"ಅದು ಶೃಂಗಾರ ದೃಶ್ಯ ಅಲ್ಲ.. ನಿಮಗೆ ಅಕ್ಕ ತಂಗಿ ಯಾರು ಇಲ್ವಾ?": 'ನೀ ಸಿಗೊವರೆಗೂ' ನಟಿ ಮೆಹ್ರೀನ್ ಆಕ್ರೋಶ

ಬಹುಭಾಷಾ ನಟಿ ಮೆಹ್ರೀನ್ ಪಿರ್ಜಾದಾ ಕೆಂಡಾಮಂಡಲವಾಗಿನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ನಿಮಗೆ ಅಕ್ಕ ತಂಗಿ ಯಾರು ಇಲ್ವಾ?" ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಇತ್ತೀಚೆಗೆ ಮೆಹ್ರೀನ್ ನಟನೆಯ 'ಸುಲ್ತಾನ್ ಆಫ್ ಡೆಲ್ಲಿ' ವೆಬ್ ಸೀರಿಸ್ ರಿಲೀಸ್ ಆಗಿದೆ.

'ಸುಲ್ತಾನ್ ಆಫ್ ಡೆಲ್ಲಿ' ವೆಬ್ ಸೀರಿಸ್‌ನಲ್ಲಿ ಮೆಹ್ರೀನ್ ಮದುವೆಯ ನಂತರ ಪತಿ ಬಲವಂತ ಮಾಡುವ ದೃಶ್ಯಗಳ ಜೊತೆಗೆ ಕೆಲವು ಲಿಪ್ ಲಾಕ್ ದೃಶ್ಯಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಂತಹ ಬೋಲ್ಡ್ ದೃಶ್ಯಗಳಲ್ಲಿ ಮೆಹ್ರೀನ್ ನಟಿಸುತ್ತಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ ಈ ರೀತಿಯ ಟೀಕೆಗಳಿಗೆ ಬಹಳ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.

Mehreen-Pirzada-Sultan-of-Delhi-slams-trolls

ತಮ್ಮ ವಿರುದ್ಧದ ಟೀಕೆಗಳಿಗೆ ಮೆಹ್ರೀನ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಇತ್ತೀಚೆಗೆ OTT ಪ್ರವೇಶಿಸಿ 'ಸುಲ್ತಾನ್ ಆಫ್ ಡೆಲ್ಲಿ' ಎಂಬ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದೆ. ಕೆಲವು ಕಥೆಗಳು ಅಂತಹ ದೃಶ್ಯಗಳನ್ನು ಬೇಡುತ್ತವೆ. ಒಬ್ಬ ನಟಿನಾಗಿ ನಾನು ಅಂತಹ ದೃಶ್ಯಗಳನ್ನು ಕಥೆಯ ಭಾಗವಾಗಿ ಮಾಡುತ್ತೇನೆ. ಅದರಲ್ಲಿ ತೋರಿಸಿರುವುದು ವೈವಾಹಿಕ ಅತ್ಯಾಚಾರದ ದೃಶ್ಯ. ಇದು ಸಾಕಷ್ಟು ಜನರಿಗೆ ನೋವುಂಟುಮಾಡುತ್ತದೆ. ಇದರಿಂದ ಸಮಾಜದಲ್ಲಿ ಅನೇಕ ಮಹಿಳೆಯರು ನರಳುತ್ತಿದ್ದಾರೆ. ಆದರೆ ಕೆಲವರು ಇದನ್ನು ಸಾಮಾನ್ಯ ಶೃಂಗಾರ ದೃಶ್ಯ ಎಂದು ಪ್ರಚಾರ ಮಾಡುತ್ತಿದ್ದಾರೆ. ಕೆಲವರು ಇದನ್ನು ನೆಗೆಟಿವ್ ಆಗಿ ಪ್ರಚಾರ ಮಾಡುತ್ತಿರುವುದು ನನಗೆ ಡಿಸ್ಟರ್ಬ್ ಆಗಿದೆ."

