ 'ದಿ ಫ್ಯಾಮಿಲಿ ಮ್ಯಾನ್' ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯ ಟ್ರೇಲರ್ ಇಂದು ಬಿಡುಗಡೆ ಆಗಿದ್ದು ಕುತೂಹಲ ಮೂಡಿಸಿದೆ.

  ವೆಬ್ ಸರಣಿಯ ನಾಯಕ ಮನೋಜ್ ಬಾಜಪೇಯಿ ಈ ಬಾರಿ ನಟಿ ಸಮಂತಾ ಅಕ್ಕಿನೇನಿಯನ್ನು ಎದುರಿಸಲಿದ್ದಾರೆ. ಟ್ರೇಲರ್‌ನಲ್ಲಿ ಸಮಂತಾರ ಕೆಲವು ದೃಶ್ಯಗಳಿದ್ದು ಈವರೆಗೆ ಕಾಣದಿದ್ದ ಸಮಂತಾರ ಹೊಸ ಮುಖ ಟ್ರೇಲರ್‌ನಲ್ಲಿ ಕಾಣಸಿಗುತ್ತಿದೆ.

  ಫ್ಯಾಮಿಲಿ ಮ್ಯಾನ್‌ನಲ್ಲಿ ಟಿಎಎಸ್‌ಸಿಯ ಏಜೆಂಟ್ ರಾಜಿ ಆಗಿ ಉಗ್ರರ ವಿರುದ್ಧ ಹೋರಾಡಿದ್ದ ಮನೋಜ್ ಬಾಜಪೇಯಿ ಕುಟುಂಬದ ಒತ್ತಡಕ್ಕೆ ಸಿಲುಕಿ ಕೆಲಸ ಬದಲಾವಣೆ ಮಾಡಿದ್ದಾನೆ. ಆದರೆ ಹೊಸ ಕೆಲಸಕ್ಕೆ ಹೊಂದಿಕೆ ಆಗಲಾರದೆ ಮರಳಿ ಏಜೆಂಟ್‌ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.

  ಸಮಂತಾ ಅಕ್ಕಿನೇನಿ ಎಲ್‌ಟಿಟಿಇ ಉಗ್ರಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ನಾನು ಎಲ್ಲರನ್ನೂ ಕೊಂದೇ ತೀರುವೆ' ಎಂದು ತಣ್ಣಗೆ ಸಮಂತಾ ಹೇಳುವ ಡೈಲಾಗ್ ಸಮಂತಾ, ಆಕ್ಷನ್‌ ದೃಶ್ಯಗಳಲ್ಲಿ ಸಹ ಪಾಲ್ಗೊಂಡಿದ್ದಾರೆ.

  ನಟಿ ಪ್ರಿಯಾಮಣಿ ಮನೋಜ್ ಬಾಜಪೇಯಿ ಪತ್ನಿಯ ಪಾತ್ರದಲ್ಲಿ ಮುಂದುವರೆದಿದ್ದಾರೆ. ಮೊದಲ ಸೀಸನ್‌ನಲ್ಲಿದ್ದ ಅವರಿಬ್ಬರ ಪ್ರೀತಿ ತುಂಬಿದ ಜಗಳ ಈ ಸೀಸನ್‌ನಲ್ಲಿಯೂ ಮುಂದುವರೆದಿದೆ. ಮೊದಲ ಸೀಸನ್‌ನಲ್ಲಿ ನಟಿಸಿದ್ದ ಶರಿಬ್ ಹಶ್ಮಿ, ಗುಲ್ ಪನಾಗ್ ಅವರುಗಳು ಈ ಸೀಸನ್‌ನಲ್ಲಿ ಸಹ ಮುಂದುವರೆದಿದ್ದಾರೆ.

  ಮೊದಲ ಸೀಸನ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ ಈ ಸೀಸನ್‌ ಅನ್ನೂ ನಿರ್ದೇಶನ ಮಾಡಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2, ಜೂನ್ 4 ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

  English summary
  The Family man season 2 trailer released today. Web series will release on June 4 on Amazon prime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X