MARK OTT Release Date: ಓಟಿಟಿಯಲ್ಲಿಯೂ 45 VS ಮಾರ್ಕ್- ಚಿತ್ರಮಂದಿರದಲ್ಲಿರುವಾಗಲೇ ಅಂಗೈಗೆ ಬಂದ ಸಿನಿಮಾ

ಕಳೆದ ವರ್ಷಾಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಒಂದು ಕಡೆ ''ಮಾರ್ಕ್'' ಬಿಡುಗಡೆಯಾಗಿದ್ದರೆ ಮತ್ತೊಂದು ಕಡೆ ''45'' ಬಿಡುಗಡೆಯಾಗಿತ್ತು. ಬಾಕ್ಸಾಫೀಸ್‌ನ ಈ ಸಮರದಲ್ಲಿ ''45'' ತಂಡಕ್ಕೆ ಹಿನ್ನೆಡೆ ಆಗಿತ್ತು. ''ಮಾರ್ಕ್'' ಒಂದು ಹೆಜ್ಜೆ ಮುಂದೆ ಇತ್ತು. ಈಗ ತಿಂಗಳ ನಂತರ ಮತ್ತೊಮ್ಮೆ ಇವೆರಡು ಚಿತ್ರಗಳು ಮುಖಾಮುಖಿಯಾಗುತ್ತಿವೆ. ಚಿತ್ರಮಂದಿರದಲ್ಲಿ ಅಲ್ಲ ಬದಲಿಗೆ ಓಟಿಟಿಯಲ್ಲಿ. ಹೌದು, ಈಗಾಗಲೇ ಜನವರಿ 23ರಿಂದ....

ಜೀ5ನಲ್ಲಿ ''45'' ಚಿತ್ರ ಪ್ರಸಾರವಾಗಲಿದೆ. ಈಗಾಗಲೇ ಈ ಕುರಿತು ಘೋಷಣೆಯನ್ನು ಕೂಡ ಮಾಡಲಾಗಿದ್ದು ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡದೇ ಇರುವವರು ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಇದೀಗ ''ಮಾರ್ಕ್'' ಚಿತ್ರ ಕೂಡ ಇದೇ ಜನವರಿ 23ರಿಂದ ಪ್ರಸಾರವಾಗಲಿದೆ. ಈ ಮೂಲಕ ಓಟಿಟಿಯಲ್ಲಿಯೂ ಕೂಡ ''45'' ಚಿತ್ರಕ್ಕೆ ಸ್ಫರ್ಧೆಯನ್ನೊಡ್ಡಲಿದೆ.

Mark OTT Release Confirmed Kichcha Sudeep s Explosive Cop Thriller Strikes JioHotstar on January 23

ಇನ್ನು ''ಮಾರ್ಕ್'' ಪ್ಯಾನ್ ಇಂಡಿಯಾ ಚಿತ್ರ. ಕನ್ನಡ ಜೊತೆ ಏಕಕಾಲಕ್ಕೆ ಬೇರೆ ಭಾಷೆಗಳಲ್ಲಿ ಕೂಡ ''ಮಾರ್ಕ್‌'' ಬಿಡುಗಡೆಯಾಗಬೇಕಿತ್ತು. ಆದರೆ.. ಅದು ಆಗಲಿಲ್ಲ. ಕನ್ನಡದಲ್ಲಿ ಬಿಡುಗಡೆಗೊಂಡ ಒಂದು ವಾರದ ನಂತರ ತಮಿಳು ಸೇರಿ ಬೇರೆ ಭಾಷೆಗಳಲ್ಲಿ ''ಮಾರ್ಕ್‌'' ಬಿಡುಗಡೆಯಾಗಿತ್ತು. ಓಟಿಟಿಯಲ್ಲಿ ಕೂಡ ಮಾರ್ಕ್ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಲಭ್ಯ ಇರಲಿದೆ. ಈ ಮೂಲಕ ಗಡಿಯಾಚೆಯ ಪ್ರೇಕ್ಷಕರನ್ನು ಕೂಡ ''ಮಾರ್ಕ್''ತಲುಪಲಿದೆ.

ಅಂದ್ಹಾಗೇ ''ಮಾರ್ಕ್'' ಇನ್ನು ಚಿತ್ರಮಂದಿರದಲ್ಲಿದೆ. ಕೇವಲ ಬೆಂಗಳೂರಿನಲ್ಲಿಯೇ ನಾಳೆ (ಜನವರಿ 18) 30 ಚಿತ್ರಮಂದಿರಗಳಲ್ಲಿ 41 ಪ್ರದರ್ಶನಗಳನ್ನು ಕಾಣ್ತಿದೆ. ಮೈಸೂರಿನಲ್ಲಿ ಮಾರ್ಕ್‌ಗೆ 13 ಪ್ರದರ್ಶನಗಳನ್ನು ನೀಡಲಾಗಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರ ಅಲ್ಲ ಹುಬ್ಬಳ್ಳಿ, ಧಾರವಾಡ ಸೇರಿ ಬೇರೆ ಬೇರೆ ಕಡೆ ಕೂಡ ''ಮಾರ್ಕ್'' ಇನ್ನೂ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ.

