ಭರ್ಜರಿ ಟೀಸರ್‌ನೊಂದಿಗೆ 'ಮನಿ ಹೈಸ್ಟ್' ಸೀಸನ್ 5 ಬಿಡುಗಡೆ ದಿನಾಂಕ ಪ್ರಕಟ

ವಿಶ್ವದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾದ 'ಮನಿ ಹೈಸ್ಟ್' ಸೀಸನ್ 5ರ ಬಿಡುಗಡೆ ದಿನಾಂಕವನ್ನು ನೆಟ್‌ಫ್ಲಿಕ್ಸ್ ಪ್ರಕಟಿಸಿದೆ.

ಟೀಸರ್‌ ಬಿಡುಗಡೆ ಮಾಡುವ ಮೂಲಕ ವೆಬ್ ಸರಣಿಯ ಬಿಡುಗಡೆ ದಿನಾಂಕ ಪ್ರಕಟಿಸಲಾಗಿದ್ದು, 'ಮನಿ ಹೈಸ್ಟ್' ಸೀಸನ್ 5 ಸೆಪ್ಟೆಂಬರ್ 3 ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಮನಿಹೈಸ್ಟ್‌ನ ಐದನೇ ಸೀಸನ್‌ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ವಾಲ್ಯುಮ್ ಸೆಪ್ಟೆಂಬರ್ 3 ಕ್ಕೆ ಎರಡನೇ ವಾಲ್ಯುಮ್ ಡಿಸೆಂಬರ್ 03ಕ್ಕೆ ಬಿಡುಗಡೆ ಆಗಲಿದೆ.

ಈವರೆಗೆ ನಾಲ್ಕು ಸೀಸನ್ ಪ್ರಸಾರವಾಗಿದ್ದು 'ಮನಿಹೈಸ್ಟ್' ನೆಟ್‌ಫ್ಲಿಕ್ಸ್‌ನ ನಂಬರ್ 1 ವೆಬ್ ಸರಣಿ ಆಗಿದೆ. ಭಾರತದಲ್ಲಿಯೂ ಕೋಟ್ಯಂತರ ಅಭಿಮಾನಿಗಳು ಈ ವೆಬ್ ಸರಣಿಗೆ ಇದ್ದಾರೆ.

Money Heist Season 05 Release Date Announce

ಐದನೇ ಸರಣಿಯು 'ಮನಿ ಹೈಸ್ಟ್' ಸರಣಿಯ ಕೊನೆಯ ಸರಣಿ ಆಗಿರಲಿದೆ ಎಂದು ಈ ಹಿಂದೆಯೇ ನಿರ್ದೇಶಕ ಅಲೆಕ್ಸ್ ಪೀನ್ಯಾ ಹೇಳಿದ್ದರು. ಇದೀಗ ಬಿಡುಗಡೆ ಮಾಡಲಾಗಿರುವ ಟೀಸರ್‌ ಸಹ ಅದನ್ನೇ ಸೂಚಿಸುತ್ತಿದೆ. ದರೋಡೆಯಲ್ಲಿರುವ ಮನಿಹೈಸ್ಟ್ ತಂಡದ ಮೇಲೆ ಪೊಲೀಸರು ದಾಳಿ ಮಾಡಿರುವ ದೃಶ್ಯಗಳು, ಪ್ರೊಫೆಸರ್ ಕಣ್ಣೀರು ದುಃಖದಲ್ಲಿ ಕಣ್ಣೀರು ಸುರಿಸುತ್ತಿರುವ ದೃಶ್ಯಗಳು ಟೀಸರ್‌ನಲ್ಲಿದೆ.

ಸೀಸನ್‌ ನಾಲ್ಕರಲ್ಲಿ 'ಮನಿ ಹೈಸ್ಟ್' ತಂಡ ಬ್ಯಾಂಕ್ ಆಫ್ ಸ್ಪೇನ್‌ ಅನ್ನು ದೋಚಲು ಬ್ಯಾಂಕ್‌ನ ಒಳಗೆ ಹೋಗಿದ್ದಾರೆ. ಪ್ರೊಫೆಸರ್‌ನ ಪ್ರಿಯತಮೆ ರಾಕೆಲ್ ಮರಿಯೋ ಪೊಲೀಸರ ವಶದಲ್ಲಿದ್ದಾಳೆ. ಪ್ರೊಫೆಸರ್ ಸಹ ಹಲವಾರು ಕಷ್ಟಗಳನ್ನು ಪಟ್ಟು ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಎಲ್ಲರೂ ಪೊಲೀಸರ ಕೈ ಮೇಲಾಯಿತು ಎಂದುಕೊಳ್ಳುವಷ್ಟರಲ್ಲಿ ಪ್ರೊಫೆಸರ್ ಹೊಸ ಆಟ ಆಡಿ ರಾಕೆಲ್ ಅನ್ನು ಬಿಡಿಸಿಕೊಳ್ಳುತ್ತಾನೆ. ತಾನು ರಾಕೆಲ್ ಅನ್ನು ಭೇಟಿಯಾಗಲು ಹೊರಡಬೇಕು ಎಂದುಕೊಳ್ಳುವಷ್ಟರಲ್ಲಿ ಅಮಾನತ್ತಾದ ಪೊಲೀಸ್ ಅಧಿಕಾರಿ ಪ್ರೊಫೆಸರ್ ಅನ್ನು ಪತ್ತೆ ಹಚ್ಚುತ್ತಾಳೆ. ಇಷ್ಟಕ್ಕೆ ನಾಲ್ಕನೇ ಸೀಸನ್ ಅಂತ್ಯವಾಗಿದೆ. ಐದನೇ ಸೀಸನ್‌ ಅಲ್ಲಿಂದಲೇ ಶುರುವಾಗಲಿದೆ.

More from Filmibeat

English summary
Money Heist season 05 release date announce by Netflix. Web series will be released on September 03.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X