OTT releases this week: ಈ ವಾರ 30ಕ್ಕೂ ಅಧಿಕ ಚಿತ್ರಗಳು ಓಟಿಟಿಯಲ್ಲಿ ರಿಲೀಸ್: ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಥಿಯೇಟರ್‌ಗಳು ಖಾಲಿಯಾಗಿವೆ. ಮುಂದಿನ ವಾರ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ರಿಲೀಸ್ ಆಗುತ್ತಿದೆ. ಅದು ಬಿಟ್ಟರೆ ಸದ್ಯಕ್ಕೆ ದೊಡ್ಡ ಸಿನಿಮಾಗಳು ಥಿಯೇಟರ್ ಕಡೆ ಬರ್ತಿಲ್ಲ. ಓಟಿಟಿಯಲ್ಲೂ ಕನ್ನಡ ಕಂಟೆಂಟ್ ಕಮ್ಮಿನೇ ಇದೆ.
ಅಂತು ಇಂತು ಇನ್ನೊಂದು ವಾರ ಕಳೆದಿದೆ. ಓಟಿಟಿ ವೀಕ್ಷಕರಿಗೆ ಮನರಂಜನೆ ಜಾತ್ರೆ ಶುರುವಾಗುತ್ತಿದೆ. ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಂ, ಜೀ5 ಸೇರಿದಂತೆ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಹೊಸ ಸಿನಿಮಾಗಳು, ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ. ಈ ವಾರ ಬರೋಬ್ಬರಿ 30ಕ್ಕೂ ಅಧಿಕ ಸಿನಿಮಾಗಳು ಓಟಿಟಿಗೆ ಬರ್ತಿವೆ. ಹಾಲಿವುಡ್ ಸಿನಿಮಾಗಳು ಈ ವಾರ ಸ್ಟ್ರೀಮಿಂಗ್ ಆಗಲಿವೆ.

ಅಮೇಜಾನ್ ಪ್ರೈಂ
1. ಮಿಷನ್: ಇಂಪಾಸಿಬಲ್ - ಡೆಡ್ ರೆಕನಿಂಗ್ ಭಾಗ-1
ಟಾಮ್ ಕ್ರೂಸ್ ನಟನೆಯ 'ಮಿಷನ್: ಇಂಪಾಸಿಬಲ್' ಸರಣಿಯ ಸ್ಪೈ ಥ್ರಿಲ್ಲರ್ ಸಿನಿಮಾ ಮಿಷನ್: ಇಂಪಾಸಿಬಲ್ - ಡೆಡ್ ರೆಕನಿಂಗ್ ಭಾಗ-1 ಈ ವಾರ ಅಮೇಜಾನ್ ಪ್ರೈಮ್‌ಗೆ ಬರ್ತಿದೆ. ಇಂದಿನಿಂದ (ಅಕ್ಟೋಬರ್ 10) ವೀಕ್ಷಕರು ಹಣ ಪಾವತಿಸಿ ಸಿನಿಮಾ ನೋಡುವ ಅವಕಾಶ ಸಿಗಲಿದೆ. ಜೂನ್‌ನಲ್ಲಿ ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಕ್ರಿಸ್ಟೋಫರ್ ಮೆಕ್ಯ್ವೆರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಟಾಮ್ ಕ್ರೂಸ್ ಮತ್ತೊಮ್ಮೆ ತಮ್ಮ ಅದ್ಭುತ ಸ್ಟಂಟ್ಸ್‌ನಿಂದ ರಂಜಿಸೋಕೆ ಬರ್ತಿದ್ದಾರೆ. ಅಂದಹಾಗೆ ಇದು 'ಮಿಷನ್: ಇಂಪಾಸಿಬಲ್ - ಫಾಲ್ಔಟ್' ಮುಂದುವರೆದ ಭಾಗ ಆಗಿದೆ.
