1631 ದಿನಗಳ ನಂತರ 'ಫ್ಯಾಮಿಲಿ' ಜೊತೆ ನಿಮ್ಮ ಮನೆಗೆ ಮತ್ತೆ ಬರ್ತಿದ್ದಾನೆ ಶ್ರೀಕಾಂತ್ ತಿವಾರಿ,ಈ ಬಾರಿ ಶತ್ರು ಯಾರು?

ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್‌ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್‌ ಜಿಟಿವಿ, 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು.

ಕೊರೊನಾ ಕಾಲಘಟ್ಟ ಡಿಜಿಟಲ್ ಲೋಕಕ್ಕೆ ಅವಕಾಶದ ದಿಡ್ಡಿ ಬಾಗಿಲಾಯಿತು. ಮಿಲೇನಿಯಲ್ಸ್ ಅಂದರೆ 18 ರಿಂದ 35ರ ವಯೋಮಾನದವರನ್ನೇ ಗುರಿಯಾನ್ನಾಗಿಸಿಕೊಂಡು ದಿನಗಳೆದಂತೆ ವೇಗವಾಗಿ ಬೆಳೆಯುತ್ತಿರುವ ಈ ಓಟಿಟಿ ವೇದಿಕೆ ಮೂಲಕ ಹಲವು ವೆಬ್ ಸರಣಿಗಳು ಹೊರ ಬಂದಿವೆ. ಮನರಂಜನೆಯ ರಸದೌತಣ ಬಡಿಸಿವೆ. ಅಸಂಖ್ಯಾತ.. ಅಗಣಿತ.. ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದಿವೆ. ಆ ಪೈಕಿ ''ದಿ ಫ್ಯಾಮಿಲಿ ಮ್ಯಾನ್'' ಸರಣಿ ಕೂಡ ಒಂದು.

MISSION DATE SET The Family Man 3 Locks Premiere Srikant Tiwari Prepares for His Toughest Fight

ಹೌದು, ''ದಿ ಫ್ಯಾಮಿಲಿ ಮ್ಯಾನ್''.. ಯಶಸ್ವಿ ಮತ್ತು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಸಮಂತಾ ಅವರ ಹೊಸ ಗೆಳೆಯ ರಾಜ್ ತನ್ನ ಸ್ನೇಹಿತ ಡಿಕೆ ಜೊತೆ ಸೃಷ್ಟಿಸಿರುವ ಅಪರಾಧ ಲೋಕದ ಜಗತ್ತು. ಕೊರೊನಾದ ಕರಿನೆರಳು ದೇಶದ ಮೇಲೆ ಬಿದ್ದಾಗ ಮೊದಲ ಬಾರಿ ಈ ಕಥೆ ಸೆಪ್ಟೆಂಬರ್ 20, 2019ರಲ್ಲಿ ಅನಾವರಣವಾಗಿತ್ತು. ಆ ದಿನ.. ಆ ಕ್ಷಣ.. ತಮ್ಮ ಈ ವೆಬ್ ಸರಣಿ ದೇಶದೆಲ್ಲೆಡೆ ಚರ್ಚಿತ ವಿಷಯವಾಗುತ್ತೆ ಎನ್ನುವ ಚಿಕ್ಕ ಸುಳಿವು ಕೂಡ ಈ ತಂಡಕ್ಕೆ ಇರಲಿಲ್ಲವೇನೋ..?

ನಿರೀಕ್ಷೆಗೂ ಮೀರಿ '' ದಿ ಫ್ಯಾಮಿಲಿ ಮ್ಯಾನ್'' ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕಿತ್ತು. ಇದರಿಂದ ಪ್ರೇರೆಪಿತರಾದ ರಾಜ್ ಮತ್ತು ಡಿಕೆ 2021ರ ಜೂನ್ 4ರಂದು ಎರಡನೇ ಸೀಸನ್‌ನ ಪ್ರೇಕ್ಷಕರ ಮಡಿಲಿಗೆ ಹಾಕಿದರು. ವಿಶೇಷ ಅಂದರೆ ಈ ಸಂಚಿಕೆಯಲ್ಲಿ ಹಿಂದೆಂದೂ ಕಾಣಿಸದ ರೂಪದಲ್ಲಿ ಸಮಂತಾ ಪ್ರತ್ಯಕ್ಷರಾಗಿದ್ದರು. ಕೆಲ ಹಸಿ ಬಿಸಿ ದೃಶ್ಯಗಳಲ್ಲಿ ಕೂಡ ಅಭಿನಯಿಸಿದ್ದರು. ಆದರೆ ಕೊನೆಯಲ್ಲಿ ಆ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಸಮಂತಾ ಜೊತೆ ಈ ದೃಶ್ಯಗಳಲ್ಲಿ ಭಾಗವಹಿಸಿದ್ದ ನಟ ಶಹಾಬ್ ಅಲಿ ಅವರೇ ಈ ಮಾತನ್ನು ಸಂದರ್ಶನವೊಂದರಲ್ಲಿ ಹೇಳಿದ್ದರು.

