For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್‌ನಲ್ಲಿ ಸಿನಿಮಾ ಸಂಭ್ರಮ: ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಮುಖ್ಯ ಸಿನಿಮಾಗಳಿವು

  |

  ಕೊರೊನಾ ಹೊಡೆತಕ್ಕೆ ಸಿಕ್ಕಿ ನೆಲಕಚ್ಚಿರುವ ಚಿತ್ರಮಂದಿರಗಳು ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಲವು ರಾಜ್ಯಗಳಲ್ಲಿ ಚಿತ್ರಮಂದಿರ ತೆರೆದೇ ಇಲ್ಲ. ಕೆಲವು ರಾಜ್ಯಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಲಾಗಿದೆ. ಹೀಗಿರುವಾಗ ಒಟಿಟಿಗಳು ತಮ್ಮ ಪಾರುಪತ್ಯ ಮುಂದುವರೆಸಿವೆ.

  ಕೊರೊನಾ ಆರಂಭವಾದಾಗಿನಿಂದಳೂ ಒಟಿಟಿಗಳು ಮನರಂಜನೆಯ ಮುಖ್ಯ ಮಾಧ್ಯಮಗಳಲ್ಲಿ ಒಂದಾಗಿದ್ದು, ಹೊಸ ಸಾಧ್ಯತೆಗಳನ್ನು ಪ್ರೇಕ್ಷಕರ ಮುಂದಿಟ್ಟಿವೆ. ಪ್ರತಿ ತಿಂಗಳ ಭಿನ್ನ-ಭಿನ್ನ ರೀತಿಯ ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿಗಳನ್ನು ಒಟಿಟಿಗಳು ಜನರ ಮುಂದಿಡುತ್ತಿವೆ.

  ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಒಟಿಟಿಗಳು ದೊಡ್ಡ ಕಂಟೆಂಟ್‌ ಅನ್ನೇ ವೀಕ್ಷಕರಿಗಾಗಿ ಹೊತ್ತು ತರುತ್ತಿವೆ. ಸಿನಿಮಾಗಳು, ಜನಪ್ರಿಯ ವೆಬ್ ಸರಣಿಗಳು ಸಾಲು-ಸಾಲಾಗಿ ಸೆಪ್ಟೆಂಬರ್ ತಿಂಗಳಲ್ಲಿ ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ. ಹಾಲಿವುಡ್ ಅನ್ನು ಹೊರತುಪಡಿಸಿ ಭಾರತೀಯ ಭಾಷೆಯ ಯಾವ-ಯಾವ ಸಿನಿಮಾಗಳು, ವೆಬ್ ಸರಣಿಗಳು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಆಗಲಿದೆ ಎಂಬ ಪಟ್ಟಿ ಇಲ್ಲಿದೆ.

  'ಮಾಸ್ಟ್ರೊ'

  'ಮಾಸ್ಟ್ರೊ'

  ತೆಲುಗಿನ 'ಮಾಸ್ಟ್ರೊ' ಸಿನಿಮಾ ಸೆಪ್ಟೆಂಬರ್ 17ಕ್ಕೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ನಿತಿನ್, ತಮನ್ನಾ, ನಭಾ ನಟೇಶ್ ಈ ಸಿನಿಮಾ ಹಿಂದಿಯ 'ಅಂಧಾಧುನ್' ಸಿನಿಮಾದ ರೀಮೇಕ್. ನೇರವಾಗಿ ಒಟಿಟಿಗೆ ಬಿಡುಗಡೆ ಆಗುತ್ತಿರುವ ನಿತಿನ್‌ರ ಮೊದಲ ಸಿನಿಮಾ 'ಮಾಸ್ಟ್ರೊ'.

  'ಟಕ್ ಜಗದೀಶ್'

  'ಟಕ್ ಜಗದೀಶ್'

  ತೆಲುಗಿನ ನಟ ನಾನಿ ನಟಿಸಿರುವ 'ಟಕ್ ಜಗದೀಶ್' ಅಮೆಜಾನ್ ಪ್ರೈಂಗೆ ಸೆಪ್ಟೆಂಬರ್ 10ಕ್ಕೆ ಬಿಡುಗಡೆ ಆಗಲಿದೆ. ಶಿವವರ್ಮಾ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾನಿ ಜೊತೆಗೆ ಐಶ್ವರ್ಯಾ ರಾಜೇಶ್, ರಿತು ವರ್ಮಾ, ಜಗಪತಿ ಬಾಬು ಇನ್ನೂ ಹಲವರು ನಟಿಸಿದ್ದಾರೆ. ಈ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿದ್ದಕ್ಕೆ ತೆಲುಗು ರಾಜ್ಯಗಳ ಚಿತ್ರ ಪ್ರದರ್ಶಕರು ವಿರೋಧ ವ್ಯಕ್ತಪಡಿಸಿ, ಮುಂದಿನ ನಾನಿ ಸಿನಿಮಾಗಳಿಗೆ ನಿಷೇಧ ಹೇರಿದ್ದಾರೆ.

