ತೆಲುಗಿನ ಫ್ಲಾಪ್ 'ಆಚಾರ್ಯ' ಒಟಿಟಿಗೆ ಲಗ್ಗೆ: ಒಟಿಟಿಯಲ್ಲಿ ಗೆಲ್ಲುತ್ತಾ?

'ಆಚಾರ್ಯ' ಸಿನಿಮಾ ಸಾಕಷ್ಟು ನಿರೀಕ್ಷೆಯ ಜೊತೆಗೆ ತೆರೆಗೆ ಬಂತು. ಚಿತ್ರದಲ್ಲಿ ರಾಮ್‌ ಚರಣ್, ಚಿರಂಜೀವಿ ಇದ್ದಾರೆ ಅಂದ್ಮೇಲೆ ಅದು ಮೆಗಾ ಕುಟುಂಬದ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಲವು ವರ್ಷಗಳ ನಂತರ ತಂದೆ, ಮಗ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಸಿನಿಮಾ ಒಂದು ರೇಂಜಿಗೆ ಇರುತ್ತೆ ಎನ್ನಲಾಗಿತ್ತು. ಆದರೆ ಚಿತ್ರ ರಿಲೀಸ್ ಆಗಿದ್ದು, ಆಗಿದ್ದು ಎಲ್ಲವೂ ಉಲ್ಟಾ ಆಯ್ತು.

ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರಿ ದೊಡ್ಡ ನಷ್ಟವನ್ನು ಅನುಭವಿಸಿದೆ. ಸಿನಿಮಾ ವಿತರಕರಿಗೆ ಅರ್ಧದಷ್ಟು ಸಹ ಹಣ ವಾಪಸ್ಸಾಗಿಲ್ಲ. ಕರ್ನಾಟಕ ಸೇರಿದಂತೆ, ಆಂಧ್ರ-ತೆಲಂಗಾಣದ ಸಿನಿಮಾ ವಿತರಕರು ತಮಗೆ ನಷ್ಟ ಪರಿಹಾರ ನೀಡಬೇಕೆಂದು ನಟ ಚಿರಂಜೀವಿ ಹಾಗೂ ನಿರ್ಮಾಪಕ ಆಗಿರುವ ರಾಮ್ ಚರಣ್‌ಗೆ ಪತ್ರ ಕೂಡ ಬರೆದಿದ್ದರು.

ಈಗ ಆಚಾರ್ಯನ ಹೊಸ ಜರ್ನಿ ಶುರುವಾಗಿದೆ. ಆಚಾರ್ಯ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿಲ್ಲ. ಆದರೆ ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಒಟಿಟಿಯಲ್ಲಿ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗುತ್ತದೆ ಎನ್ನುವ ಕುತೂಹಲ ಮತ್ತು ನಿರೀಕ್ಷೆಗಳು ಈಗ ಮೂಡಿವೆ.

ಅಮೇಜಾನ್ ಪ್ರೈಮ್‌ನಲ್ಲಿ ಆಚಾರ್ಯ ರಿಲೀಸ್!

ಅಮೇಜಾನ್ ಪ್ರೈಮ್‌ನಲ್ಲಿ ಆಚಾರ್ಯ ರಿಲೀಸ್!

ಇಷ್ಟು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಆಚಾರ್ಯ ಮೇ 20ಕ್ಕೆ ಒಟಿಟಿಗೆ ಬರುತ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಾ ಇದೆ. ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುವುದಕ್ಕೂ, ಒಟಿಟಿಯಲ್ಲಿ ಪ್ರಸಾರ ಆಗುವುದಕ್ಕೂ ವ್ಯತ್ಯಾಸ ಇದೆ. ಹಾಗಾಗಿ ಈ ಚಿತ್ರ ಓಟಿಟಿಯಲ್ಲಿ ದಾಖಲೆ ಮಾಡುವ ಸೂಚನೆ ಇದೆ. ಚಿರಂಜೀವಿಗೆ ಫ್ಯಾಮಿಲಿ ಪ್ರೇಕ್ಷಕರು ಇರುವುದರಿಂದ ಈ ಚಿತ್ರ ಒಟಿಟಿಯಲ್ಲಿ ದಾಖಲೆ ಬರೆಯಬಹುದು ಎನ್ನಲಾಗಿದೆ.