ಇನ್ನೂ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಪೈರಸಿಯ ನಡುವೆಯೂ ''ಮಾರ್ಕ್'' ಕೇವಲ 14 ದಿನದಲ್ಲಿ ₹ 27.15 ಕೋಟಿಯನ್ನು ಗಳಿಸಿತ್ತು. ಸದ್ಯ 25 ದಿನಗಳನ್ನು ಪೂರೈಸಿ ''ಮಾರ್ಕ್'' ಮುನ್ನುಗ್ಗುತ್ತಿದೆ. ಆದರೂ ಕೂಡ ಬಿಡುಗಡೆಯಾದ ಕೇವಲ ಒಂದು ತಿಂಗಳಿಗೆ ''ಮಾರ್ಕ್'' ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಕಥಾಹಂದರವೇನು ?

ಅಮಾನತ್ತಾದ ಎಸ್‌ಪಿ ಅಜಯ್ ಮಾರ್ಕಂಡೇಯ (ಸುದೀಪ್) ಭ್ರಷ್ಟ ರಾಜಕಾರಣಿ ಆದಿಕೇಶವ (ಶೈನ್ ಟಾಮ್ ಚಾಕೋ) ಹೆಡೆಮುರಿ ಕಟ್ಟಲು ಮುಂದಾಗುತ್ತಾನೆ. ಆದರೆ ಇದೇ ಸಮಯದಲ್ಲಿ ಮಕ್ಕಳ ಅಪಹರಣವಾಗುತ್ತೆ. ಮತ್ತೊಂದು ಕಡೆ ಡ್ರಗ್ಸ್ ವಾಸನೆ ಕೂಡ ಬಡಿಯುತ್ತೆ. ಆದಿಕೇಶವನ ರಾಜಕೀಯ ಚಕ್ರವ್ಯೂಹವನ್ನು ಮಾರ್ಕ್ ಭೇದಿಸುತ್ತಾನಾ..? ಮಕ್ಕಳ ಅಪಹರಣದ ಹಿಂದಿನ ಕೈ ಯಾರದ್ದು..? ಈ ಮೂರು ಪ್ರಕರಣಗಳಿಗೂ ಒಂದಕ್ಕೊಂದು ಇರುವ ಸಂಬಂಧವೇನು..? ಈ ಪ್ರಶ್ನೆಗಳಿಗೆಲ್ಲ ಮಾರ್ಕ್ ಕೇವಲ 36 ಗಂಟೆಯಲ್ಲಿ ಉತ್ತರ ಹುಡುಕುತ್ತಾನಾ ಎನ್ನುವುದೇ ಈ ಚಿತ್ರದ ತಿರುಳು.

Mark OTT Release Confirmed Kichcha Sudeep s Explosive Cop Thriller Strikes JioHotstar on January 23

ತಾರಾಬಳಗ

ಕಿಚ್ಚ ಸುದೀಪ್‌, ನವೀನ್‌ ಚಂದ್ರ, ಗುರು ಸೋಮಸುಂದರಂ, ವಿಕ್ರಾಂತ್‌, ಯೋಗಿ ಬಾಬು, ರೋಶಿನಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ, ದೀಪ್ಶಿಕಾ, ಅಶ್ವಿನ್‌ ಹಾಸನ್‌, ಪ್ರತಾಪ್‌ ನಾರಾಯಣ್‌, ಗೋಪಾಲ್‌ ದೇಶಪಾಂಡೆ, ರಘು ರಾಮನಕೊಪ್ಪ ಮುಂತಾದವರು

ಎಲ್ಲಿ ನೋಡಬಹುದು ?

ವಿಜಯ ಕಾರ್ತಿಕೆಯ ನಿರ್ದೇಶನದ ಮಾರ್ಕ್ ಚಿತ್ರ ಈ ಜನವರಿ 23ರಿಂದ ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರಸಾರವಾಗಲಿದೆ. ಆಸಕ್ತ ಚಿತ್ರಪ್ರೇಮಿಗಳು ಮತ್ತು ಸುದೀಪ್ ಅಭಿಮಾನಿಗಳು ಮನೆಯಲ್ಲಿಯೇ ಭರ್ಜರಿ ಆಕ್ಷನ್ ರಸದೌತಣ ಹೊಂದಿರುವ ''ಮಾರ್ಕ್'' ಚಿತ್ರವನ್ನು ಮನೆ ಮಂದಿ ಜೊತೆ ಕುಳಿತು ನೋಡಬಹುದು. ಎಂಜಾಯ್ ಮಾಡಬಹುದು.

More from Filmibeat

English summary
Witness Kichcha Sudeep in his most intense avatar yet! Mark is officially coming to OTT. Get the confirmed release date, streaming platform, and cast details here.
Read more about: filmibeat news kichcha sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X