  'ಅನ್ನಾಬೆಲ್ಲ ಸೇತುಪತಿ'

  'ಅನ್ನಾಬೆಲ್ಲ ಸೇತುಪತಿ'

  ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ, ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ಒಟ್ಟಿಗೆ ನಟಿಸಿರುವ 'ಅನ್ನಾಬೆಲ್ಲ ಸೇತುಪತಿ' ಸಿನಿಮಾ ಸೆಪ್ಟೆಂಬರ್ 17ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ಬಿಡುಗಡೆ ಆಗಲಿದೆ. ಹಾರರ್ ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ಮತ್ತು ತಾಪ್ಸಿ ಪನ್ನು ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಜಗಪತಿ ಬಾಬು, ರಾಜೇಂದ್ರ ಪ್ರಸಾದ್, ರಾಧಿಕಾ ಶರತ್‌ಕುಮಾರ್, ಯೋಗಿ ಬಾಬು ಇನ್ನೂ ಹಲವು ಪ್ರತಿಭಾವಂತ ನಟರಿದ್ದಾರೆ. ಸಿನಿಮಾವನ್ನು ದೀಪಕ್ ಸುಂದರ್‌ರಾಜನ್ ನಿರ್ದೇಶನ ಮಾಡಿದ್ದಾರೆ.

  'ತುಘಲಕ್ ದರ್ಬಾರ್'

  'ತುಘಲಕ್ ದರ್ಬಾರ್'

  ವಿಜಯ್ ಸೇತುಪತಿ ನಟನೆಯ 'ತುಗಲಕ್ ದರ್ಬಾರ್' ಸಿನಿಮಾ ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿಗೆ ನೇರವಾಗಿ ಸನ್ ಟಿವಿಯಲ್ಲಿ ಪ್ರಸಾರವಾಗಲಿದೆ. ಅದೇ ದಿನ ನೆಟ್‌ಫ್ಲಿಕ್ಸ್‌ನಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರಮಂದಿರದ ಬದಲಿಗೆ ನೇರವಾಗಿ ಟಿವಿಯಲ್ಲಿ ಬಿಡುಗಡೆ ಆಗುತ್ತಿರುವ ಕೆಲವೇ ಸಿನಿಮಾಗಳಲ್ಲಿ ಇದೂ ಸಹ ಒಂದು. ಸಿನಿಮಾವನ್ನು ಡೆಲ್ಲಿ ಪ್ರಸಾದ್ ದೀನದಯಾಳ್ ನಿರ್ದೇಶನ ಮಾಡಿದ್ದಾರೆ.

  'ಡಿಕ್ಕಿಲೂನಾ'

  'ಡಿಕ್ಕಿಲೂನಾ'

  ತಮಿಳಿನ 'ಡಿಕ್ಕಿಲೂನಾ' ಸಿನಿಮಾ ಜೀ5ನಲ್ಲಿ ಸೆಪ್ಟೆಂಬರ್ 10ರಂದು ಬಿಡಗುಡೆ ಆಗಲಿದೆ. ಸಿನಿಮಾದಲ್ಲಿ ಸಂತನಮ್, ಹರ್ಭಜನ್ ಸಿಂಗ್, ಅನಘ, ಶಿರಿನ್ ಕಂಚಾವಾಲಾ, ಯೋಗಿ ಬಾಬು ಇನ್ನೂ ಹಲವರು ನಟಿಸಿದ್ದಾರೆ. ಈ ಕಾಮಿಡಿ ಸಿನಿಮಾವನ್ನು ಕಾರ್ತಿಕ್ ಯೋಗಿ ನಿರ್ದೇಶನ ಮಾಡಿದ್ದಾರೆ.

  'ಹೆಲ್ಮೆಟ್'

  'ಹೆಲ್ಮೆಟ್'

  ಕಾಂಡೊಮ್ ಕುರಿತಾದ ಹಾಸ್ಯಮಯ ಸಿನಿಮಾ 'ಹೆಲ್ಮೆಟ್' ಸೆಪ್ಟೆಂಬರ್ 03ರಂದು ಜೀ5ನಲ್ಲಿ ಬಿಡುಗಡೆ ಆಗಲಿದೆ. ಟ್ರೇಲರ್‌ನಿಂದ ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ಈ ಸಿನಿಮಾದಲ್ಲಿ ಅಪಾರಶಕ್ತಿ ಖುರಾನಾ, ಪ್ರಣುತನ್ ಭಾಲ್, ಅಭಿಷೇಕ್ ಬ್ಯಾನರ್ಜಿ, ಅನಿಷ್ ವರ್ಮಾ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸತ್ರಮ್ ರಮಾನಿ.

  'ಭೂತ್ ಪೊಲೀಸ್'

  'ಭೂತ್ ಪೊಲೀಸ್'

  ಸೈಫ್ ಅಲಿಖಾನ್-ಅರ್ಜುನ್ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಭೂತ್ ಪೊಲೀಸ್' ಸೆಪ್ಟೆಂಬರ್ 17ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಹಾರರ್‌ ಕಾಮಿಡಿ ಆಗಿರುವ ಈ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ಯಾಮಿ ಗುಪ್ತಾ, ಅಲಿ ಫಜಲ್, ಜಾವೆದ್ ಜಫ್ರಿ ನಟಿಸಿದ್ದಾರೆ. ಸಿನಿಮಾವನ್ನು ಪವನ್ ಕೃಪಲಾನಿ ನಿರ್ದೇಶನ ಮಾಡಿದ್ದಾರೆ.

  English summary
  Many Indian movies releasing on OTT in September month. Here is the list on main Indian movies going to release on OTT this September

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X