ಒಟಿಟಿಯಲ್ಲೂ 'ಆಚಾರ್ಯ' ಕಳಪೆ ಪ್ರದರ್ಶನ!

'ಆಚಾರ್ಯ' ಸಿನಿಮಾ ಸಾಕಷ್ಟು ನಿರೀಕ್ಷೆಯ ಜೊತೆಗೆ ತೆರೆಗೆ ಬಂತು. ಚಿತ್ರದಲ್ಲಿ ರಾಮ್‌ ಚರಣ್, ಚಿರಂಜೀವಿ ಇದ್ದಾರೆ ಅಂದ್ಮೇಲೆ ಅದು ಮೆಗಾ ಕುಟುಂಬದ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಲವು ವರ್ಷಗಳ ನಂತರ ತಂದೆ, ಮಗ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಸಿನಿಮಾ ಒಂದು ರೇಂಜಿಗೆ ಇರುತ್ತೆ ಎನ್ನಲಾಗಿತ್ತು. ಆದರೆ ಚಿತ್ರ ರಿಲೀಸ್ ಆದ್ಮೇಲೆ ಎಲ್ಲವೂ ಉಲ್ಟಾ ಆಯ್ತು.

ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರಿ ದೊಡ್ಡ ನಷ್ಟವನ್ನು ಅನುಭವಿಸಿದೆ. ಸಿನಿಮಾ ವಿತರಕರಿಗೆ ಅರ್ಧದಷ್ಟು ಸಹ ಹಣ ವಾಪಸ್ಸಾಗಿಲ್ಲ. ಕರ್ನಾಟಕ ಸೇರಿದಂತೆ, ಆಂಧ್ರ-ತೆಲಂಗಾಣದ ಸಿನಿಮಾ ವಿತರಕರು ತಮಗೆ ನಷ್ಟ ಪರಿಹಾರ ನೀಡಬೇಕೆಂದು ನಟ ಚಿರಂಜೀವಿ ಹಾಗೂ ನಿರ್ಮಾಪಕ ಆಗಿರುವ ರಾಮ್ ಚರಣ್‌ಗೆ ಪತ್ರ ಕೂಡ ಬರೆದಿದ್ದರು.

ಈಗ 'ಆಚಾರ್ಯ'ನ ಹೊಸ ಜರ್ನಿ ಶುರುವಾಗಿದೆ. ಒಟಿಟಿಯಲ್ಲಿ 'ಆಚಾರ್ಯ' ಸಿನಿಮಾ ರಿಲೀಸ್ ಆಗಿದೆ. ಒಟಿಟಿಯಲ್ಲಿ ಸಿನಿಮಾಗೆ ಯಾವ ರೀತಿ ರೆಸ್ಪನ್ಸ್ ಸಿಗುತ್ತೆ ಎಂದು ಕಾಯುತ್ತಿದ್ದರು. ಆದರೆ ಒಟಿಟಿಯಲ್ಲೂ 'ಆಚಾರ್ಯ' ಸಿನಿಮಾಗೆ ಅದೃಷ್ಟ ಬದಲಾಗಲಿಲ್ಲ.

ಮುಂದುವರೆದ 'ಆಚಾರ್ಯ' ಬ್ಯಾಡ್ ಲಕ್!

ಮುಂದುವರೆದ 'ಆಚಾರ್ಯ' ಬ್ಯಾಡ್ ಲಕ್!

'ಆಚಾರ್ಯ' ಸಿನಿಮಾ ಅಂದುಕೊಂಡ ಮಟ್ಟಿಗೆ ಚಿತ್ರಮಂದಿರದಲ್ಲಿ ಸದ್ದು ಮಾಡಲಿಲ್ಲ, ಬಾಕ್ಸಾಫೀಸ್‌ನಲ್ಲೂ ಕೂಡ ಹೆಚ್ಚಿನ ಗಳಿಕೆ ಕಂಡಿಲ್ಲ. ಆದರೆ ಚಿರಂಜೀವಿಗೆ ಹೆಚ್ಚು ಫ್ಯಾಮಿಲಿ ಆಡಿಯನ್ಸ್ ಇರುವ ಕಾರಣಕ್ಕೆ ಒಟಿಟಿಯಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣ ಬಹುದು ಎನ್ನುವ ನಿರೀಕ್ಷೆ ಇತ್ತು. ಅದರೆ ಈಗ ಅದು ಉಲ್ಟಾ ಆಗಿದೆ. ಒಟಿಟಿಯಲ್ಲಿ 'ಆಚಾರ್ಯ' ಸಿನಿಮಾ ಯಾವುದೇ ರೆಕಾರ್ಡ್ ಮಾಡುತ್ತಿಲ್ಲ.

