twitter
    For Quick Alerts
    ALLOW NOTIFICATIONS  
    For Daily Alerts

    ಲೈಂಗಿಕತೆ ಪ್ರಚಾರ ಮಾಡುವ 'ಉಲ್ಲು' ವಿರುದ್ಧ ಲೈಂಗಿಕ ದೌರ್ಜನ್ಯದ ದೂರು

    By ಫಿಲ್ಮಿಬೀಟ್ ಡೆಸ್ಕ್
    |

    ಅಶ್ಲೀಲ ದೃಶ್ಯಗಳು ತುಂಬಿದ ವೆಬ್ ಸರಣಿ, ಕಿರು ಚಿತ್ರಗಳನ್ನು ಪ್ರದರ್ಶಿಸುವ 'ಉಲ್ಲು' ಆನ್‌ಡಿಮ್ಯಾಂಡ್ ವೆಬ್‌ಸೈಟ್‌ನ ಸಿಇಒ ವಿರುದ್ಧ ಅದೇ ಸಂಸ್ಥೆಯ ಮಾಜಿ ಕಾನೂನು ಸಲಹೆಗಾರ್ತಿ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ.

    ಆದರೆ ಇದೀಗ 'ಉಲ್ಲು' ಸಿಇಒ ಹಾಗೂ ಇತರ ಕೆಲವು ಸಿಬ್ಬಂದಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿರುವ ಮಹಿಳೆಯ ವಿರುದ್ಧ ಕೆಲವು ತಿಂಗಳ ಮುಂಚೆ ಉಲ್ಲು ಸಂಸ್ಥೆಯು ವಂಚನೆ, ಬೆದರಿಕೆ, ಹಣ ಕೀಳಲು ಯತ್ನ ಪ್ರಕರಣವನ್ನು ದಾಖಲಿಸಿತ್ತು.

    ಆಗಿರುವುದಿಷ್ಟು, ಜೂನ್ ತಿಂಗಳಲ್ಲಿ 'ಉಲ್ಲು' ಆಪ್‌ನವರು ಕೆಲವು ಅನಾಮಿಕ ವ್ಯಕ್ತಿಗಳು ಸಂಸ್ಥೆಗೆ ಬೆದರಿಕೆ ಹಾಕಿದ್ದು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಬೆದರಿಕೆ ಹಿಂದೆ 'ಉಲ್ಲು'ಗೆ ಕಾನೂನು ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದ ಮಾಜಿ ಉದ್ಯೋಗಿಯ ಕೈವಾಡ ಇರುವುದು ಪತ್ತೆಯಾಗಿತ್ತು. 'ಉಲ್ಲು' ನೀಡಿದ್ದ ದೂರು ಎಫ್‌ಐಆರ್ ಆಗಿ ಬದಲಾವಣೆ ಆಗಿ ಪೊಲೀಸರು ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದರು.

    Molestation Complaint Against Ullu App CEO From Former Employee

    ಅದೇ ವೇಳೆಗೆ ಆ ಮಹಿಳೆ 'ಉಲ್ಲು' ಸಿಇಒ ಅನ್ನು ಸಂಪರ್ಕಿಸಿ ತಾನು ಬೇಷರತ್ ಕ್ಷಮೆ ಯಾಚಿಸುವುದಾಗಿಯೂ, ತನ್ನ ಮೇಲೆ ನೀಡಲಾಗಿರುವ ದೂರನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ ನಮ್ಮ ಈ ಅಪರಾಧ ಕಾರ್ಯದಿಂದ ಸಂಸ್ಥೆಗೆ ಆಗಿರುವ ನಷ್ಟವನ್ನು ತುಂಬಿಕೊಡುವುದಾಗಿಯೂ ಹೇಳಿದ್ದರು.

    ಇದರಿಂದಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಹಾಗೂ ಲಖನೌ ಪೊಲೀಸರಿಗೆ ಮನವಿ ಮಾಡಿದ್ದ ಉಲ್ಲು ಸಿಇಒ ತಾವು ನೀಡಿರುವ ದೂರನ್ನು ಹಿಂಪಡೆಯುವುದಾಗಿ, ಆ ಮಹಿಳೆಯನ್ನು ಬಂಧಿಸಬಾರದೆಂದು ಪೊಲೀಸರ ಬಳಿ ಮನವಿ ಮಾಡಿದ್ದರು. ಆದರೆ ಕ್ರಿಮಿನಲ್ ಪ್ರಕರಣವಾದ್ದರಿಂದ ಪ್ರಕರಣ ಹಿಂಪಡೆಯಲು ಸಾಧ್ಯವಿರಲಿಲ್ಲ. ಕೊನೆಗೆ ಆ ಮಹಿಳೆಯು ತನ್ನ ವಿರದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಪಡಿಸುವಂತೆ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

