ಸರ್ಕಾರದಿಂದ ಪ್ರತಿ ವರ್ಷ 'ಅತ್ಯುತ್ತಮ ವೆಬ್ ಸೀರಿಸ್' ಪ್ರಶಸ್ತಿ ಪ್ರದಾನಕ್ಕೆ ತೀರ್ಮಾನ
ಕೇಂದ್ರ ಸರ್ಕಾರವು ಇನ್ನು ಮುಂದೆ ಅತ್ಯುತ್ತಮ ವೆಬ್ ಸಿರೀಸ್‌ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಈ ವಿಷಯವನ್ನು ಸ್ವತಃ ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ. ಈ ಬಗ್ಗೆ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಅತ್ಯುತ್ತಮ ವೆಬ್ ಸೀರಿಸ್' ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರ್ತಿಸಿ ವಿವಿಧ ರೀತಿಯ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾ ಬರ್ತಿದೆ. ಇನ್ನು ಸಿನಿಮಾ ಕ್ಷೇತ್ರಕ್ಕೂ ರಾಷ್ಟ್ರಪ್ರಶಸ್ತಿ ನೀಡುತ್ತಾ ಬರ್ತಿದೆ. ಪ್ರತಿವರ್ಷ ವಿವಿಧ ವಿಭಾಗಗಳಲ್ಲಿ ಹಲವು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ನೀಡಲಾಗುತ್ತದೆ. ಇದೀಗ ಓಟಿಟಿ ಕಂಟೆಂಟ್‌ಗೂ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಲು ಮುಂದಾಗಿದೆ. ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ವರ್ಷ ಇದಕ್ಕೆ ಚಾಲನೆ ಸಿಗಲಿದೆ. ಭಾರತೀಯ ಭಾಷೆಗಳಲ್ಲಿ ನಿರ್ಮಾಣವಾದ ವೆಬ್ ಸೀರಿಸ್‌ಗಳನ್ನು ಮಾತ್ರ ಇದರಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

'ಬೆಸ್ಟ್ ವೆಬ್ ಸೀರಿಸ್' ವಿಭಾಗದಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಅಂದಹಾಗೆ ಈ ಪ್ರಶಸ್ತಿಯು ಒಂದು ಟ್ರೋಫಿ ಹಾಗೂ 10 ಲಕ್ಷ ರೂ. ನಗದು ಬಹುಮಾನ ಒಳಗೊಂಡಿರುತ್ತದೆ. ಟೆಕ್ನಿಕಲ್ ಹಾಗೂ ಇತರೆ ವಿಭಾಗಗಳಲ್ಲಿ ಅತ್ಯುತ್ತಮವಾಗಿರುವ ಸೀರಿಸ್‌ಗಳು ಕಣದಲ್ಲಿ ಇರಲಿವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಹೇಳಿದ್ದಾರೆ. ಓಟಿಟಿಯಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು, ಭಾರತೀಯ ಭಾಷೆಗಳಲ್ಲಿ ವಿಷಯವನ್ನು ತರುವುದು ಮತ್ತು ಅದ್ಭುತ ಪ್ರತಿಭೆಯನ್ನು ಗುರುತಿಸುವುದು ಪ್ರಶಸ್ತಿ ಸಮಾರಂಭದ ಮುಖ್ಯ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
"ಸೃಜನಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತೀಯ ಸಮಾಜ, ಸಂಸ್ಕೃತಿಯನ್ನು ಅವಮಾನಿಸಬೇಡಿ, ಸಂವೇದನಾಶೀಲ ಕಂಟೆಂಟ್ ಸಿದ್ಧಪಡಿಸಿ ಪ್ರದರ್ಶಿಸಿ" ಎಂದು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಪ್ರತಿವರ್ಷ ದೇಶದಲ್ಲಿ ಸಾವಿರಾರು ಗಂಟೆಗಳ ಓಟಿಟಿ ಕಂಟೆಂಟ್ ತಯಾರಾಗುತ್ತಿದೆ. ಕನ್ನಡದಲ್ಲಿ ವೆಬ್ ಸೀರಿಸ್‌ಗಳ ಸಂಖ್ಯೆ ಕಮ್ಮಿ ಇದೆ. ಆದರೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಓಟಿಟಿ ಚಂದಾದಾರರ ಸಂಖ್ಯೆ ಬಹಳ ಹೆಚ್ಚಿದೆ.

ಬಾಲಿವುಡ್‌ನಲ್ಲಿ ಸ್ಟಾರ್ ನಟರು, ತಂತ್ರಜ್ಞರು ಓಟಿಟಿ ಕಂಟೆಂಟ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಅಜಯ್ ದೇವಗನ್, ಅನಿಲ್ ಕಪೂರ್, ತಮನ್ನಾ, ಕಾಜೋಲ್ ಸೇರಿದಂತೆ ಸ್ಟಾರ್ ನಟ, ನಟಿಯರು ಈ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ಸಣ್ಣಪುಟ್ಟ ಪ್ರಯತ್ನಗಳಾಗುತ್ತಿವೆ. ದೊಡ್ಡಮಟ್ಟದಲ್ಲಿ ಓಟಿಟಿ ಕಂಟಂಟ್ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣವಾಗುತ್ತಿಲ್ಲ.


Click it and Unblock the Notifications










