OTT Releases This week; ಆಗಸ್ಟ್ ಮೊದಲ ವಾರ 20ಕ್ಕೂ ಅಧಿಕ ಸಿನಿಮಾ, ಸೀರಿಸ್ ಸ್ಟ್ರೀಮಿಂಗ್
ಕನ್ನಡದಲ್ಲಿ ದೊಡ್ಡ ಸಿನಿಮಾಗಳ ಬಿಡುಗಡೆಗೆ ದಿನಗಣನೆ ಶುರುವಾಗಿದೆ. 'ಭೀಮ' ಸಿನಿಮಾ ಮೂಲಕ ಚಿತ್ರರಂಗ ಎದ್ದು ನಿಲ್ಲುವ ಪ್ರಯತ್ನದಲ್ಲಿದೆ. ಮತ್ತೊಂದು ಕಡೆ ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ.
ಕಳೆದ ವಾರ ಅನಿರುದ್ಧ್ ಜತ್ಕರ್ ನಟನೆಯ ಬ್ಲ್ಯಾಕ್ ಕಾಮೆಡಿ ಥ್ರಿಲ್ಲರ್ 'ಶೆಫ್ ಚಿದಂಬರ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿತ್ತು. ಓಟಿಟಿಯಲ್ಲಿ ಕನ್ನಡ ಕಂಟೆಂಡ್ ಕಮ್ಮಿ ಎನ್ನುವ ಅಪವಾದ ಮೊದಲಿನಿಂದಲೂ ಇದೆ. ವರ್ಷಕ್ಕೆ 200ಕ್ಕೂ ಅಧಿಕ ಸಿನಿಮಾಗಳು ತೆರೆಕಂಡರೂ ಎಲ್ಲವನ್ನು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೊಂಡುಕೊಳ್ಳುತ್ತಿಲ್ಲ.

ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಾಣವೇ ನಡೆಯುತ್ತಿಲ್ಲ. ಈ ವಿಚಾರದಲ್ಲಿ ಚಿತ್ರರಂಗ ಹಿಂದೆ ಉಳಿದಿದೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುತ್ತಿರುತ್ತವೆ. ಇನ್ನು ಈ ವಾರ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ. ಮುಂದೆ ಓದಿ.
ನೆಟ್‌ಫ್ಲಿಕ್ಸ್
1. ಮಾಡರ್ನ್ ಮಾಸ್ಟರ್ಸ್
ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ ಕುರಿತ ಡಾಕ್ಯುಮೆಂಟರಿ ಈ ವಾರ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ಈ ಹಿಂದೆ ಹಲವು ಸಾಧಕರ ಬಗ್ಗೆ ಈ ಸರಣಿಯಲ್ಲಿ ಹೇಳಲಾಗಿದೆ. ಇದೀಗ ನಿರ್ದೇಶಕ ರಾಜಮೌಳಿ ಹಿಟ್ ಸಿನಿಮಾಗಳು, ಅವರ ಪರಿಶ್ರಮ ಎಲ್ಲದರ ಬಗ್ಗೆ ಈ ಡಾಕ್ಯುಮೆಂಟರಿಯಲ್ಲಿ ಚರ್ಚಿಸಲಾಗುತ್ತಿದೆ. ಪ್ರಭಾಸ್, ರಾಮ್‌ಚರಣ್, ತಾರಕ್ ಸೇರಿದಂತೆ ಹಲವರು ಜಕ್ಕಣ್ಣ ಜೊತೆಗಿನ ಒಡನಾಟ, ಆತನ ಪರಿಶ್ರಮದ ಬಗ್ಗೆ ಇದರಲ್ಲಿ ಮಾತನಾಡಿದ್ದಾರೆ. ಆಗಸ್ಟ್ 2ಕ್ಕೆ 'ಮಾಡರ್ನ್ ಮಾಸ್ಟರ್ಸ್' ಡಾಕ್ಯುಮೆಂಟರಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

2. ಬಾರ್ಡರ್ ಲೆಸ್ ಫಾಗ್ (ಇಂಡೋನೇಷ್ಯಾ ಸಿನಿಮಾ) - ಆಗಸ್ಟ್ 1
