Thudarum OTT; ಓಟಿಟಿಗೆ ಮೋಹನ್ ಲಾಲ್ 'ಥುಡರುಮ್'; ಕನ್ನಡದಲ್ಲೇ ನೋಡಿ

ಈ ವಾರ ಓಟಿಟಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಕಾದಿದೆ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ 4 ಹಿಟ್ ಸಿನಿಮಾಗಳು ಈ ವೀಕೆಂಡ್ ಸ್ಟ್ರೀಮಿಂಗ್ ಆಗುತ್ತಿದೆ. ತೆಲುಗಿನ 'ಹಿಟ್- 3', ತಮಿಳಿನ 'ರೆಟ್ರೋ' ಹಾಗೂ ಕನ್ನಡದ 'ಅಜ್ಞಾತವಾಸಿ' ಚಿತ್ರಗಳ ಜೊತೆಗೆ ಮಲಯಾಳಂನ 'ಥುಡರುಮ್' ಸಿನಿಮಾ ಓಟಿಟಿಗೆ ಬರ್ತಿದೆ.

ಏಪ್ರಿಲ್ 25ಕ್ಕೆ ತೆರೆಕಂಡಿದ್ದ ಕ್ರೈಂ ಥ್ರಿಲ್ಲರ್ ಸಿನಿಮಾ ವಿಶ್ವದಾದ್ಯಂತ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಎರಡು ತಿಂಗಳ ಹಿಂದೆ ಮೋಹನ್ ಲಾಲ್ ನಟನೆಯ 'ಎಂಪುರಾನ್' ಸಿನಿಮಾ 250 ಕೋಟಿ ರೂ. ಗಳಿಕೆ ಕಂಡು ದಾಖಲೆ ಬರೆದಿತ್ತು. ಅದರ ಬೆನ್ನಲ್ಲೇ ಚಿತ್ರಮಂದಿರಗಳಲ್ಲಿ 'ಥುಡರುಮ್' ಹವಾ ಶುರುವಾಗಿದೆ.

Mohanlal Starrer Thudarum film ott Release date locked

ತರುಣ್ ಮೂರ್ತಿ ನಿರ್ದೇಶನದ ಚಿತ್ರದಲ್ಲಿ ಶೋಭನಾ ನಾಯಕಿಯಾಗಿ ನಟಿಸಿದ್ದಾರೆ. ಸಣ್ಣ ಕತೆಯನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿದೆ. ಪ್ರಕಾಶ್ ವರ್ಮಾ, ಬಿನು ಪಪ್ಪು, ಫರ್ಹಾನ್ ಫಾಸಿಲ್, ಇರ್ಷದ್, ಸಂಗೀತ್ ಪ್ರತಾಪ್, ಕೃಷ್ಣಪ್ರಭ, ಶ್ರೀಜಿತ್ ರವಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಜಿಯೋ ಹಾಟ್‌ಸ್ಟರ್ 20 ಕೋಟಿ ರೂ.ಗೆ 'ಥುಡರುಮ್' ಓಟಿಟಿ ರೈಟ್ಸ್ ಕೊಂಡಿರುವ ಊಹಾಪೋಹ ಇದೆ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸುತ್ತಾ ಬರ್ತಿದ್ದಾರೆ. ಈ ವರ್ಷದ ಮೊದಲ 5 ತಿಂಗಳಲ್ಲಿ 2 ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಮತ್ತೆರಡು ಚಿತ್ರಗಳು ಶೀಘ್ರದಲ್ಲೇ ತೆರೆಗೆ ಬರಲಿದೆ.

ಮಲಯಾಳಂ ಜೊತೆಗೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗೆ 'ಥುಡರುಮ್' ಚಿತ್ರ ಡಬ್ ಆಗಿ ಓಟಿಟಿಗೆ ಬರ್ತಿದೆ. ಈಗಾಗಲೇ 25 ದಿನ ಪೂರೈಸಿ ಮುನ್ನುಗುತ್ತಿರುವ ಸಿನಿಮಾ ಮೇ 30ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ತೆರೆಗೆ ತಂದಿರುಬ ಚಿತ್ರತಂಡದ ಶ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಂದ್ಕಾಲದಲ್ಲಿ ಸಿನಿಮಾಗಳಲ್ಲಿ ಡ್ಯೂಪ್ ಆಗಿ ಕೆಲಸ ಮಾಡುತ್ತಿದ್ದ ಷಣ್ಮುಖ ಅಲಿಯಾಸ್ ಬೆನ್ಜ್(ಮೋಹನ್ ಲಾಲ್) ಚಿತ್ರರಂಗದಿಂದ ದೂರಾಗುತ್ತಾರೆ. ತನ್ನ ಮಡದಿ, ಮಕ್ಕಳ ಜೊತೆಗೆ ಕೇರಳದಲ್ಲಿ ನೆಲೆಸುತ್ತಾನೆ. ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಆದರೆ ಒಮ್ಮೆ ಇದ್ದಕ್ಕಿದಂತೆ ಆತನ ಅಂಬಾಸಿಡರ್ ಕಾರನ್ನು ಗಾಂಜಾ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆಯುತ್ತಾರೆ. ತನ್ನ ಕಾರನ್ನು ವಾಪಸ್ ಪಡೆಯಲು ಬೆನ್ಜ್ ನಡೆಸುವ ಹೋರಾಟ ಎಂಥದ್ದು? ಎನ್ನುವುದು ಇನ್ನುಳಿದ ಕಥೆ.

ಮೇಲ್ನೋಟಕ್ಕೆ ಬಹಳ ಸಿಂಪಲ್ ಎನಿಸುವ ಈ ಕಥೆಯ ಎಳೆಗೆ ತರುಣ್ ಮೂರ್ತಿ ಟ್ರೀಟ್‌ಮೆಂಟ್ ಸೊಗಸಾಗಿದೆ. ಇನ್ನು ಮೋಹನ್ ಲಾಲ್ ಅಮೋಘ ಅಭಿನಯದಿಂದ 'ಥುಡರುಮ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸದ್ಯ ಕನ್ನಡ ನಿರ್ದೇಶಕ ನಂದ ಕಿಶೋರ್ ನಿರ್ದೇಶನದ 'ವೃಷಭ' ಚಿತ್ರದಲ್ಲಿ ಮೋಹನ್ ಲಾಲ್ ಬಣ್ಣ ಹಚ್ಚಿದ್ದಾರೆ.

ಕಣ್ಣಪ್ಪ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದ್ಧಾರೆ. ಶೀಘ್ರದಲ್ಲೇ 'ಹೃದಯಪೂರ್ವಂ' ಎಂಬ ಸಿನಿಮಾ ಬಿಡುಗಡೆ ಆಗಲಿದೆ. 'ರಾಮ್' ಎಂಬ ಮತ್ತೊಂದು ಸಿನಿಮಾದಲ್ಲಿ ಕೂಡ ನಂದ ನಟಿಸುತ್ತಿದ್ದಾರೆ.

More from Filmibeat

English summary
Malayalam recent blockbuster Thudarum ready to OTT streaming date fixe
Read more about: mohanlal malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X