ತಿಂಗಳಿಗೂ ಮುನ್ನ ಓಟಿಟಿಗೆ ಮೋಹನ್ ಲಾಲ್ ಹೊಸ ಸಿನಿಮಾ; ಕನ್ನಡದಲ್ಲೇ ನೋಡಿ

ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ ಲಭಿಸಿದೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ತಮ್ಮ ಸಹಜ ನಟನೆಯಿಂದ ಮೋಡಿ ಮಾಡಿದ್ದಾರೆ. ವಯಸ್ಸು 65 ದಾಟಿದ್ರು ಯುವ ನಟರನ್ನು ನಾಚಿಸುವಂತೆ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮೋಹನ್ ಲಾಲ್ ನಟನೆಯ 'ವೃಷಭ' ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆದಿತ್ತು. ಮುಂದಿನ ತಿಂಗಳು ಆ ಸಿನಿಮಾ ಸಿನಿಮಾ ತೆರೆಗೆ ಬರಲಿದೆ. ಇನ್ನು ಅವರು ನಟಿಸಿರುವ 'ಹೃದಯಪೂರ್ವಂ' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದರ ಬೆನ್ನಲ್ಲೇ ಸಿನಿಮಾ ಓಟಿಟಿಗೆ ಬರಲು ಸಜ್ಜಾಗಿದೆ. ಆಗಸ್ಟ್ 28ಕ್ಕೆ ಈ ರೊಮ್ಯಾಂಟಿಕ್ ಕಾಮೆಡಿ ಸಿನಿಮಾ ಬಿಡುಗಡೆ ಆಗಿತ್ತು.

Mohanlal and Malavika Mohanan s Hridayapoorvam movie ott Release date locked

ಇದೇ ವರ್ಷ ಎಂಪುರಾನ್ ಹಾಗೂ ಥುಡರುಂ ರೀತಿಯ ಎರಡು ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಮೋಹನ್ ಲಾಲ್ ಕೊಟ್ಟಿದ್ದಾರೆ. 'ಕಣ್ಣಪ್ಪ' ಚಿತ್ರದ ಅತಿಥಿ ಪಾತ್ರದಲ್ಲಿ ಕೂಡ ನಟಿಸಿದ್ದರು. ಇದೀಗ 'ಹೃದಯಪೂರ್ವಂ' ರೀತಿಯ ಫೀಲ್ ಗುಡ್ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಸತ್ಯನ್ ಅಂತಿಕಾಡ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'ಹೃದಯಪೂರ್ವಂ' ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಮಾಳವಿಕಾ ಮೋಹನನ್, ಸಂಗೀತ್ ಪ್ರತಾಪ್, ಸಂಗೀತ ಮಾಧವನ್ ನಾಯರ್ ಸೇರಿ ಹಲವರು ನಟಿಸಿದ್ದಾರೆ. 30 ಕೋಟಿ ರೂ. ಬಜೆಟ್ ಸಿನಿಮಾ 80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. 5 ಭಾಷೆಗಳಲ್ಲಿ ಸಿನಿಮಾ ಸೆಪ್ಟೆಂಬರ್ 26ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

ಕ್ಲೌಡ್ ಕಿಚನ್ ನಡೆಸುತ್ತಿರುವ ಸಂದೀಪ್ ಬಾಲಕೃಷ್ಣನ್ (ಮೋಹನ್ ಲಾಲ್) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುತ್ತಾನೆ. ಸೈನ್ಯಾಧಿಕಾರಿಯ ಹೃದಯ ಕಸಿ ಮಾಡಿದ ಬಳಿಕ ಆತ ಬದುಕುಳಿಯುತ್ತಾನೆ. ಕೆಲ ದಿನಗಳ ಬಳಿಕ ತನಗೆ ಹೃದಯ ದಾನ ಮಾಡಿದ ವ್ಯಕ್ತಿಯ(ಕರ್ನಲ್ ರವಿ) ಮಗಳು ಹರಿತಾ(ಮಾಳವಿಕಾ ಮೋಹನನ್) ನಿಶ್ಚಿತಾರ್ಥಕ್ಕಾಗಿ ಆತ ಪುಣೆಗೆ ಪ್ರಯಾಣ ಬೆಳೆಸುತ್ತಾನೆ. ಆದರೆ ಆ ನಿಶ್ಚಿತಾರ್ಥ ಮುರಿದು ಬೀಳುತ್ತೆ. ಆದರೂ ಸಂದೀಪ್ ಕೆಲ ದಿನ ಅಲ್ಲೇ ಉಳಿಯಬೇಕಾಗುತ್ತದೆ. ಅಷ್ಟರಲ್ಲೇ ತಮ್ಮ ತಂದೆ ಹೃದಯ ಹೊಂದಿರುವ ಸಂದೀಪ್‌ನನ್ನು ನೋಡಿ ಹರಿತಾ ಹಾಗೂ ಅವರ ತಾಯಿ ದೇವಿಕಾ(ಸಂಗೀತಾ ಮಾಧವನ್ ನಾಯರ್) ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಾರೆ. ಮುಂದೆಲ್ಲಾ ಏನೆಲ್ಲಾ ಆಗತ್ತೆ? ಸಂದೀಪ್ ಅಲ್ಲೇ ಉಳಿಯವಂತೆ ಆಗುವುದು ಯಾಕೆ? ಎನ್ನುವುದು 'ಹೃದಯಪೂರ್ವಂ' ಚಿತ್ರದ ಕಥೆ.

More from Filmibeat

English summary
Mohanlal's romantic comedy film Hridayapoorvam release date confirmed
Read more about: mohanlal malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X