ಈ ರೀತಿ ಆ ದೃಶ್ಯವನ್ನು ಒಂದು ರೊಮ್ಯಾಂಟಿಕ್ ದೃಶ್ಯ ಎಂದು ಮಾತನಾಡುವವರಿಗೂ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಇರುತ್ತಾರೆ. ಅವರಿಗೆ ಈ ರೀತಿ ಏನೂ ಆಗದಿರಲಿ ನಾನು ಎಂದು ಪ್ರಾರ್ಥಿಸುತ್ತೇನೆ. ನಾನು ಒಬ್ಬ ನಟಿಯಾಗಿ ಆ ದೃಶ್ಯಗಳಲ್ಲಿ ನಟಿಸಿದೆ. ನನಗರ ಯಾವುದೇ ಕಸಿವಿಸಿ ಆಗಲಿಲ್ಲ. ನಾನು ಯಾವುದೇ ಪಾತ್ರವಾಗಿದ್ದರೂ ಪ್ರೇಕ್ಷಕರಿಗೆ ನನ್ನ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ"

ನಿರ್ದೇಶಕ ಮಿಲನ್ ಲುತ್ರಿಯ ಮತ್ತವರ ತಂಡ ಬಹಳ ವೃತ್ತಿಪರರು. ಕಲಾವಿದರು, ತಂತ್ರಜ್ಞರು ಇಂತಹ ದೃಶ್ಯಗಳನ್ನು ಚಿತ್ರೀಕರಿಸುವಾಗ ಕಸಿವಿಸಿ ಆಗದಂತೆ ನೋಡಿಕೊಂಡರು. ಒಬ್ಬ ನಟಿಯಾಗಿ ನಾನು ಮಹಾಲಕ್ಷ್ಮಿ, ಸಂಜನಾ ಅಥವಾ ಹನಿ ಹೀಗೆ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸಿದ್ದೇನೆ" ಎಂದುಕೊಂಡಿದ್ದೇನೆ" ಎಂದು ಮೆಹ್ರೀನ್ ಟ್ವೀಟ್ ಮಾಡಿದ್ದಾರೆ. ಆಕೆಯ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಪಂಜಾಬ್‌ನಲ್ಲಿ ಹುಟ್ಟಿ ಬೆಳೆದ ಮೆಹ್ರೀನ್ ಪಿರ್ಜಾದಾ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ತಮಿಳು, ಪಂಜಾಬ್ ಸಿನಿಮಾಗಳಲ್ಲೂ ನಟಿಸಿರುವ ಚೆಲುವೆ ಬಾಲಿವುಡ್‌ನ ಒಂದು ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಇದೀಗ ವೆಬ್ ಸೀರಿಸ್ ಮೂಲಕ ಮತ್ತೆ ಬಾಲಿವುಡ್‌ನಲ್ಲಿ ಪ್ರವೇಶಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ 'ನೀ ಸಿಗೋವರೆಗೂ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕಾರಣಾಂತರಗಳಿಂದ 'ನೀ ಸಿಗೋವರೆಗೂ' ಸಿನಿಆ ತಡವಾಗುತ್ತಿದೆ. ಇನ್ನುಳಿದಂತೆ 'ಮಹಾನುಭಾವುಡು', 'ರಾಜಾ ದಿ ಗ್ರೇಟ್', 'ನೋಟಾ', 'ಕವಚಂ', 'F2', 'ಚಾಣಕ್ಯ', 'ಪಟಾಸ್', 'ಅಶ್ವತ್ಥಾಮ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೆಹ್ರೀನ್ ಪಿರ್ಜಾದಾ ನಟಿಸಿದ್ದಾರೆ.

ಅರ್ನಬ್ ರಾಯ್ ಬರೆದ 'ಸುಲ್ತಾನ್ ಆಫ್ ಡೆಲ್ಲಿ' ಪುಸ್ತಕ ಆಧರಿಸಿ ಅದೇ ಹೆಸರಿನ ವೆಬ್‌ ಸೀರಿಸ್ ನಿರ್ಮಾಣವಾಗಿದೆ. ಈ ಆಕ್ಷನ್ ಥ್ರಿಲ್ಲರ್ ವೆಬ್‌ ಸೀರಿಸ್‌ನಲ್ಲಿ ಸಂಜನಾ ಎನ್ನುವ ಪಾತ್ರದಲ್ಲಿ ಮೆಹ್ರೀನ್ ಕಾಣಿಸಿಕೊಂಡಿದ್ದಾರೆ. ತಹೀರ್ ರಾಜ್ ಬಸಿನ್ ಹಾಗೂ ಮೌನಿ ರಾಯ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಕ್ಟೋಬರ್ 13ರಿಂದ ಡಿಸ್ನಿ ಹಾಟ್‌ಸ್ಟರ್‌ನಲ್ಲಿ 'ಸುಲ್ತಾನ್ ಆಫ್ ಡೆಲ್ಲಿ' ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ.

More from Filmibeat

English summary
Mehreen Pirzada slams trolls for Sultan of Delhi series romantic scenes;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X