    ಆದರೆ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತು. ಆ ನಂತರ ಆ ಮಹಿಳೆ ಜುಲೈ 5ನೇ ತಾರೀಖು ಮುಂಬೈ ಪೊಲೀಸರ ಬಳಿ 'ಉಲ್ಲು' ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥ ಅಂಜಲಿ ರೈನಾ ಮತ್ತು ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ವಿಭು ಅಗರ್ವಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಆಕೆ ಪ್ರಕರಣ ದಾಖಲಿಸಿದ ದಿನವೇ ಆಕೆಯನ್ನು ವಿಚಾರಣೆ ಸೈಬಲ್ ಸೆಲ್‌ ಪೊಲೀಸರು ಕರೆದಿದ್ದರು. ಇದೀಗ 'ಉಲ್ಲು' ಸಂಸ್ಥೆ ಕಡೆಯಿಂದ ಅಧಿಕೃತ ಹೇಳಿಕೆ ಬಿಡುಗಡೆ ಆಗಿದ್ದು, ಆ ಮಹಿಳೆಯು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆಂದು, ಈ ಪ್ರಕರಣವನ್ನು ತಾವು ಕಾನೂನಾತ್ಮಕವಾಗಿ ಎದುರಿಸುತ್ತೀವೆಂದು ಹೇಳಿದ್ದಾರೆ.

    'ಉಲ್ಲು' ಆನ್‌ಡಿಮಾಂಡ್ ವೆಬ್‌ಸೈಟ್ ಆಗಿದ್ದು ಇದರ ಆಪ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಲಭ್ಯವಿದೆ. ಈ ಆಪ್‌ನಲ್ಲಿ ಬಹುತೇಕ ವಯಸ್ಕರ ಕಂಟೆಂಟ್ ಅನ್ನೇ ಹೆಚ್ಚು ತುಂಬಲಾಗಿದೆ. ಅಶ್ಲೀಲ ಸಿನಿಮಾಗಳು, ವೆಬ್ ಸರಣಿಗಳು, ಕಿರು ಚಿತ್ರಗಳನ್ನು ಈ ಆಪ್ ಪ್ರದರ್ಶಿಸುತ್ತದೆ. ಅದರಲ್ಲಿಯೂ ಕೊರೊನಾ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಅಶ್ಲೀಲ ಕಂಟೆಂಟ್‌ ಅನ್ನು ಈ ಆಪ್ ಪ್ರದರ್ಶಿಸಿತ್ತು. ಕೆಲವು ದೂರುಗಳು ಸಹ ಈ ಆಪ್‌ ವಿರುದ್ಧ ಮಾಡಲಾಗಿದೆ.

    ರಾಜ್ ಕುಂದ್ರಾ ಬಂಧನವಾದ ಬಳಿಕ 'ಉಲ್ಲು' ವಿಷಯವೂ ಚರ್ಚೆಗೆ ಬಂದಿದೆ. ರಾಜ್ ಕುಂದ್ರಾ 'ಹಾಟ್ ಶಾಟ್ಸ್'ಗಾಗಿ ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿದಂತೆಯೇ 'ಉಲ್ಲು' ಆಪ್‌ಗಾಗಿಯೂ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಆದರೆ ಈ ಆಪ್‌ನಲ್ಲಿ ಸಾಫ್ಟ್‌ ಪೋರ್ನ್ ವಿಭಾಗದಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಬಳಕೆದಾರರು ತಿಂಗಳು ಅಥವಾ ವಾರ್ಷಿಕ ಚಂದಾದಾರಿಕೆ ಹಣ ತೆತ್ತು ಇದರಲ್ಲಿ ಚಿತ್ರಗಳು, ವೆಬ್ ಸರಣಿಗಳನ್ನು ವೀಕ್ಷಿಸಬೇಕಾಗುತ್ತದೆ.

    English summary
    Molestation complaint lodged against Ullu App CEO and some other head officials of the App by former employee. Ullu released a statement regarding complaint.
    Friday, August 6, 2021, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X