'ಮನಿಹೈಸ್ಟ್' ಪಾತ್ರಗಳಿಗೆ ಭಾರತೀಯ ಸ್ಟಾರ್‌ಗಳನ್ನು ಆರಿಸಿದ ನಿರ್ದೇಶಕ ಅಲೆಕ್ಸ್ ರೋಡ್ರಿಗೊ
'ಮನಿ ಹೈಸ್ಟ್' ಎಂಬ ಟಿವಿ ಶೋ ವಿಶ್ವದಾದ್ಯಂತ ಎಷ್ಟು ದೊಡ್ಡ ಹಿಟ್ ಆಗಿದೆಯೆಂದರೆ ಅದನ್ನು ನಂಬರ್ 1 ಟಿವಿ ಶೋ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವೇ ಆಗುತ್ತಿಲ್ಲ.
Recommended Video
ಫ್ರಾನ್ಸ್‌ನಲ್ಲಿ ಸಣ್ಣ ಬಜೆಟ್‌ನಲ್ಲಿ ಪ್ರಾರಂಭವಾದ ಟಿವಿ ಶೋ ನೆಟ್‌ಫ್ಲಿಕ್ಸ್ ಮೂಲಕ ವಿಶ್ವದಾದ್ಯಂತ ಜನಪ್ರಿಯವಾಯಿತು. ಇದರ ಇಂಗ್ಲಿಷ್ ಅವತರಣಿಕೆ ಭಾರತದ ನೆಟ್‌ಫ್ಲಿಕ್ಸ್‌ನಲ್ಲೂ ನಂಬರ್ 1 ಶೋ ಆಗಿ ಮಿಂಚಿತು.
ಮನಿಹೈಸ್ಟ್ ಸೃಷ್ಟಿಸಿರುವ ಪಾತ್ರಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆದಿವೆ. ಭಾರತದ ಸಾಮಾನ್ಯ ತಾಲ್ಲೂಕು ಕೇಂದ್ರಗಳಲ್ಲೂ ಹುಡುಗರು ಗಾಡಿಗಳ ಮೇಲೆ ಮನಿಹೈಸ್ಟ್ ಪಾತ್ರವಾದ ಫ್ರೊಫೆಸರ್, ಬರ್ಲಿನ್, ಟೋಕಿಯೋ ಚಿತ್ರಗಳನ್ನು ಹಾಕಿಕೊಂಡು ತಿರುತ್ತಿದ್ದಾರೆ.
ಇಂಥಹಾ ಮನಿಹೈಸ್ಟ್ ವೆಬ್ ಸೀರೀಸ್ ನ ನಿರ್ದೇಶಕ ಅಲೆಕ್ಸ್ ರೋಡ್ರಿಗೊ ತಾನು ಸೃಷ್ಟಿಸಿದ ಪಾತ್ರಗಳಿಗೆ ಭಾರತದ ಯಾವ ಸ್ಟಾರ್ ನಟರು ಸೂಕ್ತವಾಗುತ್ತಾರೆ ಎಂದು ಇತ್ತೀಚಿಗೆ ನಡೆದ ಆನ್‌ಲೈನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಯಾವ ಸ್ಟಾರ್ ನಟರನ್ನು ಯಾವ ಪಾತ್ರಕ್ಕೆ ನಿರ್ದೇಶಕ ಅಲೆಕ್ಸ್ ಆರಿಸಿದ್ದಾರೆ ತಿಳಿಯಲು ಮುಂದೆ ಓದಿ...

ಫ್ರೊಫೆಸರ್ ಪಾತ್ರಕ್ಕೆ ವಿಜಯ್ ಸೂಕ್ತವಂತೆ
ಮನಿಹೈಸ್ಟ್‌ನ ಅತಿಪ್ರಮುಖ ಪಾತ್ರವಾದ ಫ್ರೊಫೆಸರ್ ಪಾತ್ರಕ್ಕೆ ತಮಿಳು ಚಿತ್ರರಂಗದ ಜನಪ್ರಿಯ ನಾಯಕ ವಿಜಯ್ ಅವರನ್ನು ಆಯ್ಕೆ ಮಾಡಿದ್ದಾರೆ ಅಲೆಕ್ಸ್. ಅವರ ಮುಖ ಫ್ರೊಫೆಸರ್ ಪಾತ್ರಧಾರಿ ಅಲ್ವಾರೊ ಮೊರ್ಟೆ ಅವರೊಂದಿಗೆ ಹೋಲುತ್ತದೆಯಂತೆ.