ನಷ್ಟ ಅನುಭವಿಸಿದ ವಿತರಕರಿಗೆ ಚಿರು ನೆರವು!

ನಷ್ಟ ಅನುಭವಿಸಿದ ವಿತರಕರಿಗೆ ಚಿರು ನೆರವು!

ಜೂನ್ ಮೊದಲ ವಾರದಲ್ಲಿ ಚಿರು ಪ್ರವಾಸದಿಂದ ವಾಪಸಾಗಲಿದ್ದಾರಂತೆ. 'ಆಚಾರ್ಯ' ಸಿನಿಮಾ ಕೆಲವು ಕಡೆಗಳಲ್ಲಿ ಅತಿ ಹೆಚ್ಚು ನಷ್ಟ ಕಂಡಿದೆ. ಎಲ್ಲೆಲ್ಲಿ ಹೆಚ್ಚಿನ ನಷ್ಟವನ್ನು ವಿತರಕರನ್ನು ಅನುಭವಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆದು. ಅಂತಹ ವಿತರಕರಿಗೆ ಸಹಾಯ ಮಾಡಲು ಚಿರಂಜೀವಿ ಮತ್ತು ರಾಮ್ ಚರಣ್ ಮುಂದಾಗಿದ್ದಾರಂತೆ.

'ಆಚಾರ್ಯ' ಚಿತ್ರಕ್ಕೆ ಹಾಕಿದ ಬಂಡವಾಳವೂ ಬಂದಿಲ್ಲ!

'ಆಚಾರ್ಯ' ಚಿತ್ರಕ್ಕೆ ಹಾಕಿದ ಬಂಡವಾಳವೂ ಬಂದಿಲ್ಲ!

ಸಿನಿಮಾದ ಒಟ್ಟು ಬಂಡವಾಳ 132 ಕೋಟಿ ರೂ. ಆದರೆ ಈವರೆಗೆ ವಿತರಕರಿಗೆ ಒಟ್ಟಾರೆಯಾಗಿ ವಾಪಸ್ಸು ಬಂದಿರುವುದು ಬಹಳ ಕಡಿಮೆ ಮೊತ್ತ. ಇನ್ನೂ 85 ಕೋಟಿ ರೂ ನಷ್ಟದಲ್ಲಿದೆ ಸಿನಿಮಾ. ಈ ಸಿನಿಮಾಗೆ ಹಾಕಿದ ಬಂಡವಾಳ ವಾಪಸ್ಸು ಬರಬೇಕೆಂದರೆ ಇನ್ನೂ 85 ಕೋಟಿಗಳಷ್ಟು ಕಲೆಕ್ಷನ್ ಮಾಡಬೇಕಿದೆ. ಆದರೆ ಇದು ಸಾಧ್ಯ ಆಗುದಿಲ್ಲ. ಈಗಾಗಲೇ ಬಹುತೇಕ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿ ಆಗಿದೆ.

ಚಿರಂಜೀವಿ ಸಿನಿಮಾ ಹಿಟ್ ಅನಿವಾರ್ಯತೆ!

ಚಿರಂಜೀವಿ ಸಿನಿಮಾ ಹಿಟ್ ಅನಿವಾರ್ಯತೆ!

ನಟ ಚಿರಂಜೀವಿ ಪ್ರಸ್ತುತ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂನ 'ಲೂಸಿಫರ್' ಸಿನಿಮಾದ ರೀಮೇಕ್ 'ಗಾಡ್ ಫಾದರ್'ನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮಿಳು ಸಿನಿಮಾದ ರಿಮೇಕ್ 'ಭೋಲಾ ಶಂಕರ್'ನಲ್ಲಿ ನಟಿಸುತ್ತಿದ್ದಾರೆ. ಬಳಿಕ ಕೆ.ಎಸ್.ರವೀಂದ್ರ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರಗಳು ಹೇಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿವೆ ಎನ್ನುವ ಬಗ್ಗೆ ಪ್ರಶ್ನೆ ಎದ್ದಿದೆ.

More from Filmibeat

English summary
Megastar Chiranjeevi, Ram Charan Starrer Acharya Movie Dull In Ott Also, Know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X