Empuraan OTT: ಐಪಿಎಲ್ ಎಫೆಕ್ಟ್; ತಿಂಗಳಿಗೂ ಮುನ್ನ ಓಟಿಟಿಗೆ ಬಂದ 'ಎಂಪುರಾನ್'

ಬ್ಲಾಕ್‌ಬಸ್ಟರ್ 'ಎಂಪುರಾನ್' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆಯಾಗಿದೆ. ತಿಂಗಳಿಗೂ ಮುನ್ನ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 27ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 250 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು.

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ 'ಎಂಪುರಾನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಸೂಪರ್ ಹಿಟ್ 'ಲೂಸಿಫರ್' ಸಿನಿಮಾ ಸೀಕ್ವೆಲ್ ಆಗಿದ್ದರಿಂದ ಬಹಳ ಹೈಪ್ ಕ್ರಿಯೇಟ್ ಆಗಿದ್ದು ಸುಳ್ಳಲ್ಲ. ಆದರೆ ಐಪಿಎಲ್ ಆರ್ಭಟದ ನಡುವೆ ಸಿನಿಮಾ ತೆರೆಗೆ ಬಂದಿದ್ದು ಕೊಂಚ ಹಿನ್ನಡೆಗೆ ಕಾರಣವಾಗಿತ್ತು.

Mohanlal s L2 Empuraan OTT release date announced Here is when and where to watch

ಮೋಹನ್ ಲಾಲ್ ನಟನೆಯ ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗಿತ್ತು. ಮೊದಲ 5 ದಿನಕ್ಕೆ ಕರ್ನಾಟಕದಲ್ಲಿ ಸಿನಿಮಾ 10 ಕೋಟಿ ರೂ. ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಸಿನಿಮಾ ಬಿಡುಗಡೆ ಬೆನ್ನಲ್ಲೇ ಕೊಂಚ ವಿವಾದ ಸೃಷ್ಟಿಯಾಗಿತ್ತು. ಕೆಲ ದೃಶ್ಯಗಳಿಗೆ ಬಳಿಕ ಕತ್ತರಿ ಹಾಕಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಅದನ್ನೆಲ್ಲಾ ಮೀರಿ 'ಎಂಪುರಾನ್' ಸಿನಿಮಾ ಸದ್ದು ಮಾಡಿತ್ತು.

'ಲೂಸಿಫರ್' ಕಥೆ ಎಲ್ಲಿಗೆ ಮುಕ್ತಾಯವಾಗಿತ್ತೋ ಅಲ್ಲಿಂದಲೇ ಸೀಕ್ವೆಲ್ ಕಥೆ ಶುರುವಾಗುತ್ತದೆ. ಕೇರಳದ ಮುಖ್ಯಮಂತ್ರಿ ಜತಿನ್ ರಾಮದಾಸ್ (ಟೋವಿನೋ ಥಾಮಸ್) ಆಡಳಿತ ಪಕ್ಷ ಬಿಟ್ಟು ಹೊಸ ಪಕ್ಷ ಸ್ಥಾಪಿಸಲು ಮುಂದಾಗುತ್ತಾನೆ. ಬಾಬಾ ಬಜರಂಗ್ ಅಲಿಯಾಸ್ ಬಾಲರಾಜ್ (ಅಭಿಮನ್ಯು ಸಿಂಗ್) ಜೊತೆ ಕೈ ಜೋಡಿಸುತ್ತಾನೆ. ಅಣ್ಣ ನಿರ್ಧಾರವನ್ನು ಸಹೋದರಿ ಪ್ರಿಯದರ್ಶಿನಿ ರಾಮದಾಸ್ (ಮಂಜು ವಾರಿಯರ್) ಒಪ್ಪುವುದಿಲ್ಲ. ಮತ್ತೆ ಕೇರಳ ರಾಜಕೀಯರಂದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದಾಗ ಖುರೇಷಿ ಅಬ್ರಾಮ್ ಅಲಿಯಾಸ್ ಸ್ಟೀಫನ್ ನೆಡುಂಪಲ್ಲಿ (ಮೋಹನ್ ಲಾಲ್) ಅಖಾಡಕ್ಕೆ ಇಳಿಯುತ್ತಾನೆ. ಮುಂದೇನು? ಎನ್ನುವ ಕಥೆ ಚಿತ್ರದಲ್ಲಿದೆ.