Recommended Video

ಕಾಜಲ್ ಅಗರ್ವಾಲ್‌ರನ್ನು ಕಡೆಗಣಿಸುತ್ತಿರೊ 'ಆಚಾರ್ಯ' ಚಿತ್ರ ತಂಡ! | Kajal Aggarwal | Megastar Chiranjeevi
'ಆಚಾರ್ಯ' ಫ್ಲಾಪ್ ಸಿನಿಮಾ ಎಂದೇ ಪರಿಗಣನೆ!

'ಆಚಾರ್ಯ' ಫ್ಲಾಪ್ ಸಿನಿಮಾ ಎಂದೇ ಪರಿಗಣನೆ!

ಸಿನಿಮಾದ ಒಟ್ಟು ಬಂಡವಾಳ 132 ಕೋಟಿ ರೂ. ಆದರೆ ಈ ವರೆಗೆ ವಿತರಕರಿಗೆ ಒಟ್ಟಾರೆಯಾಗಿ ವಾಪಸ್ಸು ಬಂದಿರುವುದು ಬಹಳ ಕಡಿಮೆ ಮೊತ್ತ. ಇನ್ನೂ 85 ಕೋಟಿ ರೂ ನಷ್ಟದಲ್ಲಿ ಸಿನಿಮಾ. ಸಿನಿಮಾಗೆ ಹಾಕಿದ ಬಂಡವಾಳ ವಾಪಸ್ಸು ಬರಬೇಕೆಂದರೆ ಇನ್ನೂ 85 ಕೋಟಿಗಳಷ್ಟು ಕಲೆಕ್ಷನ್ ಮಾಡಬೇಕಿದೆ. ಆದರೆ ಇದು ಸಾಧ್ಯ ಆಗುದಿಲ್ಲ. ಈಗಾಗಲೇ ಬಹುತೇಕ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿ ಆಗಿದೆ.

ಆಚಾರ್ಯ ನಷ್ಟಕ್ಕೆ ಬೆಲೆ ಕಟ್ಟಲು ಚಿರಂಜೀವಿ ಸಜ್ಜು!

ಆಚಾರ್ಯ ನಷ್ಟಕ್ಕೆ ಬೆಲೆ ಕಟ್ಟಲು ಚಿರಂಜೀವಿ ಸಜ್ಜು!

ಜೂನ್ ಮೊದಲ ವಾರದಲ್ಲಿ ಚಿರು ಪ್ರವಾಸದಿಂದ ವಾಪಸಾಗಲಿದ್ದಾರಂತೆ. 'ಆಚಾರ್ಯ' ಸಿನಿಮಾ ಕೆಲವು ಕಡೆಗಳಲ್ಲಿ ಅತಿ ಹೆಚ್ಚು ನಷ್ಟ ಕಂಡಿದೆ. ಎಲ್ಲೆಲ್ಲಿ ಹೆಚ್ಚಿನ ನಷ್ಟವನ್ನು ವಿತರಕರನ್ನು ಅನುಭವಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆದು. ಅಂತಹ ವಿತರಕರಿಗೆ ಸಹಾಯ ಮಾಡಲು ಚಿರಂಜೀವಿ ಮತ್ತು ರಾಮ್ ಚರಣ್ ಮುಂದಾಗಿದ್ದಾರಂತೆ.

More from Filmibeat

English summary
Megastar Chiranjeevi, Ram Charan Starrer Acharya Movie Releasinig In Ott On May 20, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X