ಬರ್ಲಿನ್ ಪಾತ್ರಕ್ಕೆ ಶಾರುಖ್ ಖಾನ್
ಮನಿಹೈಸ್ಟ್‌ನ ಮತ್ತೊಂದು ಪ್ರಮುಖ ಹಾಗೂ ಜನಪ್ರಿಯ ಪಾತ್ರ ಬರ್ಲಿನ್. ರಾಬರಿ ಸಂದರ್ಭದಲ್ಲಿ ಗುಂಪಿನ ನಾಯಕನಾಗಿ ತನ್ನ ವಿಕ್ಷಿಪ್ತ ಆದರೆ ಭಿನ್ನ ಆಲೋಚನೆಗಳ ಮೂಲಕ ನೋಡುಗರಲ್ಲಿ ಗೊಂದಲ ಭಾವ ಮೂಡಿಸುವ ಈ ಪಾತ್ರಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅನ್ನು ಆರಿಸಿದ್ದಾರೆ ಅಲೆಕ್ಸ್. ಪಲೆಮ್ರೋ ಪಾತ್ರ ಸಹ ಶಾರುಖ್ ಗೆ ಸೂಟ್ ಆಗುತ್ತೆ ಎಂದಿದ್ದಾರೆ ನಿರ್ದೇಶಕ.

ರಣ್ವೀರ್ ಸಿಂಗ್ ಗೆ ಡೆನ್ವರ್ ಪಾತ್ರ
ಬಾಲಿವುಡ್ ನಟ ರಣ್ವೀರ್ ಸಿಂಗ್ ಗೆ ಡೆನ್ವರ್ ಪಾತ್ರ ನೀಡುತ್ತಾರಂತೆ ಅಲೆಕ್ಸ್. ಡೆನ್ವರ್ ಪಾತ್ರ ಸ್ವಲ್ಪ ತಮಾಷೆಯ, ಖುಷಿಯ ಪಾತ್ರವಾಗಿದ್ದು ಅದಕ್ಕೆ ರಣ್ವೀರ್ ಚೆನ್ನಾಗಿ ಸೂಟ್ ಆಗುತ್ತಾರೆ ಎನ್ನುತ್ತಾರೆ ನಿರ್ದೇಶಕ ಅಲೆಕ್ಸ್.

ಸೂರ್ಯಾ-ಮಹೇಶ್ ಬಾಬು ಗೆ ಪೊಲೀಸ್ ಪಾತ್ರ
ನಟ ಸೂರ್ಯಾ ಗೆ ಖಡಕ್ ಪೊಲೀಸ್ ಅಧಿಕಾರಿ ಸ್ವಾರೆಸ್ ಪಾತ್ರ ನೀಡಿದರೆ, ಕ್ಯೂಟ್ ನಟ ಮಹೇಶ್ ಬಾಬು ಗೆ ಹಿರಿಯ ಪೊಲೀಸ್ ಅಧಿಕಾರಿ ತಮಯ್ಯೋ ಪಾತ್ರ ಕೊಡುತ್ತಾರಂತೆ. ಅಜಿತ್ ಗೆ ಬೊಗೊತಾ ಪಾತ್ರ ಒಪ್ಪುತ್ತದೆ ಎಂದಿದ್ದಾರೆ ಅಲೆಕ್ಸ್.

ಫ್ರೊಪೆಸರ್ ಪಾತ್ರಕ್ಕೆ ಮೊದಲ ಆಯ್ಕೆ ಆಯುಷ್ಮಾನ್ ಖುರಾನಾ
ಸಂದರ್ಶಕ ಮೇಲಿನ ನಟರ ಚಿತ್ರಗಳನ್ನು ತೋರಿಸಿದ ಕಾರಣಕ್ಕೆ ಅಲೆಕ್ಸ್ ಅವರನ್ನೇ ಆಯ್ದುಕೊಂಡರು. ಆದರೆ ಚಿತ್ರಗಳನ್ನು ತೋರಿಸುವುದಕ್ಕೆ ಮೊದಲೇ ಅವರು ಹೇಳಿದ್ದು, ಭಾರತೀಯ ನಟರಲ್ಲಿ ನಾನು ಆಯುಷ್ಮಾನ್ ಖುರಾನಾ ಅನ್ನು ಫ್ರೊಫೆಸರ್ ಪಾತ್ರಕ್ಕೆ ಆರಿಸುತ್ತೇನೆ ಎಂದು.


Click it and Unblock the Notifications