3. ಎ ಗುಡ್ ಗರ್ಲ್ಸ್ ಗೈಡ್ ಟು ಮರ್ಡರ್ (ಇಂಗ್ಲಿಷ್ ಸೀರೀಸ್) - ಆಗಸ್ಟ್ 1
4. ಅನ್‌ಸ್ಟಾಪಬಲ್ ಸೀಸನ್ 2 (ಇಂಗ್ಲಿಷ್ ವೆಬ್ ಸರಣಿ) - ಆಗಸ್ಟ್ 1
5. ಮ್ಯಾನ್ ಲಾಫರ್ಟ್ ಟೆಮೊ (ಸ್ಪ್ಯಾನಿಷ್ ಸಿನಿಮಾ) - ಆಗಸ್ಟ್ 1
6. ಲವ್ ಈಸ್ ಬ್ಲೈಂಡ್ ಮೆಕ್ಸಿಕೋ (ಸ್ಪ್ಯಾನಿಷ್ ಸೀರಿಸ್) - ಆಗಸ್ಟ್ 1
7. ಸೇವಿಂಗ್ ಬಿಕಿನಿ ಬಾಟಮ್ (ಇಂಗ್ಲಿಷ್ ಸಿನಿಮಾ) - ಆಗಸ್ಟ್ 2
8. ಜೋ ರೋಗನ್ (ಇಂಗ್ಲಿಷ್ ಕಾಮಿಡಿ ಶೋ) - ಆಗಸ್ಟ್ 3
ಜಿಯೋ ಸಿನಿಮಾ
1. ಡ್ಯೂನ್ ಪಾರ್ಟ್- 2 (ಹಾಲಿವುಡ್ ಸಿನಿಮಾ)- ಆಗಸ್ಟ್ 1
2. ಟ್ಯಾರೋ (ಇಂಗ್ಲಿಷ್ ಸಿನಿಮಾ) - ಆಗಸ್ಟ್ 3
3. ದಸ್ ಜೂನ್ ಕಿ ರಾತ್ (ಹಿಂದಿ ಸೀರಿಸ್) - ಆಗಸ್ಟ್ 4
ಅಮೇಜಾನ್ ಪ್ರೈಂ
1. ಬ್ಯಾಟ್‌ಮ್ಯಾನ್: ಕೇಸ್ಡ್ ಕ್ರುಸೇಡರ್ (ಇಂಗ್ಲಿಷ್ ಸೀರಿಸ್) - ಆಗಸ್ಟ್ 1
2. ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಸೀಸನ್ 2 (ಇಂಗ್ಲಿಷ್ ಸೀರಿಸ್) - ಜುಲೈ 29
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
1. ನೋ ವೇ ಔಟ್ (ಕೊರಿಯನ್ ಸೀರಿಸ್) - ಜುಲೈ 31
2. ಫ್ಯೂಚುರಾಮ ಸೀಸನ್ 12 (ಇಂಗ್ಲಿಷ್ ಸೀರಿಸ್) - ಜುಲೈ 29
3. ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ (ಹಾಲಿವುಡ್ ಸಿನಿಮಾ)- ಆಗಸ್ಟ್ 2
ಅಹಾ ಓಟಿಟಿ
1. ರೈಲ್(ತಮಿಳು ಸಿನಿಮಾ)- ಆಗಸ್ಟ್ 2
2. ರಕ್ಷಣ(ತೆಲುಗು ಸಿನಿಮಾ) ಜುಲೈ 30
3. ತೆಪ್ಪ ಸಮುದ್ರಂ(ತೆಲುಗು ಸಿನಿಮಾ) ಆಗಸ್ಟ್ 3
ಸೋನಿ ಲಿವ್
1. ಬೃಂದಾ
ತ್ರಿಶಾ ನಟನೆಯ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರಿಸ್ 'ಬೃಂದಾ' ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಆಗಸ್ಟ್ 2ರಿಂದ ಸೋನಿ ಲಿವ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಸೀರಿಸ್ ವೀಕ್ಷಣೆಗೆ ಸಿಗಲಿದೆ. ಸೂರ್ಯ ಮನೋಜ್ ವಂಗಲ ಈ ಸೀರಿಸ್ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ತ್ರಿಶಾ ಮಿಂಚಿದ್ದಾರೆ. ಕನ್ನಡಕ್ಕೂ ಈ ಸೀರಿಸ್ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