ಇನ್ನು ''ದಿ ಫ್ಯಾಮಿಲಿ ಮ್ಯಾನ್ ಸೀಸನ್ 1''ರಲ್ಲಿ ಹತ್ತು ಎಪಿಸೋಡ್‌ಗಳಿದ್ದವು. ಎರಡನೇ ಸರಣಿಯಲ್ಲಿ ಒಂಬತ್ತು ಸಂಚಿಕೆಯಲ್ಲಿ ಕಥೆ ಹೇಳಲಾಗಿತ್ತು. ಇಂಥಾ ಸರಣಿಯ ಮೂರನೇ ಭಾಗಕ್ಕೆ ಹಲವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದರೆ.. ನಾಲ್ಕು ವರ್ಷವಾದರೂ ಈ ಸರಣಿಯ ಸುದ್ದಿ ಇರಲಿಲ್ಲ. ಸದ್ದು ಇರಲಿಲ್ಲ. ಈ ಹಿನ್ನೆಲೆ '' ದಿ ಫ್ಯಾಮಿಲಿ ಮ್ಯಾನ್‌''ನ 3ನೇ ಭಾಗ ಬರಲ್ಲ ಎಂದೇ ಹಲವರು ಅಂದುಕೊಂಡಿದ್ದರು.

ಆದರೆ ಈ ವರ್ಷದ ಜೂನ್ ನಲ್ಲಿ ಚಿತ್ರತಂಡ ಎಲ್ಲರನ್ನು ಅಚ್ಚರಿಗೆ ದೂಡಿತ್ತು. ಜೂನ್ 27-2025ರಂದು ''ದಿ ಫ್ಯಾಮಿಲಿ ಮ್ಯಾನ್-3'' ಬರುತ್ತಿರುವ ಕುರಿತು ಘೋಷಣೆಯನ್ನು ಮಾಡಿತ್ತು. ಈಗ ಚಿತ್ರತಂಡ ಪ್ರಸಾರದ ದಿನಾಂಕವನ್ನು ಬಹಿರಂಗಗೊಳಿಸಿದೆ. ನವೆಂಬರ್ 21ರಂದು ''ಫ್ಯಾಮಿಲಿ ಮ್ಯಾನ್'' ನಿಮ್ಮ ಮನೆ ಮತ್ತು ಮನವನ್ನು ತಲುಪಲಿದ್ದಾನೆ ಎಂದು ಹೇಳಿದೆ.

mission-date-set-the-family-man-3-locks-premiere-srikant-tiwari-prepares-for-his-toughest-fight

ಇನ್ನೂ ಈ ಬಾರಿ ''ದಿ ಫ್ಯಾಮಿಲಿ ಮ್ಯಾನ್‌'' ಹಳೆಯ ದಂಡು ಮತ್ತೆ ಕಾಣಿಸಲಿದೆ. ಮನೋಜ್ ಬಾಜ್‌ಪೈ ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮುಂದುವರೆದರೆ, ಜೆಕೆ ತಲ್ಪಡೆ ಪಾತ್ರದಲ್ಲಿ ಶರೀಬ್‌ ಹಶ್ಮಿ ಇದ್ದಾರೆ. ಇನ್ನೂ ಶ್ರೀಕಾಂತ್ ತಿವಾರಿಯ ಪತ್ನಿ ಸುಚಿತ್ರಾ ತಿವಾರಿಯಾಗಿ ಪ್ರಿಯಾಮಣಿ, ಮಗಳು ಧ್ರತಿ ತಿವಾರಿಯಾಗಿ ಅಶ್ಲೇಶಾ ಠಾಕೂರ್‌ ಮತ್ತು ಮಗ ಅಥರ್ವ ತಿವಾರಿಯಾಗಿ ವೇದಾಂತ್‌ ಸಿನ್ಹಾ ಚಿತ್ರದಲ್ಲಿದ್ಧಾರೆ.

ಇವರ ಜೊತೆ ಹಿಂದಿನ ಎರಡು ಸರಣಿಯಲ್ಲಿದ್ದ ಶ್ರೇಯಾ ಧನ್ವಂತರಿ ಈ ಬಾರಿ ಕೂಡ ಜೋಯಾ ಪಾತ್ರದಲ್ಲಿದ್ದರೆ ಸಲೋನಿ ಪಾತ್ರದಲ್ಲಿ ಗುಲ್‌ ಪನಾಗ್‌ ಇದ್ದಾರೆ. ವಿಶೇಷ ಅಂದರೆ ಈ ಬಾರಿ ''ಪಾತಾಳ್ ಲೋಕ್'' ಖ್ಯಾತಿಯ ಜೈದೀಪ್‌ ಅಹ್ಲಾವತ್‌ ಈ ತಂಡವನ್ನು ಸೇರಿಕೊಂಡಿದ್ಧಾರೆ. ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ಧಾರೆ. ರಾಜ್‌ ಮತ್ತು ಡಿಕೆ ಜೋಡಿ ಜೊತೆ ಸುಮನ್‌ ಕುಮಾರ್‌ ಮತ್ತು ತುಷಾರ್‌ ಸೇಥ್‌ ಈ ಸೀಸನ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
The Family Man 3 premiere date is locked! Find out exactly when Srikant Tiwari returns to Prime Video to face his most dangerous threat. All details here.
Read more about: manoj bajpai bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X