2. ಅವೇರ್‌ನೆಸ್ (ಸ್ಪ್ಯಾನಿಷ್ ಸಿನಿಮಾ)- ಅಕ್ಟೋಬರ್ 11
3. ಇನ್ ಮೈ ಮದರ್ಸ್ ಸ್ಕಿನ್ (ಟ್ಯಾಗಲೋಗ್ ಸಿನಿಮಾ) - ಅಕ್ಟೋಬರ್ 12
4. ಎವರಿಬಡಿ ಲವ್ಸ್ ಡೈಮಂಡ್ಸ್ (ಇಟಾಲಿಯನ್ ವೆಬ್ ಸೀರಿಸ್) - ಅಕ್ಟೋಬರ್ 11
5. ದಿ ಬರಿಯಲ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 13
ನೆಟ್‌ಫ್ಲಿಕ್ಸ್
1. ಮಾರ್ಗಾಕ್ಸ್ (ಹಾಲಿವುಡ್ ಸಿನಿಮಾ) - ಅಕ್ಟೋಬರ್ 9
2. ದಿ ಲಾಸ್ಟ್ ಒನ್ ಸ್ಟ್ಯಾಂಡಿಂಗ್ ಸೀಸನ್ 2 (ಜಪಾನೀಸ್ ವೆಬ್ ಸೀರಿಸ್) - ಅಕ್ಟೋಬರ್ 10
3. ಒನ್ಸ್ ಅಪಾನ್ ಎ ಸ್ಟಾರ್ (ಥಾಯ್ ಸಿನಿಮಾ) - ಅಕ್ಟೋಬರ್ 11
4. ಡೈರೀಸ್ ಸೀಸನ್ 2 ಭಾಗ 1 (ಇಟಾಲಿಯನ್ ವೆಬ್ ಸೀರಿಸ್) - ಅಕ್ಟೋಬರ್ 10
5. ಬಿಗ್ ವೇಪ್: ದಿ ರೈಸ್ ಅಂಡ್ ಫಾಲ್ ಆಫ್ ಜುಲ್ (ಇಂಗ್ಲಿಷ್ ವೆಬ್ ಸೀರಿಸ್) - ಅಕ್ಟೋಬರ್ 11
6. ಒನ್ಸ್ ಅಪಾನ್ ಎ ಸ್ಟಾರ್ (ಥಾಯ್ ಸಿನಿಮಾ) - ಅಕ್ಟೋಬರ್ 11
7. ಪ್ಯಾಕ್ಟ್ ಆಫ್ ಸೈಲೆನ್ಸ್ (ಸ್ಪ್ಯಾನಿಷ್ ವೆಬ್ ಸೀರಿಸ್) - ಅಕ್ಟೋಬರ್ 11
8. ಗುಡ್ನೈಟ್ ವರ್ಲ್ಡ್ ಜಪಾನೀಸ್ (ವೆಬ್ ವೆಬ್ ಸೀರಿಸ್) - ಅಕ್ಟೋಬರ್ 12
9. ದಿ ಫಾಲ್ ಆಫ್ ದಿ ಹೌಸ್ ಆಫ್ ಆಶರ್ (ಇಂಗ್ಲಿಷ್ ವೆಬ್ ಸೀರೀಸ್) - ಅಕ್ಟೋಬರ್ 12
10. ಕಾಸರ್ ಗೋಲ್ಡ್ (ಮಲಯಾಳಂ ಸಿನಿಮಾ)- ಅಕ್ಟೋಬರ್ 13
11. ಕಾನ್ಫರೆನ್ಸ್ (ಸ್ವೀಡಿಷ್ ಸಿನಿಮಾ) - ಅಕ್ಟೋಬರ್ 13
12. ಕ್ಯಾಂಪ್ ಕರೇಜ್ (ಉಕ್ರೇನಿಯನ್ ಸಿನಿಮಾ) - ಅಕ್ಟೋಬರ್ 15
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
1. ಸುಲ್ತಾನ್ ಆಫ್ ದಿಲ್ಲಿ (ಹಿಂದಿ ವೆಬ್ ಸೀರಿಸ್) - ಅಕ್ಟೋಬರ್ 13
2. ಮತಗಮ್ ಭಾಗ- 2 (ವೆಬ್ ಸರಣಿ) - ಅಕ್ಟೋಬರ್ 12
3. ಗೂಸ್‌ಬಂಪ್ಸ್ (ಇಂಗ್ಲಿಷ್ ವೆಬ್ ಸೀರಿಸ್) - ಅಕ್ಟೋಬರ್ 13

ಜಿಯೋ ಸಿನಿಮಾ
1. ರಿಂಗ್ (ಹಿಂದಿ ಸಿನಿಮಾ) - ಅಕ್ಟೋಬರ್ 15
2. ಅರ್ಮಾಂಡ್ (ಹಿಂದಿ ಕಿರುಚಿತ್ರ)- ಅಕ್ಟೋಬರ್ 9
3. ಕಮ್ಮಿಂಗ್ ಔಟ್ ವಿತ್ ಹೆಲ್ಫ್ ಆಫ್ ಎ ಟೈಮ್ ಮೆಷಿನ್ (ಇಂಗ್ಲಿಷ್ ಕಿರುಚಿತ್ರ) - ಅಕ್ಟೋಬರ್ 11
4. ದಿ ಲಾಸ್ಟ್ ಎನ್ವಲಪ್ (ಹಿಂದಿ ಕಿರುಚಿತ್ರ) - ಅಕ್ಟೋಬರ್ 12
5. ಮುರಖ್ ದಿ ಈಡಿಯಟ್ (ಹಿಂದಿ ಕಿರುಚಿತ್ರ)- ಅಕ್ಟೋಬರ್ 13
ಬುಕ್ ಮೈ ಶೋ
1. ಟಾಕ್ ಟು ಮಿ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 15
2. ಕ್ವೀನ್ ಮೇರಿ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 15
ಇನ್ನುಳಿದಂತೆ ಅಹಾದಲ್ಲಿ 'ಮಟ್ಟಿಕಥಾ', ಜೀ5ನಲ್ಲಿ 'ಪ್ರೇಮ ವಿಮಾನಂ', ಡಿಸ್ಕವರಿ ಪ್ಲಸ್‌ನಲ್ಲಿ 'ಸ್ಟಾರ್ ವರ್ಸಸ್ ಫುಡ್ ಸರ್ವೈವಲ್' ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