ಮೊದಲ ಭಾಗಕ್ಕಿಂತ ಡ್ರಾಮಾ ಕಮ್ಮಿ ಆಗಿ ಆಕ್ಷನ್ ಸೀಕ್ವೆಲ್‌ನಲ್ಲಿ ಹೈಲೆಟ್ ಎನಿಸಿಕೊಂಡಿದೆ. ಎಲಿವೇಷನ್ಸ್ ಸೀನ್ಸ್ ಮಾಸ್ ಪ್ರೇಕ್ಷಕರಿಗೆ ಕಿಕ್ ಕೊಡ್ತಿದೆ. ಆದರೆ 'ಲೂಸಿಫರ್' ಚಿತ್ರದಲ್ಲಿದ್ದ ಪೊಲಿಟಿಕಲ್ ಡ್ರಾಮಾ ನೋಡಲು ಮಿಸ್ ಆಗಿತ್ತು. ಆದರೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇನ್ನೊಂದು ವಾರದಲ್ಲಿ ನೀವು ಮನೆಯಲ್ಲೇ ಸಿನಿಮಾ ನೋಡಬಹುದು.

ಆಶೀರ್ವಾದ್ ಸಿನಿಮಾಸ್, ಲೈಕಾ ಪ್ರೊಡಕ್ಷನ್ಸ್ ಹಾಗೂ ಶ್ರೀ ಗೋಕುಲಂ ಮೂವೀಸ್ ಸಂಸ್ಥೆಗಳು ಒಟ್ಟಿಗೆ ಸೇರಿ 'ಎಂಪುರಾನ್' ಸಿನಿಮಾ ನಿರ್ಮಾಣ ಮಾಡಿವೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ. ಸುಜಿತ್ ವಾಸುದೇವ್ ಛಾಯಾಗ್ರಹಣ ಹಾಗೂ ದೀಪಕ್ ದೇವ್ ಸಂಗೀತ ಚಿತ್ರಕ್ಕಿದೆ.

ಜಿಯೋ ಹಾಟ್‌ಸ್ಟರ್‌ನಲ್ಲಿ ಏಪ್ರಿಲ್ 24ರಿಂದ 'ಎಂಪುರಾನ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂ ಜೊತೆಗೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಕೂಡ ಓಟಿಟಿ ವೀಕ್ಷಕರು ಸಿನಿಮಾ ನೋಡಬಹುದು. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿದೆ. ಮೋಹನ್ ಲಾಲ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 27ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಏಪ್ರಿಲ್ 24 ಅಂದರೆ 28 ದಿನಕ್ಕೆ ಓಟಿಟಿಗೆ ಬರುವಂತಾಗಿದೆ. ಎಲ್ಲಾ ಐಪಿಎಲ್ ಎಫೆಕ್ಟ್ ಎನ್ನಲಾಗ್ತಿದೆ. ಜನ ಈಗ ಐಪಿಎಲ್ ಗುಂಗಿನಿಂದ ಹೊರ ಬರುತ್ತಿಲ್ಲ. ಪ್ರತಿದಿನ ಸಂಜೆ ಐಪಿಎಲ್ ಪಂದ್ಯ ನೋಡಲು ಟಿವಿ ಮುಂದೆ ಕೂರುತ್ತಿದ್ದಾರೆ. ಇನ್ನು ಕಾದು ಪ್ರಯೋಜನವಿಲ್ಲ ಎಂದು ಓಟಿಟಿಯಲ್ಲಿ ಬೇಗ ರಿಲೀಸ್ ಮಾಡಲಾಗುತ್ತಿದೆ.

ಈಗಾಗಲೇ 'ಎಂಪುರಾನ್' ಚಿತ್ರದ ಪೈರಸಿ ಕಾಪಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ತಡ ಮಾಡಿದರೆ ಓಟಿಟಿ ಸಂಸ್ಥೆಗೂ ನಷ್ಟವಾಗುತ್ತದೆ ಎಂದು ಬೇಗನೆ ಸ್ಟ್ರೀಮಿಂಗ್ ಮಾಡಲು ತಯಾರಿ ನಡೀತಿದೆ.

More from Filmibeat

English summary
Mohanlal's L2: Empuraan gets an OTT release; official date announced;
Read more about: mohanlal malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X